Home ದಾವಣಗೆರೆ ದೊಡ್ಡ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್: ಗುಜರಾತ್ ಎಟಿಎಸ್‌ನಿಂದ 8 ಜೈಶ್-ಎ-ಮೊಹಮ್ಮದ್ ಉಗ್ರರ ಅರೆಸ್ಟ್
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ದೊಡ್ಡ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್: ಗುಜರಾತ್ ಎಟಿಎಸ್‌ನಿಂದ 8 ಜೈಶ್-ಎ-ಮೊಹಮ್ಮದ್ ಉಗ್ರರ ಅರೆಸ್ಟ್

Share
ಗುಜರಾತ್
Share

ಗಾಂಧಿನಗರ: ಗುಜರಾತ್‌ನಲ್ಲಿ ದೊಡ್ಡ ಮಟ್ಟದ ಭಯೋತ್ಪಾದನಾ ಜಾಲವನ್ನು ವಿಸ್ತರಿಸಲು ಯತ್ನಿಸುತ್ತಿದ್ದ ಪಾಕಿಸ್ತಾನ ಮೂಲದ ನಿಷೇಧಿತ ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಎಂಟು ಮಂದಿ ಶಂಕಿತ ಉಗ್ರರನ್ನು ಗುಜರಾತ್ ಭಯೋತ್ಪಾದನಾ ನಿರೋಧಕ ದಳ (ATS) ಬಂಧಿಸಿದೆ. ಯಾವುದೇ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ಅಥವಾ ದಾಳಿ ನಡೆಯುವ ಮುನ್ನವೇ ಎಟಿಎಸ್ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿ ಉಗ್ರರ ಸಂಚನ್ನು ವಿಫಲಗೊಳಿಸಿದ್ದಾರೆ.

ಬಂಧಿತರು ಕಳೆದ ಆರು ತಿಂಗಳಿನಿಂದ ಗುಜರಾತ್‌ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘಟನೆಯ ನೆಟ್‌ವರ್ಕ್ ಅನ್ನು ಬಲಪಡಿಸಲು ಯತ್ನಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಂಟು ಆರೋಪಿಗಳ ಪೈಕಿ ಏಳು ಜನರನ್ನು ಗುಜರಾತ್‌ನ ವಿವಿಧ ಜಿಲ್ಲೆಗಳಿಂದ (ಬನಸ್ಕಾಂತದಲ್ಲಿ 3, ಪಟನ್‌ನಲ್ಲಿ 3, ನವಸಾರಿಯಲ್ಲಿ 1) ಮತ್ತು ಒಬ್ಬನನ್ನು ನೆರೆಯ ಮಧ್ಯಪ್ರದೇಶದ ದೇವಾಸ್‌ನಿಂದ ಬಂಧಿಸಲಾಗಿದೆ.

ಬಂಧಿತರನ್ನು ಅಹ್ಮದ್ ಅಬ್ದುಲ್ಲಾ ಗಾಜಿವಾಲಾ, ಇಬ್ರಾಹಿಂ ಮೊಹಮ್ಮದ್ ಹುಸೇನ್ ಗಾಗಾ, ಮುದಸ್ಸಿರ್ ಅಬ್ದುಲ್ಲಾ ಗಾಜಿವಾಲಾ, ಜಕರಿಯಾ ದುರಾನಿ, ಮುಫ್ತಿ ಫೌಜಾನ್ ಇಸ್ಮಾಯಿಲ್ ದೌವಾ, ಮೊಹಮ್ಮದ್ ಅಮೀನ್ ಶೇರಾ, ಮೊಹಮ್ಮದ್ ಅಬ್ದುಲ್ ರೆಹಮಾನ್ ಸಾವ್ಡಿ ಮತ್ತು ಬಿಲಾಲ್ ದುರಾನಿ ಎಂದು ಗುರುತಿಸಲಾಗಿದೆ.

ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA), 1967 ರ ಅಡಿಯಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಹಣ ಸಂಗ್ರಹಣೆ, ಪಿತೂರಿ ಮತ್ತು ಭಯೋತ್ಪಾದಕ ಸಂಘಟನೆಗೆ ಬೆಂಬಲ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರಿದ ಆರೋಪದಡಿ ಭಾರತೀಯ ನ್ಯಾಯ ಸಂಹಿತೆ (BNS), 2023 ರ ಅಡಿಯಲ್ಲೂ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಸದ್ಯ ತನಿಖೆ ಮುಂದುವರಿದಿದೆ.

Share

Leave a comment

Leave a Reply

Your email address will not be published. Required fields are marked *

Related Articles