
ನವದೆಹಲಿ: ಬಾಲಿವುಡ್‌ನ ದಿಗ್ಗಜ ನಟಿ ಶ್ರೀದೇವಿ ಮತ್ತು ಹಿರಿಯ ನಟ ಮಿಥುನ್ ಚಕ್ರವರ್ತಿ ಅವರ ಹಿಂದಿನ ದಿನಗಳ ರೋಚಕ ಸಂಬಂಧದ ಬಗ್ಗೆ ಖ್ಯಾತ ಸಿನಿಮಾಟೋಗ್ರಾಫರ್ ಹಾಗೂ ನಿರ್ದೇಶಕ ಲಾರೆನ್ಸ್ ಡಿಸೋಜಾ ಆಸಕ್ತಿದಾಯಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
1989ರ ‘ಗೈರ್ ಕಾನೂನಿ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಮಿಥುನ್ ಚಕ್ರವರ್ತಿ ಅವರು ಆಗಾಗ ಶ್ರೀದೇವಿಯವರ ಮೇಕ್-ಅಪ್ ರೂಮ್‌ನಲ್ಲಿ ಬಂದು ಕುಳಿತುಕೊಳ್ಳುತ್ತಿದ್ದರು ಮತ್ತು ಚಿತ್ರೀಕರಣದ ನಡುವೆಯೂ ಅವರಿಗೆ ಪದೇ ಪದೇ ಫೋನ್ ಮಾಡುತ್ತಿದ್ದರು ಎಂದು ಲಾರೆನ್ಸ್ ಸ್ಮರಿಸಿದ್ದಾರೆ.
ಆ ಕಾಲದಲ್ಲಿ ಮಿಥುನ್ ಚಕ್ರವರ್ತಿ ಅವರಿಗೆ ಯೋಗಿತಾ‘ಅವರೊಂದಿಗೆ ಮದುವೆಯಾಗಿದ್ದರೂ, ಅವರ ಮತ್ತು ಶ್ರೀದೇವಿ ನಡುವಿನ ಪ್ರೀತಿಯ ಗುಸುಗುಸು ಎಲ್ಲರಿಗೂ ತಿಳಿದಿತ್ತು ಎಂದು ಲಾರೆನ್ಸ್ ಸಿದ್ಧಾರ್ಥ್ ಕಣ್ಣನ್ ಅವರ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಸೆಟ್‌ನಲ್ಲಿ ತಾವೇ ಸ್ವತಃ ಕಂಡ ಸತ್ಯಗಳನ್ನು ಮಾತ್ರ ಹಂಚಿಕೊಳ್ಳುತ್ತಿರುವುದಾಗಿ ಸ್ಪಷ್ಟಪಡಿಸಿರುವ ಅವರು, ಚಿತ್ರೀಕರಣದ ವೇಳೆ ಶ್ರೀದೇವಿ ತುಂಬಾ ಸೌಮ್ಯ ಸ್ವಭಾವದವರಾಗಿದ್ದು, ಎಲ್ಲರೊಂದಿಗೆ ಹೆಚ್ಚು ಬೆರೆಯದೆ ತಮ್ಮ ಪಾಡಿಗೆ ತಾವು ಇರುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಹಳೆಯ ನೆನಪುಗಳ ಮೆಲುಕು: ‘ಗೈರ್ ಕಾನೂನಿ’ ಚಿತ್ರದ ಶೂಟಿಂಗ್ ವೇಳೆ ಮಿಥುನ್ ಚಕ್ರವರ್ತಿ ಅವರು ಶ್ರೀದೇವಿಯ ಮೇಕ್-ಅಪ್ ರೂಮ್‌ನಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದರು ಎಂದು ಸಿನಿಮಾಟೋಗ್ರಾಫರ್ ಲಾರೆನ್ಸ್ ಡಿಸೋಜಾ ಬಹಿರಂಗಪಡಿಸಿದ್ದಾರೆ.
ವೈಯಕ್ತಿಕ ಬಾಂಧವ್ಯದ ಗುಟ್ಟು: ಮಿಥುನ್ ಅವರಿಗೆ ಮದುವೆಯಾಗಿದ್ದರೂ, ಆ ಕಾಲದಲ್ಲಿ ಇಬ್ಬರ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿತ್ತು ಎಂದು ಲಾರೆನ್ಸ್ ಸ್ಪಷ್ಟಪಡಿಸಿದ್ದಾರೆ.
ಶ್ರೀದೇವಿಯ ಸರಳ ಸ್ವಭಾವ: ಶೂಟಿಂಗ್ ಸೆಟ್‌ನಲ್ಲಿ ಶ್ರೀದೇವಿ ಅತ್ಯಂತ ಸರಳವಾಗಿಯೇ ಇರುತ್ತಿದ್ದರು. ತುಂಬಾ ರಿಸರ್ವ್ಡ್ ಆಗಿರುತ್ತಿದ್ದರು ಎಂದು ಲಾರೆನ್ಸ್ ತಿಳಿಸಿದ್ದಾರೆ.
80ರ ದಶಕದಲ್ಲಿ ತೆರೆಮೇಲೆ ಮತ್ತು ತೆರೆಮರೆಯಲ್ಲಿ ಸಖತ್ ಸೌಂಡ್ ಮಾಡಿದ್ದ ಈ ಜೋಡಿಯ ವಿಚಾರ ಈಗ ಮತ್ತೆ ಬಾಲಿವುಡ್ ವಲಯದಲ್ಲಿ ಮುನ್ನೆಲೆಗೆ ಬಂದಿದೆ. ನಂತರದ ದಿನಗಳಲ್ಲಿ ಶ್ರೀದೇವಿ ಅವರು ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದರು ಎಂಬುದು ಗಮನಾರ್ಹ.




