SUDDIKSHANA KANNADA NEWS/ DAVANAGERE/ DATE:20-06-2024
ದಾವಣಗೆರೆ: ಗೃಹಲಕ್ಷ್ಮೀ ಗ್ಯಾರಂಟಿ ಅಡೆತಡೆ ನಿವಾರಣೆಗೆ ಹೆಲ್ಪ್ ಡೆಸ್ಕ್ ಆರಂಭಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿ ಇದುವರೆವಿಗೂ ಸಹಾಯಧನ ಪಾವತಿ ಆಗದೇ ಇದ್ದಲ್ಲಿ, ಸಂಬಂಧಪಟ್ಟ ಫಲಾನುಭವಿಗಳು ಆಯಾ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ತೆರೆಳಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹಾಗೂ ಕಾರಣಾಂತರಗಳಿಂದ ಗೃಹಲಕ್ಷ್ಮಿ ಯೋಜನೆಗೆ ನೊಂದಣಿ ಮಾಡಿಕೊಳ್ಳದೇ ಇರುವ ಫಲಾನುಭವಿಗಳು ಗ್ರಾಮ ಒನ್, ಸೇವಾ ಸಿಂಧೂ ಕೇಂದ್ರಗಳಲ್ಲಿ ನೊಂದಾಯಿಸಿಕೊಳ್ಳಬಹುದು.
ಸಂಪರ್ಕಿಸಬೇಕಾದ ವಿಳಾಸ: ದಾವಣಗೆರೆ ದುರ್ಗಾಂಬಿಕ ಶಾಲೆ ಹತ್ತಿರವಿರುವ ಶಿಶು ಅಭಿವೃದ್ದಿ ಯೋಜನಾಧಿಕಾರಗಳ ಕಚೇರಿಯ ತುಷಾರ್ 9380629266, ಹರಿಹರ ಶಿವಮೊಗ್ಗ ರಸ್ತೆ ಪಿಎಲ್ಡಿ ಬ್ಯಾಂಕ್ ನೆಲಮಹಡಿ ಕಿರಣ್ 9731262426, ಜಗಳೂರು ತಾಲ್ಲೂಕು ಪಂಚಾಯಿತಿ ಆವರಣದ ಸ್ತ್ರೀಶಕ್ತಿ ಭವನದಲ್ಲಿ ಈಶ್ವರ 9740192819, ಹೊನ್ನಾಳಿಯಲ್ಲಿ ಟಿಎಂ ರಸ್ತೆಯಲ್ಲಿನ ಮಲ್ಲಪ್ಪ ಕಾಂಪ್ಲೆಕ್ಸ್ನಲ್ಲಿರುವ ಕಚೇರಿಯಲ್ಲಿ ಸುದೀಪ್ 9844019027, ಚನ್ನಗಿರಿ ಶಿವಮೊಗ್ಗ ರಸ್ತೆಯಲ್ಲಿನ ಜಿ.ಎಂ.ಕಾಂಪ್ಲೆಕ್ಸ್ನಲ್ಲಿನ ಕಚೇರಿಯಲ್ಲಿ ಶಿವಣ್ಣ 9686601791 ಇವರನ್ನು ಅಥವಾ ಆಯಾ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಿಕಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ.