Home ಕ್ರೈಂ ನ್ಯೂಸ್ ಮೂರು ವರ್ಷದ ಮಗುವಿಗೆ ಥಳಿಸಿ ಕ್ರೌರ್ಯ ಮೆರೆದ ಪ್ಲೇ ಸ್ಕೂಲ್ ಶಿಕ್ಷಕಿ: ಸಿಸಿಟಿವಿ ದೃಶ್ಯಾವಳಿಯಿಂದ ಬೆಳಕಿಗೆ ಬಂತು ಕೇಸ್!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಮೂರು ವರ್ಷದ ಮಗುವಿಗೆ ಥಳಿಸಿ ಕ್ರೌರ್ಯ ಮೆರೆದ ಪ್ಲೇ ಸ್ಕೂಲ್ ಶಿಕ್ಷಕಿ: ಸಿಸಿಟಿವಿ ದೃಶ್ಯಾವಳಿಯಿಂದ ಬೆಳಕಿಗೆ ಬಂತು ಕೇಸ್!

Share
ಮಗು
Share

ಗೋರಖ್ ಪುರ: ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಮೂರು ವರ್ಷದ ಹಸುಗೂಸಿನ ಮೇಲೆ ಪ್ಲೇ-ಸ್ಕೂಲ್  ಶಿಕ್ಷಕಿಯೊಬ್ಬರು ಕ್ರೌರ್ಯ ಮೆರೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಮಗುವನ್ನು ಕಪಾಳಮೋಕ್ಷ ಮಾಡಿ, ತಲೆಯನ್ನು ಉಗುರುಗಳಿಂದ ಕೆದರಿ ಹಿಂಸಿಸಲಾಗಿದೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಬಾಲಕನ ತಂದೆ ಶಾಹಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಘಟನೆಯ ಹಿನ್ನೆಲೆ:

ಗೋಖರಪುರದ ಗೋವಿಂದಪುರಿ ಕಾಲೋನಿ ನಿವಾಸಿ ಅತುಲ್ ಸಿಂಗ್ ಮತ್ತು ಸಾಲ್ವಿ ಸಿಂಗ್ ದಂಪತಿಯ ಮೂರು ವರ್ಷದ ಕಿರಿಯ ಮಗುವನ್ನು ಕಳೆದ ಜುಲೈ ತಿಂಗಳಲ್ಲಿ ಸ್ಥಳೀಯ ಪ್ಲೇ-ಶಾಲೆಗೆ ಸೇರಿಸಲಾಗಿತ್ತು. ಮಗು ಶಾಲೆಗೆ ಹೋಗುವ ಹೆಸರನ್ನು ಕೇಳಿದಾಗಲೆಲ್ಲಾ ಭಯದಿಂದ ಅಳುತ್ತಿತ್ತು. ಆದರೆ ಪೋಷಕರಿಗೆ ಆರಂಭದಲ್ಲಿ ಇದರ ಅಸಲಿ ಕಾರಣ ತಿಳಿದಿರಲಿಲ್ಲ.

ನಾಲ್ಕು ದಿನಗಳ ಹಿಂದೆ ಶಾಲೆ ಸಿಬ್ಬಂದಿಯಿಂದ ಪೋಷಕರ ವೀಡಿಯೊ ಕರೆ ಬಂದಿದ್ದು, ಅದರಲ್ಲಿ ಮಗು ಭಯದಿಂದ ನಡುಗುತ್ತಾ ಅಳುತ್ತಿರುವುದು ಕಂಡುಬಂದಿದೆ. ಮಗು ಊಟ ಮಾಡುತ್ತಿಲ್ಲ ಎಂದು ಶಿಕ್ಷಕಿ ತಿಳಿಸಿದ್ದು, ಊಟ ಮಾಡದ ಕಾರಣಕ್ಕೆ ಬಲವಂತವಾಗಿ ಬಾಯಿಗೆ ರೊಟ್ಟಿ ತುರುಕಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ತಕ್ಷಣವೇ ಶಾಲೆಗೆ ದೌಡಾಯಿಸಿದ ಪೋಷಕರು ಮಗುವನ್ನು ಮನೆಗೆ ಕರೆತಂದರು.

ಸಿಸಿಟಿವಿ ದೃಶ್ಯಾವಳಿಯಲ್ಲಿ ಬಹಿರಂಗ:

ಮಗುವಿನ ತಾಯಿ ಸಾಲ್ವಿ ಸಿಂಗ್ ಮಾತನಾಡಿ, “ಮಗು ಮನೆಗೆ ಬಂದ ನಂತರ ಶಾಲೆಯಲ್ಲಿ ಶಿಕ್ಷಕಿ ಹೊಡೆದಿರುವುದಾಗಿ ತಿಳಿಸಿತು. ಅಲ್ಲದೆ, ಮಗುವಿನ ತಲೆಯ ಮೇಲೆ ಉಗುರಿನಿಂದ ಪರಚಿದ ಗಾಯದ ಗುರುತುಗಳಿದ್ದವು. ಶಾಲೆಯ ಹೆಸರು ಕೇಳಿದ ಕೂಡಲೇ ಮಗು ಹೆದರಿ ಕರಗಿಹೋಗುತ್ತದೆ ಮತ್ತು ಜೋರಾಗಿ ಕಿರುಚಾಡುತ್ತದೆ” ಎಂದು ಅಳಲು ತೋಡಿಕೊಂಡಿದ್ದಾರೆ.

ಮರುದಿನ ಶಾಲೆಗೆ ತೆರಳಿ ಸಿಸಿಟಿವಿ (CCTV) ದೃಶ್ಯ ಪರಿಶೀಲಿಸಿದಾಗ, ಶಿಕ್ಷಕಿ ಮಗುವಿಗೆ ಕಪಾಳಮೋಕ್ಷ ಮಾಡುವುದು ಮತ್ತು ತಲೆಯನ್ನು ಉಗುರುಗಳಿಂದ ಪರಚುವುದು ಸ್ಪಷ್ಟವಾಗಿ ಕಂಡುಬಂದಿದೆ ಎಂದು ತಂದೆ ಅತುಲ್ ಸಿಂಗ್ ತಿಳಿಸಿದ್ದಾರೆ.

ಪ್ರಾಂಶುಪಾಲರಿಂದ ಬೆದರಿಕೆ ಹಾಗೂ ಪೊಲೀಸ್ ತನಿಖೆ:

ಇತರ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಒಂದು ತಿಂಗಳ ಸಂಪೂರ್ಣ ಸಿಸಿಟಿವಿ ದೃಶ್ಯಾವಳಿಯನ್ನು ಒದಗಿಸುವಂತೆ ಪೋಷಕರು ಪ್ರಾಂಶುಪಾಲರನ್ನು ಕೋರಿದ್ದಾರೆ. ಆದರೆ ಪ್ರಾಂಶುಪಾಲರು ಕೋಪಗೊಂಡು, “ಏನು ಬೇಕಾದರೂ ಮಾಡಿಕೊಳ್ಳಿ, ಶಾಲೆಯಿಂದ ನಿಮಗೆ ಏನು ಸಿಗುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಈ ಕುರಿತು ಶಾಹಪುರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಾಗಿದ್ದು, ಠಾಣಾಧಿಕಾರಿ ಅಂಜಯ್ ಸಿಂಗ್ ನೇತೃತ್ವದಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Share

Leave a comment

Leave a Reply

Your email address will not be published. Required fields are marked *

Related Articles