ಸೆಪ್ಟೆಂಬರ್ 1, 2026: ದೇಶದ ಆಭರಣ ಮಾರುಕಟ್ಟೆಯಲ್ಲಿ ಚಿನ್ನ ಖರೀದಿಸಲು ಯೋಚಿಸುತ್ತಿರುವ ಗ್ರಾಹಕರಿಗೆ ಇಂದು ಮಹತ್ವದ ಹಾಗೂ ಸಮಾಧಾನಕರ ಸುದ್ದಿಯೊಂದು ಸಿಕ್ಕಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಮತ್ತು ಹೂಡಿಕೆದಾರರ ಪ್ರಾಫಿಟ್ ಬುಕಿಂಗ್ ಪ್ರವೃತ್ತಿಯಿಂದಾಗಿ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿದೆ.
ಪ್ರಮುಖ ಮಹಾನಗರಗಳಾದ ಬೆಂಗಳೂರು, ಮುಂಬೈ ಹಾಗೂ ಚೆನ್ನೈ ಮಾರುಕಟ್ಟೆಗಳಲ್ಲಿ ಇಂದಿನ ಚಿನ್ನದ ದರ ವಿವರ ಹೀಗಿದೆ:
22 ಕ್ಯಾರೆಟ್ ಆಭರಣ ಚಿನ್ನ:
ಪ್ರತಿ 1 ಗ್ರಾಂಗೆ ₹14,385 ಇದ್ದು, 10 ಗ್ರಾಂಗೆ ₹1,43,850 ವಿದೆ.
24 ಕ್ಯಾರೆಟ್ ಅಪರಂಜಿ ಚಿನ್ನ:
ಪ್ರತಿ 1 ಗ್ರಾಂಗೆ ₹15,693 ಇದ್ದು, 10 ಗ್ರಾಂಗೆ ₹1,56,930 ವಿದೆ.
18 ಕ್ಯಾರೆಟ್ ಚಿನ್ನ:
ಪ್ರತಿ 1 ಗ್ರಾಂಗೆ ₹1,17,730 (10 ಗ್ರಾಂಗೆ) ವಹಿವಾಟು ನಡೆಸುತ್ತಿದೆ.
ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣಗಳು:
ಕಳೆದ ಕೆಲವು ವಾರಗಳಿಂದ ಸತತವಾಗಿ ಏರಿಕೆಯಾಗುತ್ತಾ ಸಾಗಿದ್ದ ಹಳದಿ ಲೋಹದ ಬೆಲೆಯಲ್ಲಿ, ಮಾರುಕಟ್ಟೆ ತಜ್ಞರು ನಿರೀಕ್ಷಿಸಿದಂತೆ ಬಂಡವಾಳ ಹಿಂಪಡೆಯುವಿಕೆ ಹಾಗೂ ಜಾಗತಿಕ ಸೂಚ್ಯಂಕಗಳ ವ್ಯತ್ಯಾಸದಿಂದಾಗಿ ಈ ಅಲ್ಪ ಹಿನ್ನಡೆ ಉಂಟಾಗಿದೆ. ಎಂಸಿಎಕ್ಸ್ (MCX) ಮಾರುಕಟ್ಟೆಯಲ್ಲೂ ಕೂಡ ಚಿನ್ನದ ಫ್ಯೂಚರ್ಸ್ ಬೆಲೆಯಲ್ಲಿ ಇಳಿಕೆಯಾಗಿದ್ದು, ಇದು ನೇರವಾಗಿ ಚಿಲ್ಲರೆ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ.
ಆಭರಣ ಖರೀದಿದಾರರು ಮಳಿಗೆಗಳಿಗೆ ತೆರಳುವ ಮುನ್ನ ಇಂದಿನ ಜಿಎಸ್‌ಟಿ ಮತ್ತು ಮೇಕಿಂಗ್ ಚಾರ್ಜ್‌ಗಳನ್ನುಪರಿಗಣಿಸಿ ಅಂತಿಮ ಬಿಲ್ ಮೊತ್ತವನ್ನು ಲೆಕ್ಕಾಚಾರ ಮಾಡುವುದು ಸೂಕ್ತ. ಜತೆಗೆ ಅಧಿಕೃತ ಹಾಲ್‌ಮಾರ್ಕ್ ಗುರುತನ್ನು ಪರಿಶೀಲಿಸಿ ಖರೀದಿ ಮಾಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.





Leave a comment