ದಾವಣಗೆರೆ ನಗರದ ಶಾಮನೂರು ರಸ್ತೆಯ ಡಾ. ಎಂ.ಸಿ.ಮೋದಿ ವೃತ್ತದ ಬಳಿ ಇರುವ ಉದ್ಯಾನವನದ ಕಾಂಪೌಂಡ್ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮತ್ತು ಮಹಾನಗರ ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ ಜಿ.ಎಸ್.ಮಂಜುನಾಥ್ ಗಡಿಗುಡಾಳ್ ಅವರು ಸ್ಪಷ್ಟನೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಾನವನದ ಕಾಂಪೌಂಡ್ ಶೀಥಿಲಾವಸ್ಥೆ ಇರುವ ಕಾರಣದಿಂದ ನೂತನ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ ವಿನಾಃ ಯಾವುದೇ ರೀತಿಯಲ್ಲಿ ಅಕ್ರಮವಾಗಿ ಮಾಡುತ್ತಿಲ್ಲ ಎಂದು ತಿಳಿಸಿದರು.
ಕಳೆದ 2 ವರ್ಷಗಳ ಹಿಂದೆಯೇ ಅಲ್ಲಿನ ಹಿತರಕ್ಷಣಾ ಸಮಿತಿಯವರು ಹಾಗೂ ಹಿರಿಯ ನಾಗರೀಕರ ಸಂಘದವರು ಸಹ ಈ ಉದ್ಯಾನವನದ ಕಾಂಪೌಂಡ್ ಪುನರ್ ನಿರ್ಮಿಸುವಂತೆ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೇಳಿದರು.
ದಾವಣಗೆರೆಯನ್ನು ಸಮಗ್ರ ಅಭಿವೃದ್ಧಿ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊಂದಿರುವ ವಿರೋಧಪಕ್ಷದವರು ಜನರನ್ನು ದಾರಿತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ದಾವಣಗೆರೆಯಲ್ಲಿ ಯಾವ ಅಭಿವೃದ್ಧಿ ಕೆಲಸಗಳನ್ನು ಅನವಶ್ಯಕವಾಗಿ ನಡೆಸುತ್ತಿಲ್ಲ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ನಿಖಿಲ್ ಮತ್ತಿತರರು ಹಾಜರಿದ್ದರು.
- Congress Leaders Clarification
- Davanagere development
- DAVANAGERE NEWS
- Davanagere Park Compound
- Dinesh K Shetty
- GS Manjunath Gadigudal
- MC Modi Circle
- Shamanur Road Davangere
- ಕಾಂಗ್ರೆಸ್ ಸ್ಪಷ್ಟನೆ
- ಜಿ ಎಸ್ ಮಂಜುನಾಥ್ ಗಡಿಗುಡಾಳ್
- ಡಾ ಎಂ ಸಿ ಮೋದಿ ವೃತ್ತ
- ದಾವಣಗೆರೆ ಉದ್ಯಾನವನ
- ದಾವಣಗೆರೆ ಮಹಾನಗರ ಪಾಲಿಕೆ
- ದಿನೇಶ್ ಕೆ. ಶೆಟ್ಟಿ
- ಶಾಮನೂರು ರಸ್ತೆ ಪಾರ್ಕ್





Leave a comment