Home ದಾವಣಗೆರೆ ಚಿನ್ನ ಮತ್ತು ಬೆಳ್ಳಿ ಪ್ರಿಯರಿಗೆ ಬೆಲೆ ಏರಿಕೆಯ ಶಾಕ್: ಇಂದು ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಬಂಗಾರದ ರೇಟ್?
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಚಿನ್ನ ಮತ್ತು ಬೆಳ್ಳಿ ಪ್ರಿಯರಿಗೆ ಬೆಲೆ ಏರಿಕೆಯ ಶಾಕ್: ಇಂದು ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಬಂಗಾರದ ರೇಟ್?

Share
ಚಿನ್ನ
Share

ಬೆಂಗಳೂರು/ನವದೆಹಲಿ: ಕಳೆದ ವಾರ ಭಾರಿ ಕುಸಿತ ಕಂಡಿದ್ದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಂದು (ನವೆಂಬರ್ 23) ಚೇತರಿಕೆ ಕಂಡುಬಂದಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಏರಿಕೆಯ ನಿರೀಕ್ಷೆಗಳು ತಗ್ಗಿರುವ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಬದಲಾವಣೆಗಳು ಭಾರತೀಯ ಮಾರುಕಟ್ಟೆಯ ಮೇಲೂ ಪ್ರಭಾವ ಬೀರಿದ್ದು, ಬೆಲೆಗಳು ಏರಿಕೆಯಾಗಿವೆ. ಪ್ರಮುಖ ಮಹಾನಗರಗಳಲ್ಲಿನ ಇಂದಿನ ಚಿನ್ನ ಮತ್ತು ಬೆಳ್ಳಿ ದರದ ವಿವರ ಇಲ್ಲಿದೆ.

ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಹಾಗೂ 22 ಕ್ಯಾರೆಟ್ ಚಿನ್ನದ ದರಗಳು ಭಿನ್ನವಾಗಿದ್ದು, ದಕ್ಷಿಣ ಭಾರತದ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ತುಸು ಹೆಚ್ಚಾಗಿದೆ. ಮದುವೆ ಸೀಸನ್ ಆರಂಭವಾಗಿರುವುದರಿಂದ ಗ್ರಾಹಕರು ಚಿನ್ನದ ಮಾರುಕಟ್ಟೆಯತ್ತ ಮುಖ ಮಾಡುತ್ತಿದ್ದಾರೆ.

24 ಕ್ಯಾರೆಟ್ ಚಿನ್ನದ ಬೆಲೆ (ಪ್ರತಿ 10 ಗ್ರಾಂಗೆ): ಚೆನ್ನೈನಲ್ಲಿ ಗರಿಷ್ಠ ₹1,22,670 ಇದ್ದರೆ, ಹೈದರಾಬಾದ್‌ನಲ್ಲಿ ₹1,22,510, ಬೆಂಗಳೂರಿನಲ್ಲಿ ₹1,22,410, ಮುಂಬೈನಲ್ಲಿ ₹1,22,310, ಕೊಲ್ಕತ್ತಾದಲ್ಲಿ ₹1,22,150 ಮತ್ತು ದೆಹಲಿಯಲ್ಲಿ ₹1,22,100 ಇದೆ.

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ (ಪ್ರತಿ 10 ಗ್ರಾಂಗೆ): ಚೆನ್ನೈನಲ್ಲಿ ₹1,12,448, ಹೈದರಾಬಾದ್‌ನಲ್ಲಿ ₹1,12,301, ಬೆಂಗಳೂರಿನಲ್ಲಿ ₹1,12,209, ಮುಂಬೈನಲ್ಲಿ ₹1,12,118, ಕೊಲ್ಕತ್ತಾದಲ್ಲಿ ₹1,11,971 ಹಾಗೂ ದೆಹಲಿಯಲ್ಲಿ ₹1,11,925 ಇದೆ.

ಬೆಳ್ಳಿ ದರ (ಪ್ರತಿ 1 ಕೆಜಿಗೆ): ಮುಂಬೈ ಮತ್ತು ದೆಹಲಿ ಮಾರುಕಟ್ಟೆಗಳಲ್ಲಿ ಬೆಳ್ಳಿ ಬೆಲೆ ಕ್ರಮವಾಗಿ ₹1,49,340 ಮತ್ತು ₹1,49,090 ಇದ್ದರೆ, ಚೆನ್ನೈನಲ್ಲಿ ₹1,49,780, ಹೈದರಾಬಾದ್‌ನಲ್ಲಿ ₹1,49,580 ಹಾಗೂ ಬೆಂಗಳೂರಿನಲ್ಲಿ ₹1,49,460 ಇದೆ.

Share