ದಾವಣಗೆರೆ: ನಗರದ ಜಿಎಂ ವಿಶ್ವವಿದ್ಯಾಲಯದ ಜಿಎಂ ಬಿಸಿನೆಸ್ ಸ್ಕೂಲ್, ‘ಜಿಎಂ ಸೈಂಟಿಫಿಕ್ ಇನ್ನೋವೇಶನ್ ಆಂಡ್ ರಿಸರ್ಚ್ ಎಲ್‌ಎಲ್‌ಪಿ’ (GM Scientific Innovation and Research LLP) ಸಹಯೋಗದೊಂದಿಗೆ 2026 ರ ಆಗಸ್ಟ್ 28 ಮತ್ತು 29 ರಂದು ‘ವರ್ತ್‌ಮಾನ್ – 2026’ “ಡಿಜಿಟಲ್ ಯುಗದಲ್ಲಿ ನಿರ್ವಹಣೆಯ ಮರು ಸ್ಥಾಪನೆ: ನಾವೀನ್ಯತೆ ಮತ್ತು ಸುಸ್ಥಿರತೆ” (Redefining Management in Digital Era: Innovation & Sustainability) ಶೀರ್ಷಿಕೆಯಡಿ ಜಿಎಂ ಬ್ಯುಸಿನೆಸ್ ಸ್ಕೂಲ್ ಸಭಾಂಗಣದಲ್ಲಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ.
ಈ ಸಮ್ಮೇಳನ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಎಂ ಬಿಸಿನೆಸ್ ಸ್ಕೂಲ್‌ನ ಡೀನ್ ಡಾ. ದಮ್ಮಲಪಾಟಿ ರವಿನಾಥ್ ಅವರು, ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ತಂತ್ರಜ್ಞಾನ ಮತ್ತು ಸುಸ್ಥಿರತೆಯ ಅಗತ್ಯಗಳಿಗೆ ತಕ್ಕಂತೆ ನಿರ್ವಹಣಾ ವಿಧಾನಗಳು (Management Practices) ಹೇಗೆ ಬದಲಾಗಬೇಕು ಎಂಬುದನ್ನು ಚರ್ಚಿಸಲು ಈ ಕಾರ್ಯಕ್ರಮವು ಶೈಕ್ಷಣಿಕ ತಜ್ಞರು, ಉದ್ಯಮ ಕ್ಷೇತ್ರದ ನಾಯಕರು, ಉದ್ಯಮಿಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತರಲಿದೆ ಎಂದು ತಿಳಿಸಿದರು.
ಕೃತಕ ಬುದ್ಧಿಮತ್ತೆ (AI), ಡೇಟಾ ಅನಾಲಿಟಿಕ್ಸ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಈ ಯುಗದಲ್ಲಿ, ತಾಂತ್ರಿಕ ನೈಪುಣ್ಯತೆಯೊಂದಿಗೆ ನೈತಿಕ ಮತ್ತು ಪರಿಸರ ಸ್ನೇಹಿ ನಿರ್ಧಾರಗಳನ್ನು ತೆಗೆದುಕೊಳ್ಳುವ ನಾಯಕರ ಅಗತ್ಯವನ್ನು ಈ ಸಮ್ಮೇಳನ ಪ್ರತಿಪಾದಿಸಲಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳು ಮತ್ತು ಅಧ್ಯಕ್ಷತೆ:
ಕಾರ್ಯಕ್ರಮಕ್ಕೆ ಭೂಮಿ (Bhoomi) ಸಂಸ್ಥೆಯ ಉಪಾಧ್ಯಕ್ಷ ಮತ್ತು ಕಂಟ್ರಿ ಜನರಲ್ ಮ್ಯಾನೇಜರ್ ಶ್ರೀ ದೇವವ್ರತ ದಾಸ್ ಹಾಗೂ ಹೈದರಾಬಾದ್‌ನ ನಾಲ್ಸಾರ್ (NALSAR) ವಿಶ್ವವಿದ್ಯಾಲಯದ ನಿರ್ವಹಣಾ ವಿಭಾಗದ ಮುಖ್ಯಸ್ಥ ಪ್ರೊ. ಶ್ರೀನಿವಾಸ್ ಸುಬ್ಬರಾವ್ ಪಸುಮರ್ತಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಜಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ಆರ್. ಶಂಖಪಾಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಗೌರವಾನ್ವಿತ ಅತಿಥಿಗಳು:
ಜಿಎಂ ವಿಶ್ವವಿದ್ಯಾಲಯದ ಪ್ರೊ-ಕುಲಪತಿ ಡಾ. ಎಂ. ವೇಣುಗೋಪಾಲ ರಾವ್, ಕುಲಸಚಿವ ಡಾ. ಸುನಿಲ್ ಕುಮಾರ್ ಬಿ. ಎಸ್., ಸಂಶೋಧನಾ ಸಲಹೆಗಾರ ಡಾ. ಸಿ. ಎಸ್. ರಮೇಶ್ ಹಾಗೂ ಬೆಂಗಳೂರಿನ CTO ಶ್ರೀ ದೇವೇಶ್ ಮಾಥುರ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಜಿಎಂ ಬಿಸಿನೆಸ್ ಸ್ಕೂಲ್‌ನ ಡೀನ್ ಡಾ. ದಮ್ಮಲಪಾಟಿ ರವಿನಾಥ್ ಮತ್ತು ನಿರ್ದೇಶಕ ಡಾ. ಶಿವಕುಮಾರ್ ಎಸ್. ಈ ರಾಷ್ಟ್ರೀಯ ಸಮ್ಮೇಳನದ ಸಂಯೋಜಕರಾಗಿದ್ದಾರೆ ಎಂದರು.
ಸಂಶೋಧನಾ ಪ್ರಬಂಧಗಳ ಮಂಡನೆ:
ಡಿಜಿಟಲೀಕರಣ ಮತ್ತು AI ಯಿಂದ ವಿವಿಧ ಕ್ಷೇತ್ರಗಳ ಮೇಲಾಗುವ ಪ್ರಭಾವದ ಕುರಿತು ಸಮ್ಮೇಳನದಲ್ಲಿ 70ಕ್ಕೂ ಹೆಚ್ಚು ಆಹ್ವಾನಿತ ಸಂಶೋಧನಾ ಪ್ರಬಂಧಗಳು ಮಂಡನೆಯಾಗಲಿವೆ.
ಪ್ರಮುಖ ವಿಷಯಗಳು:
ಮಾರ್ಕೆಟಿಂಗ್ ಮತ್ತು ಗ್ರಾಹಕರ ತೊಡಗಿಸಿಕೊಳ್ಳುವಿಕೆ (Marketing and Consumer Engagement)
ಫಿನ್‌ಟೆಕ್ ಮತ್ತು ಸುಸ್ಥಿರ ಅಭ್ಯಾಸಗಳು (Fintech and Sustainable Practices)
ಹೆಚ್‌ಆರ್ ಮತ್ತು ಮಾನವ ಸಂಪನ್ಮೂಲ ನಿರ್ವಹಣೆ (HR and Workforce Management)
ಡಿಜಿಟಲ್ ಕಾರ್ಯಾಚರಣೆಯ ಕಾರ್ಯಕ್ಷಮತೆ (Digital Operational Efficiency)
ಸಪ್ಲೈ ಚೈನ್‌ನಲ್ಲಿ ಸುಸ್ಥಿರ ಗುರಿಗಳು (Sustainable Goals in Supply Chain)
ನೆಕ್ಸ್ಟ್-ಜೆನ್ ಬಿಸಿನೆಸ್ ಅನಾಲಿಟಿಕ್ಸ್ (Business Analytics for Next-Gen)
ಆಯ್ಕೆಯಾದ ಅತ್ಯುತ್ತಮ ಸಂಶೋಧನಾ ಪ್ರಬಂಧಗಳನ್ನು ISBN ಸಂಖ್ಯೆಯೊಂದಿಗೆ ಕಾನ್ಫರೆನ್ಸ್ ಪುಸ್ತಕದಲ್ಲಿ ಪ್ರಕಟಿಸಲಾಗುತ್ತದೆ ಹಾಗೂ ಪ್ರಮುಖ ಸ್ಕೋಪಸ್-ಇಂಡೆಕ್ಸ್ಡ್ (Scopus-indexed) ಜರ್ನಲ್‌ಗಳಲ್ಲಿ ಪ್ರಕಟಿಸಲು ಶಿಫಾರಸು ಮಾಡಲಾಗುವುದು ಎಂದು ನಿರ್ದೇಶಕರಾದ ಡಾ. ಶಿವಕುಮಾರ್ ಎಸ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಎಂ ಬಿಸಿನೆಸ್ ಸ್ಕೂಲ್‌ನ ಅಸೋಸಿಯೇಟ್ ಪ್ರೊಫೆಸರ್ ಗಳಾದ ಡಾ. ಕೀರ್ತಿ ಎಸ್, ಡಾ. ಶ್ರೀಶೈಲ ಪಿ. ವಿಜಯಪುರ, ಡಾ. ಜಗದೀಶ್ವರಿ ಕೆ, ಸಂಶೋಧನೆ ಮತ್ತು ನಾವಿನ್ಯತೆಯ ಅಸೋಸಿಯೇಟ್ ಡೀನ್ ಡಾ. ಸ್ವರೂಪ್ ಕೆ, ಮಾರ್ಕೆಟಿಂಗ್ ಮತ್ತು ಪ್ರಮೋಷನ್ ವಿಭಾಗದ ಡೀನ್ ಡಾ. ವೀರಗಂಗಾಧರ ಸ್ವಾಮಿ ಟಿ.ಎಂ ಉಪಸ್ಥಿತರಿದ್ದರು.





Leave a comment