ಬೆಂಗಳೂರು: ಬೆಂಗಳೂರಿನಲ್ಲಿ ನಡೆದಿದ್ದ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್, ನಟ ದರ್ಶನ್ ತೂಗುದೀಪ ಅವರಿಗೆ ಭಾರೀ ಹಿನ್ನಡೆಯಾಗಿದೆ.
ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೋಶ್ ಸಲ್ಲಿಸಿದ್ದ ಅರ್ತಿಯನ್ನು ಬೆಂಗಳೂರಿನ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಮಾನ್ಯ ಮಾಡಿದ್ದು, ಆತನನ್ನು ಈ ಪ್ರಕರಣದಲ್ಲಿ ‘ಅಪ್ರೂವರ್’ (ಮಾಫಿಸಾಕ್ಷಿ) ಆಗಿ ಅನುಮೋದಿಸಿದೆ.
ಇದರೊಂದಿಗೆ ಪ್ರದೋಶ್ ಪ್ರಾಸಿಕ್ಯೂಷನ್ ಪರ ಸಾಕ್ಷಿದಾರನಾಗಲಿದ್ದು, ಕೊಲೆಗೆ ಸಂಬಂಧಿಸಿದ ಪ್ರಮುಖ ರಹಸ್ಯಗಳು ಮತ್ತು ಸತ್ಯಾಂಶಗಳನ್ನು ಬಾಯಿಬಿಡುವ ಸಾಧ್ಯತೆಯಿದೆ.
ವಿಚಾರಣೆ ಮುಗಿಯುವವರೆಗೆ ಪ್ರದೋಶ್ ನ್ಯಾಯಾಂಗ ಬಂಧನದಲ್ಲಿಯೇ ಇರಲಿದ್ದು, ಕೋರ್ಟ್ ವಿಧಿಸುವ ಎಲ್ಲ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ತಪ್ಪಿದಲ್ಲಿ ಆತನ ಮಾಫಿಸಾಕ್ಷಿ ಸ್ಥಾನವನ್ನು ರದ್ದುಪಡಿಸಿ ಮತ್ತೆ ಆರೋಪಿಯಾಗಿ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.
ಮತ್ತೊಂದೆಡೆ, ಕೋರ್ಟ್‌ಗೆ ನೇರವಾಗಿ ಹಾಜರಾಗಲು ನಟ ದರ್ಶನ್ ಮಾಡಿದ್ದ ಮನವಿಯನ್ನು ತಳ್ಳಿಹಾಕಲಾಗಿದ್ದು, ಮುಂದಿನ ವಿಚಾರಣೆಗಳು ವೀಡಿಯೊ ಕಾನ್ಫರೆನ್ಸ್ (Video Conference) ಮೂಲಕವೇ ಮುಂದುವರಿಯಲಿವೆ.





Leave a comment