Home ನವದೆಹಲಿ ಮದುವೆಗೂ ಮುನ್ನ ಯುವತಿಯ 5 ಶಾಕಿಂಗ್ ರೂಲ್ಸ್: ಒಪ್ಪಿಗೆ ಇದ್ದರೆ ಮಾತ್ರ ಮದುವೆಯಾಗಿ ಎಂದ ಸುಂದರಿ!
ನವದೆಹಲಿದಾವಣಗೆರೆಬೆಂಗಳೂರು

ಮದುವೆಗೂ ಮುನ್ನ ಯುವತಿಯ 5 ಶಾಕಿಂಗ್ ರೂಲ್ಸ್: ಒಪ್ಪಿಗೆ ಇದ್ದರೆ ಮಾತ್ರ ಮದುವೆಯಾಗಿ ಎಂದ ಸುಂದರಿ!

Share
ಮದುವೆ
Share

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯೊಬ್ಬಳ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ಮದುವೆಗೂ ಮುನ್ನ ಆಕೆ ಭಾವಿ ಪತಿ ಮತ್ತು ಅತ್ತೆ-ಮಾವನಿಗೆ 5 ಖಡಕ್ ಷರತ್ತುಗಳನ್ನು ವಿಧಿಸಿದ್ದಾಳೆ. ಆ ಶಾಕಿಂಗ್ ರೂಲ್ಸ್ ಇಲ್ಲಿದೆ ನೋಡಿ.

ಇತ್ತೀಚಿನ ದಿನಗಳಲ್ಲಿ ಯುವತಿಯರು ತಮ್ಮ ಸ್ವಾತಂತ್ರ್ಯ ಮತ್ತು ಆತ್ಮಗೌರವದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವೇ ಸಾಕ್ಷಿ. ಮದುವೆಗೂ ಮುನ್ನವೇ ಯುವತಿಯೊಬ್ಬಳು ತನ್ನ ಭಾವಿ ಪತಿ ಮತ್ತು ಅತ್ತೆ-ಮಾವನಿಗೆ ಐದು ಕಡಕ್ ಶರತ್ತುಗಳನ್ನು ವಿಧಿಸುವ ಮೂಲಕ ಇಂಟರ್‌ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದ್ದಾಳೆ. “ಈ ನಿಯಮಗಳಿಗೆ ಒಪ್ಪಿಗೆ ಇಲ್ಲದಿದ್ದರೆ ನನ್ನನ್ನು ಮದುವೆಯಾಗಬೇಡಿ” ಎಂದು ಆಕೆ ನೇರವಾಗಿಯೇ ಹೇಳಿದ್ದಾಳೆ.

ಅಷ್ಟಕ್ಕೂ ಆಕೆ ವಿಧಿಸಿರುವ ಆ 5 ಶಾಕಿಂಗ್ ಶರತ್ತುಗಳು ಇಲ್ಲಿವೆ ನೋಡಿ:

  • ಮಧ್ಯಾಹ್ನ 2 ಗಂಟೆಗೆ ಏಳುವುದು ನನ್ನ ದಿನಚರಿ: “ನಾನು ರಾತ್ರಿ 3 ರಿಂದ 4 ಗಂಟೆಯವರೆಗೆ ಎಚ್ಚರವಿರುತ್ತೇನೆ ಮತ್ತು ಮಧ್ಯಾಹ್ನ 1 ಅಥವಾ 2 ಗಂಟೆಗೆ ಏಳುತ್ತೇನೆ. ಇದು ನನ್ನ ದಿನಚರಿ (Routine) ಮತ್ತು ಮದುವೆಯ ನಂತರವೂ ನಾನು ಇದನ್ನು ಬದಲಾಯಿಸುವುದಿಲ್ಲ. ಬೆಳಗ್ಗೆ ಬೇಗ ಏಳುವಂತೆ ಯಾರೂ ನನ್ನನ್ನು ಒತ್ತಾಯಿಸಬಾರದು” ಎಂದು ಮೊದಲ ಶರತ್ತು ವಿಧಿಸಿದ್ದಾಳೆ.

  • ಬಟ್ಟೆ ಧರಿಸಲು ಯಾರ ಅನುಮತಿಯೂ ಬೇಕಾಗಿಲ್ಲ: “ಮದುವೆಯ ನಂತರವೂ ನಾನು ನನ್ನಿಷ್ಟದ ಬಟ್ಟೆಗಳನ್ನೇ ಧರಿಸುತ್ತೇನೆ. ಯಾವ ಬಟ್ಟೆ ಹಾಕಿಕೊಳ್ಳಬೇಕು ಎಂಬುದಕ್ಕೆ ನಾನು ಯಾರ ಬಳಿಯೂ ಅನುಮತಿ ಕೇಳುವುದಿಲ್ಲ. ಕೇವಲ ಮುನ್ಸೂಚನೆ ನೀಡುತ್ತೇನೆಯೇ ಹೊರತು ಪರ್ಮಿಷನ್ ಪಡೆಯಲ್ಲ” ಎಂಬುದು ಆಕೆಯ ಎರಡನೇ ನಿಯಮ.

  • ಇಡೀ ಕುಟುಂಬಕ್ಕೆ ಪ್ರತಿದಿನ ಅಡುಗೆ ಮಾಡಲು ಸಾಧ್ಯವಿಲ್ಲ: “ನಗೆ ಹಸಿವಾದಾಗ ನಾನು ನನಗಾಗಿ ಅಡುಗೆ ಮಾಡಿಕೊಳ್ಳುತ್ತೇನೆ. ಆದರೆ, ಇಡೀ ಕುಟುಂಬಕ್ಕೆ ಪ್ರತಿದಿನ ಬೆಳಗ್ಗೆ-ಸಂಜೆ ಅಡುಗೆ ಮಾಡಿಕೊಂಡು ಕೂರಲು ನನ್ನಿಂದ ಸಾಧ್ಯವಿಲ್ಲ” ಎಂದು ನೇರವಾಗಿಯೇ ಹೇಳಿದ್ದಾಳೆ.

  • ಲೈಫ್‌ಸ್ಟೈಲ್ ಬದಲಾಗಲ್ಲ: “ನನ್ನ ಬಟ್ಟೆಗಳು ಮತ್ತು ನನ್ನ ಜೀವನಶೈಲಿ (Lifestyle) ಸಂಪೂರ್ಣವಾಗಿ ನನ್ನ ವೈಯಕ್ತಿಕ ಆಯ್ಕೆ. ಮದುವೆಯಾಯಿತು ಎಂಬ ಒಂದೇ ಕಾರಣಕ್ಕೆ ನನ್ನ ಇಷ್ಟಗಳನ್ನು ನಾನು ಬದಲಾಯಿಸಿಕೊಳ್ಳುವುದಿಲ್ಲ.”

  • ಅಪಮಾನ ಮಾಡಿದರೆ ಸುಮ್ಮನಿರಲ್ಲ, ತಕ್ಕ ಉತ್ತರ ಕೊಡ್ತೀನಿ: ಎಲ್ಲಕ್ಕಿಂತ ದೊಡ್ಡದಾದ ಕೊನೆಯ ಶರತ್ತು ಎಂದರೆ, “ಒಂದು ವೇಳೆ ಗಂಡ, ಅತ್ತೆ-ಮಾವ ಅಥವಾ ಯಾವುದೇ ಸಂಬಂಧಿಕರು ನನಗೆ ಅಪಮಾನ ಮಾಡಿದರೆ, ನನ್ನ ಚಾರಿತ್ರ್ಯದ ಬಗ್ಗೆ ಮಾತನಾಡಿದರೆ ಅಥವಾ ಬೈದರೆ ನಾನು ಕೈಕಟ್ಟಿ ಸುಮ್ಮನೆ ಕೂರಲ್ಲ. ಅದೇ ಕ್ಷಣದಲ್ಲಿ ಮುಖಕ್ಕೆ ಹೊಡೆದಂತೆ yummy ತಿರುಗೇಟು ನೀಡುತ್ತೇನೆ” ಎಂದು ಎಚ್ಚರಿಸಿದ್ದಾಳೆ.

ಇಷ್ಟ ಇಲ್ಲದಿದ್ದರೆ ಸಂಬಂಧವೇ ಬೇಡ! ವಿಡಿಯೋದ ಕೊನೆಯಲ್ಲಿ, “ನನ್ನ ಈ 5 ನಿಯಮಗಳಿಂದ ಯಾರಿಗಾದರೂ ತೊಂದರೆ ಅಥವಾ ಆಕ್ಷೇಪಣೆ ಇದ್ದರೆ, ದಯವಿಟ್ಟು ನನ್ನೊಂದಿಗೆ ಮದುವೆಯ ಸಂಬಂಧ ಬೆಳೆಸಲು ಯಾರೂ ಮುಂದೆ ಬರಬೇಡಿ, ನನ್ನನ್ನು ಸಂಪರ್ಕಿಸಬೇಡಿ” ಎಂದು ಆಕೆ ಸ್ಪಷ್ಟಪಡಿಸಿದ್ದಾಳೆ.

ಸದ್ಯ ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ಬೆಂಕಿ ಹೊತ್ತಿಸಿದ್ದು, ನೆಟ್ಟಿಗರು ಎರಡು ಭಾಗವಾಗಿ ವಿಂಗಡಣೆಯಾಗಿದ್ದಾರೆ. ಕೆಲವರು ಆಕೆಯ ಧೈರ್ಯ ಮತ್ತು ನೇರ ನುಡಿಯನ್ನು ಬೆಂಬಲಿಸುತ್ತಿದ್ದರೆ, ಇನ್ನು ಕೆಲವರು “ಇಂಥವರಿಗೆ ಮದುವೆ ಯಾಕೆ ಬೇಕು?” ಎಂದು ಟೀಕಿಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles