Home ಕ್ರೈಂ ನ್ಯೂಸ್ ಗದ್ದೆಯಲ್ಲಿ ವೀಡಿಯೊ ಮಾಡಿ ಪತಿಯಿಂದ ಬೈಗುಳ ತಿಂದ ಹಳ್ಳಿ ಶಿಕ್ಷಕಿ ಯಶೋಧಾ ಲೋಧಿ ಯತ್ನಕ್ಕೆ ಜಾಗತಿಕ ಮನ್ನಣೆ ಸಿಕ್ಕಿದ್ದೇಗೆ: ಪ್ರಿಯಾಂಕಾ ಚೋಪ್ರಾ ಫಿದಾ ಆಗಿದ್ಯಾಕೆ?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಗದ್ದೆಯಲ್ಲಿ ವೀಡಿಯೊ ಮಾಡಿ ಪತಿಯಿಂದ ಬೈಗುಳ ತಿಂದ ಹಳ್ಳಿ ಶಿಕ್ಷಕಿ ಯಶೋಧಾ ಲೋಧಿ ಯತ್ನಕ್ಕೆ ಜಾಗತಿಕ ಮನ್ನಣೆ ಸಿಕ್ಕಿದ್ದೇಗೆ: ಪ್ರಿಯಾಂಕಾ ಚೋಪ್ರಾ ಫಿದಾ ಆಗಿದ್ಯಾಕೆ?

Share
ಪ್ರಿಯಾಂಕಾ ಚೋಪ್ರಾ
Share

ನವದೆಹಲಿ: ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಸಣ್ಣ ಹಳ್ಳಿಯೊಂದರ ಇಂಗ್ಲಿಷ್ ಶಿಕ್ಷಕಿ ಯಶೋಧಾ ಲೋಧಿ ಅವರ ಸರಳ ಹಾಗೂ ಸ್ಪೂರ್ತಿದಾಯಕ ಯತ್ನಕ್ಕೆ ಜಾಗತಿಕ ಮಟ್ಟದ ಮಾನ್ಯತೆ ಸಿಕ್ಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ‘ಇಂಗ್ಲಿಷ್ ವಿತ್ ದೇಹಾತಿ ಮೇಡಂ’ ಎಂದೇ ಚಿರಪರಿಚಿತರಾಗಿರುವ ಯಶೋಧಾ ಅವರ ಇಂಗ್ಲಿಷ್ ಕಲಿಕೆಯ ವೀಡಿಯೊ ಒಂದನ್ನು ಬಾಲಿವುಡ್ ಹಾಗೂ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೋನಸ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಗದ್ದೆಯಲ್ಲಿ ವಿಡಿಯೊ ಚಿತ್ರೀಕರಣ: ಪತಿಯಿಂದ ಗದರಿಕೆ!

ವೀಡಿಯೊ ಮಾಡಿದ ಆ ದಿನವನ್ನು ನೆನಪಿಸಿಕೊಂಡ ಯಶೋಧಾ, ತಾವು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಈ ವೀಡಿಯೊ ರೆಕಾರ್ಡ್ ಮಾಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ವೀಡಿಯೊ ಚಿತ್ರೀಕರಿಸುವಾಗ ಅವರ ಪತಿ ಸಹ ಗದರಿದ್ದರು. ಆದಾಗ್ಯೂ, ಅವರು ಸವಾಲನ್ನು ಎದುರಿಸಿ ವೀಡಿಯೊ ಪೂರ್ಣಗೊಳಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಪ್ರಿಯಾಂಕಾ ಚೋಪ್ರಾ ಅವರಂತಹ ಜಾಗತಿಕ ತಾರೆ ತಮ್ಮ ವೀಡಿಯೊವನ್ನು ರೀಪೋಸ್ಟ್ ಮಾಡುತ್ತಾರೆ ಎಂದು ಅವರು ಕನಸಿನಲ್ಲೂ ಯೋಚಿಸಿರಲಿಲ್ಲ.

ಇನ್‌ಸ್ಟಾಗ್ರಾಮ್‌ನಲ್ಲಿ 4 ಲಕ್ಷ ಫಾಲೋವರ್ಸ್ ಮೈಲಿಗಲ್ಲು:

ಪ್ರಿಯಾಂಕಾ ಚೋಪ್ರಾ ಅವರ ಈ ಒಂದು ಹಂಚಿಕೆಯಿಂದಾಗಿ ಯಶೋಧಾ ಅವರ ಇನ್‌ಸ್ಟಾಗ್ರಾಮ್ ಖಾತೆಯು ಒಂದೇ ದಿನದಲ್ಲಿ 4 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ತಲುಪುವ ಮೈಲಿಗಲ್ಲು ಸಾಧಿಸಿದೆ. ಈ ಹಿಂದೆ ಪ್ರಸಿದ್ಧ ನಟರಾದ ಮೃಣಾಲ್ ಠಾಕೂರ್, ಅಭಯ್ ಡಿಯೋಲ್ ಮತ್ತು ಆರ್. ಮಾಧವನ್ ಕೂಡ ಇವರ ಶ್ರಮವನ್ನು ಗುರುತಿಸಿ ಬೆಂಬಲಿಸಿದ್ದರು.

ಮನೆಯಲ್ಲಿ ಟಿವಿ ಇಲ್ಲ, ಸೆಲೆಬ್ರಿಟಿಗಳ ಪರಿಚಯವೂ ಇರಲಿಲ್ಲ!

ತಮ್ಮ ಹಳ್ಳಿಯ ಸರಳ ಜೀವನದ ಬಗ್ಗೆ ಮಾತನಾಡಿದ ಯಶೋಧಾ, “ನನ್ನ ಮನೆಯಲ್ಲಿ ಟಿವಿ ಇಲ್ಲ, ಹೀಗಾಗಿ ನನಗೆ ಸೆಲೆಬ್ರಿಟಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ನನ್ನ ವಿದ್ಯಾರ್ಥಿಗಳು ಬಂದು ಈ ವಿಷಯ ತಿಳಿಸಿದಾಗಷ್ಟೇ ಪ್ರಿಯಾಂಕಾ ಚೋಪ್ರಾ ಅವರ ಹಿನ್ನೆಲೆ ಹಾಗೂ ನನಗೆ ಸಿಕ್ಕ ಬೆಂಬಲದ ದೊಡ್ಡತನ ಅರಿವಾಯಿತು” ಎಂದು ಭಾವುಕರಾಗಿ ಹೇಳಿದ್ದಾರೆ.

ಸಣ್ಣ ಪ್ರಯತ್ನವನ್ನು ಎಂದೂ ಕೀಳಾಗಿ ಕಾಣಬೇಡಿ:

ಪ್ರತಿಯೊಬ್ಬರಿಗೂ ಇಂಗ್ಲಿಷ್ ಭಾಷೆಯ ಭಯವನ್ನು ಹೋಗಲಾಡಿಸಿ, ಭಾಷೆಯ ತೊಡಕಿನಿಂದಾಗಿ ಹಿಂಜರಿಯುವ ಪ್ರತಿಯೊಬ್ಬ ಮಹಿಳೆ ಹಾಗೂ ವ್ಯಕ್ತಿಯಲ್ಲಿ ಆತ್ಮವಿಶ್ವಾಸ ತುಂಬುವುದೇ ತಮ್ಮ ಮುಖ್ಯ ಗುರಿ ಎಂದಿದ್ದಾರೆ ಯಶೋಧಾ. “ನಿಮ್ಮ ಸಣ್ಣ ಸಣ್ಣ ಪ್ರಯತ್ನಗಳನ್ನು ಎಂದಿಗೂ ಕೀಳಾಗಿ ಕಾಣಬೇಡಿ; ಯಾರು ನಿಮ್ಮನ್ನು ಗಮನಿಸುತ್ತಿದ್ದಾರೆ ಎಂಬುದು ನಿಮಗೆ ತಿಳಿದಿರುವುದಿಲ್ಲ” ಎಂದು ಅವರು ತಮ್ಮ ಅಭಿಮಾನಿಗಳಿಗೆ ಸ್ಪೂರ್ತಿದಾಯಕ ಸಂದೇಶ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles