SUDDIKSHANA KANNADA NEWS/ DAVANAGERE/ DATE:10-12-2024
ದಾವಣಗೆರೆ: ರಾಜ್ಯ, ದೇಶ ಕಂಡ ಅಪ್ರತಿಮ ರಾಜಕಾರಣಿ, ಆಜಾತಶತ್ರು ಎಸ್. ಎಂ. ಕೃಷ್ಣ ನಿಧನಕ್ಕೆ ಕೇಂದ್ರದ ಮಾಜಿ ಸಚಿವ ಡಾ. ಜಿ. ಎಂ. ಸಿದ್ದೇಶ್ವರ ಅವರು ಸಂತಾಪ ಸೂಚಿಸಿದ್ದಾರೆ.
ಹಿರಿಯ ಮುತ್ಸದ್ಧಿಗಳೂ, ಕರ್ನಾಟಕ ರಾಜ್ಯದ 16ನೇ ಮುಖ್ಯಮಂತ್ರಿಗಳಾಗಿ, ನಂತರ ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರದ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿ, ಅಷ್ಟೆ ಅಲ್ಲದೇ, ಕರ್ನಾಟಕದ ವಿಧಾನಸಭೆಯ ಸ್ಪೀಕರ್ ಹುದ್ದೆಯನ್ನು ಸಹ ನಿರ್ವಹಿಸಿದ್ದರು, ವಿವಿಧ ಕಾಲಘಟ್ಟದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರಾಗಿ ರಾಜ್ಯ ಮತ್ತು ದೇಶದ ರಾಜಕಾರಣದಲ್ಲಿ ಅಪ್ರತಿಮ ರಾಜಕಾರಣಿಯಾಗಿ ಸೇವೆಯನ್ನು ಸಲ್ಲಿಸಿ, ಅಜಾತಶತ್ರು ಎನಿಸಿಕೊಂಡಂಥ ಎಸ್.ಎಂ. ಕೃಷ್ಣರವರ ಅಗಲಿಕೆಯು ರಾಜ್ಯಕ್ಕೂ ಹಾಗೂ ದೇಶಕ್ಕೂ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬದವರಿಗೆ ದುಃಖವನ್ನು ಭರಿಸುವಂತಹ ಶಕ್ತಿ ನೀಡಲಿ ಎಂದು ಸಿದ್ದೇಶ್ವರ ಅವರು ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.