Home ಕ್ರೈಂ ನ್ಯೂಸ್ ಕಾಡಿನಿಂದ ರ‍್ಯಾಂಪ್‌ವರೆಗೆ: ರಾಯ್‌ಪುರದ ಫ್ಯಾಷನ್ ಶೋನಲ್ಲಿ ಸೌಂಡ್ ಮಾಡಿದ ಛತ್ತೀಸ್‌ಗಢದ ಮಾಜಿ ನಕ್ಸಲೈಟ್ ಮಹಿಳೆಯರು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕಾಡಿನಿಂದ ರ‍್ಯಾಂಪ್‌ವರೆಗೆ: ರಾಯ್‌ಪುರದ ಫ್ಯಾಷನ್ ಶೋನಲ್ಲಿ ಸೌಂಡ್ ಮಾಡಿದ ಛತ್ತೀಸ್‌ಗಢದ ಮಾಜಿ ನಕ್ಸಲೈಟ್ ಮಹಿಳೆಯರು!

Share
ಮಹಿಳೆಯರು
Share

ರಾಯ್‌ಪುರ: ಛತ್ತೀಸ್‌ಗಢದ ಬಸ್ತಾರ್‌ನ ದಟ್ಟ ಅರಣ್ಯ ಪ್ರದೇಶದಲ್ಲಿ ಒಂದು ಕಾಲದಲ್ಲಿ ಬಂದೂಕು ಹಿಡಿದು ನಕ್ಸಲೈಟ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಮಹಿಳೆಯರು, ಈಗ ಹಿಂಸಾಚಾರದ ಹಾದಿ ತೊರೆದು ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳುವ ಮೂಲಕ ಹೊಸ ಭರವಸೆಯ ಬೆಳಕಾಗಿದ್ದಾರೆ.

ರಾಯ್‌ಪುರದಲ್ಲಿ ನಡೆದ ‘ರಾಷ್ಟ್ರೀಯ ಕೈಮಗ್ಗ ದಿನಾಚರಣೆ’ ಕಾರ್ಯಕ್ರಮದ ಫ್ಯಾಷನ್ ಶೋನಲ್ಲಿ ಮಾಜಿ ನಕ್ಸಲ್ ಮಹಿಳೆಯರು ಅತ್ಯಂತ ಆತ್ಮವಿಶ್ವಾಸದಿಂದ ರ‍್ಯಾಂಪ್ ವಾಕ್ ಮಾಡಿ ನೆರೆದಿದ್ದ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಬಸ್ತಾರ್ ಪುನರ್ವಸತಿ ಕೇಂದ್ರದ ಈ ಮಹಿಳೆಯರು ಸ್ಥಳೀಯ ಕೌಶಲದಿಂದ ತಯಾರಿಸಿದ ಕೈಮಗ್ಗ ಉಡುಪುಗಳನ್ನು ಧರಿಸಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಅಸ್ತ್ರಗಳನ್ನು ತೊರೆದು ಶಾಂತಿ ಮತ್ತು ಸ್ವಾವಲಂಬನೆಯ ಜೀವನ ಆಯ್ದುಕೊಂಡಿರುವ ಈ ಮಹಿಳೆಯರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಪರಿವರ್ತನೆಯು ಕೇವಲ ಫ್ಯಾಷನ್ ಪ್ರದರ್ಶನವಾಗಿರದೆ, ಪುನರ್ವಸತಿ ಮತ್ತು ಮಹಿಳಾ ಸಬಲೀಕರಣದ ಮಹತ್ವದ ಸಂಕೇತವಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles