Home ಕ್ರೈಂ ನ್ಯೂಸ್ ಬೆಂಗಳೂರಿನಲ್ಲಿ ಬ್ಯಾಚುಲರ್‌ಗೆ ಬಿಗ್ ಶಾಕ್: ಕೈಗೆ ಕೀ ಸಿಕ್ಕ ಬೆನ್ನಲ್ಲೇ ‘ಮನೆ ಖಾಲಿ ಮಾಡಿ’ ಎಂದ ಸೊಸೈಟಿ ಪ್ರೆಸಿಡೆಂಟ್!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಬೆಂಗಳೂರಿನಲ್ಲಿ ಬ್ಯಾಚುಲರ್‌ಗೆ ಬಿಗ್ ಶಾಕ್: ಕೈಗೆ ಕೀ ಸಿಕ್ಕ ಬೆನ್ನಲ್ಲೇ ‘ಮನೆ ಖಾಲಿ ಮಾಡಿ’ ಎಂದ ಸೊಸೈಟಿ ಪ್ರೆಸಿಡೆಂಟ್!

Share
ಬ್ಯಾಚುಲರ್‌
Share

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಹುಡುಕುವುದು ಎಷ್ಟೊಂದು ಕಷ್ಟ ಎಂಬುದು ಇಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಗೊತ್ತು. ಅದರಲ್ಲೂ ಒಂಟಿಯಾಗಿರುವ ‘ಬ್ಯಾಚುಲರ್ಸ್’ಗೆ ಮನೆ ಸಿಗುವುದು ಅಗ್ನಿಪರೀಕ್ಷೆಯಿದ್ದಂತೆ. ಇದೀಗ ಅಂತಹದ್ದೇ ಒಂದು ವಿಚಿತ್ರ ಹಾಗೂ ಕಿರಿಕಿರಿಯ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಕೈಗೆ ಕೀ ಸಿಕ್ಕ ಬೆನ್ನಲ್ಲೇ ಶಾಕ್!

ನಿಖಿಲ್ ಶಿಯೋರನ್  ಎಂಬ ಯುವಕ ಬೆಂಗಳೂರಿನಲ್ಲಿ ಬಹಳ ದಿನಗಳ ಹುಡುಕಾಟದ ನಂತರ ಕೊನೆಗೂ ಒಂದು ಫ್ಲ್ಯಾಟ್ ಕಂಡುಕೊಂಡಿದ್ದರು. ಸೆಪ್ಟೆಂಬರ್ 25 ರಂದು ಮನೆ ಸಿಕ್ಕ ಖುಷಿಯಲ್ಲಿ, “ಯುದ್ಧ ಮುಗಿಯಿತೇ?” (War is over?) ಎಂದು ಅಡಿಬರಹ ಬರೆದು ಫ್ಲ್ಯಾಟ್‌ನ ಫೋಟೋವನ್ನು ತಮ್ಮ ‘X’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದರು. ಮನೆ ಮಾಲೀಕರೊಂದಿಗೆ ಸರಿಯಾದ ಬಾಡಿಗೆ ಒಪ್ಪಂದ  ಮಾಡಿಕೊಂಡು, ಮುಂಗಡ ಹಣ ಕೂಡ ಪಾವತಿಸಿ ಮನೆಯ ಕೀ ಪಡೆದುಕೊಂಡಿದ್ದರು.

ಸೊಸೈಟಿ ಪ್ರೆಸಿಡೆಂಟ್ ಮೆಸೇಜ್:

ಆದರೆ ನಿಖಿಲ್ ಅವರ ಸಂತೋಷ ಹೆಚ್ಚು ಹೊತ್ತು ಉಳಿಯಲಿಲ್ಲ. ಮನೆ ಕೀ ಕೈಗೆ ಸಿಕ್ಕ ಕೆಲವೇ ಸಮಯದಲ್ಲಿ ಅಪಾರ್ಟ್‌ಮೆಂಟ್ ಸೊಸೈಟಿಯ ಪ್ರೆಸಿಡೆಂಟ್‌ನಿಂದ ವಾಟ್ಸಾಪ್ ಸಂದೇಶವೊಂದು ಬಂದಿದೆ. ಅದರಲ್ಲಿ, “ನಾನು ಸೊಸೈಟಿಯ ಪ್ರಸ್ತುತ ಪ್ರೆಸಿಡೆಂಟ್. ನಿಮ್ಮ ಮನೆ ಮಾಲೀಕರ ಬಳಿ ಮಾತನಾಡಿ ತಕ್ಷಣವೇ ಬೇರೆ ಮನೆ ಹುಡುಕಿಕೊಳ್ಳಿ. ನಮ್ಮ ಸೊಸೈಟಿ ನಿಯಮದಂತೆ ಬ್ಯಾಚುಲರ್‌ಗಳಿಗೆ ಅವಕಾಶವಿಲ್ಲ” ಎಂದು ಕಟ್ಟುನಿಟ್ಟಾಗಿ ತಿಳಿಸಲಾಗಿದೆ.

ನಿಖಿಲ್ ಅವರು ತಾವು ಈಗಾಗಲೇ ಒಪ್ಪಂದ ಮಾಡಿಕೊಂಡು ಹಣ ಪಾವತಿಸಿರುವುದಾಗಿ ತಿಳಿಸಿದರೂ, ಸೊಸೈಟಿ ಪ್ರೆಸಿಡೆಂಟ್ ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ತಕ್ಷಣವೇ ಫ್ಲ್ಯಾಟ್ ಖಾಲಿ ಮಾಡುವಂತೆ ಒತ್ತಾಯಿಸಿದರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್:

ತಮಗೆ ಎದುರಾದ ಈ ಅನ್ಯಾಯದ ಅನುಭವವನ್ನು ನಿಖಿಲ್ ಅವರು ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್‌ನೊಂದಿಗೆ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಕ್ಷಣಾರ್ಧದಲ್ಲೇ ವೈರಲ್ ಆಗಿದ್ದು, 4,80,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಮೆಟ್ರೋ ನಗರಗಳಲ್ಲಿ ಬ್ಯಾಚುಲರ್‌ಗಳು ಎದುರಿಸುತ್ತಿರುವ ಮನೆ ಬಾಡಿಗೆ ಸಮಸ್ಯೆಯ ಕುರಿತು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಆಕ್ರೋಶ ಹಾಗೂ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles