Home ಕ್ರೈಂ ನ್ಯೂಸ್ ಸಿಮೆಂಟ್ ತುಂಬಿದ ನೀಲಿ ಡ್ರಮ್‌ನಲ್ಲಿದ್ದ ಶವ 4 ವರ್ಷಗಳ ಬಳಿಕ ಪತ್ತೆ, ಕೋವಿಡ್ ನೆಪದಲ್ಲಿ ಮೂವರ ಕೊಲೆ: ಹೆಂಡತಿ ಸಿಕ್ಕಿಸಿಕೊಡಲು ಹೋಗಿ ತಾನೇ ಸಿಕ್ಕಿಬಿದ್ದ ಪತಿ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಸಿಮೆಂಟ್ ತುಂಬಿದ ನೀಲಿ ಡ್ರಮ್‌ನಲ್ಲಿದ್ದ ಶವ 4 ವರ್ಷಗಳ ಬಳಿಕ ಪತ್ತೆ, ಕೋವಿಡ್ ನೆಪದಲ್ಲಿ ಮೂವರ ಕೊಲೆ: ಹೆಂಡತಿ ಸಿಕ್ಕಿಸಿಕೊಡಲು ಹೋಗಿ ತಾನೇ ಸಿಕ್ಕಿಬಿದ್ದ ಪತಿ!

Share
ಪತಿ
Share

ಅಹಮದಾಬಾದ್ (ಗುಜರಾತ್): ಗುಜರಾತ್‌ನ ಅಹಮದಾಬಾದ್‌ನಲ್ಲಿ 2022ರ ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ನಡೆದ ಭೀಕರ ತ್ರಿಬಲ್ ಮರ್ಡರ್ (ಮೂರು ಕೊಲೆ) ಪ್ರಕರಣ ನಾಲ್ಕು ವರ್ಷಗಳ ನಂತರ ಬೆಳಕಿಗೆ ಬಂದಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿಗಳು ತಮ್ಮ ಸ್ವಂತ ಕುಟುಂಬದ ಮೂವರು ಮಹಿಳೆಯರನ್ನು ಹತ್ಯೆ ಮಾಡಿ, ದೇಹಗಳನ್ನು ವಿಭಿನ್ನ ರೀತಿಯಲ್ಲಿ ವಿಲೇವಾರಿ ಮಾಡಿದ್ದರು ಎಂಬ ಆಘಾರ್ಥಕಾರಿ ಸತ್ಯವನ್ನು ಅಹಮದಾಬಾದ್ ಕ್ರೈಮ್ ಬ್ರಾಂಚ್ ಪೊಲೀಸರು ಬಯಲಿಗೆಳೆದಿದ್ದಾರೆ.

ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?

ಆರೋಪಿ ಮಾಧವದಾಸ್ ಸಾಧು ತನ್ನಿಂದ ಬೇರ್ಪಟ್ಟು ಮಗ, ಹಣ ಹಾಗೂ ಚಿನ್ನಾಭರಣದೊಂದಿಗೆ ತೆರಳಿದ್ದ ಹೆಂಡತಿ ಊರ್ಮಿಳಾ (ಜಯಾ) ಹಾಗೂ ಆಕೆಯ ಸೋದರಸಂಬಂಧಿ ಅಫ್ಜಲ್ ವಿರುದ್ಧ ದೂರು ನೀಡಲು ಅಹಮದಾಬಾದ್ ಕ್ರೈಮ್ ಬ್ರಾಂಚ್ ಪೊಲೀಸರನ್ನು ಸಂಪರ್ಕಿಸಿದ್ದ. 70 ವರ್ಷದ ಶಾಂತಾಬೆನ್ ವಸಾವಾ ಎಂಬ ವೃದ್ಧೆಯನ್ನು ಊರ್ಮಿಳಾ ಕೊಲೆ ಮಾಡಿದ್ದಾಳೆ ಎಂದು ಮಾಧವದಾಸ್ ಆರೋಪಿಸಿದ್ದ.

ಆದರೆ, ವಿಚಾರಣೆ ವೇಳೆ ಆತನ ಹೇಳಿಕೆಗಳಲ್ಲಿ ಹತ್ತಾರು ವ್ಯತ್ಯಾಸಗಳು ಕಂಡುಬಂದಿದ್ದರಿಂದ ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ, ಸ್ವತಃ ಮಾಧವದಾಸ್ ಮತ್ತು ಆತನ ಪತ್ನಿ ಊರ್ಮಿಳಾ ಸೇರಿ ಈ ಕೊಲೆಗಳನ್ನು ಮಾಡಿರುವುದು ಸಾಬೀತಾಯಿತು.

ನೀಲಿ ಡ್ರಮ್‌ನಲ್ಲಿ ಶವ ಇಟ್ಟು ಸಿಮೆಂಟ್ ಭರ್ತಿ!

ಕೋವಿಡ್ ಸಾಂಕ್ರಾಮಿಕದ ವಾತಾವರಣವನ್ನು ದುರ್ಬಳಕೆ ಮಾಡಿಕೊಂಡ ದಂಪತಿ, ಶಾಂತಾಬೆನ್ ಅವರನ್ನು ಆಸ್ಪತ್ರೆಯಿಂದ ನೇರವಾಗಿ ಸ್ಮಶಾನಕ್ಕೆ ಒಯ್ದು ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಸಂಬಂಧಿಕರಿಗೆ ಸುಳ್ಳು ಹೇಳಿದ್ದರು. ನಿಜವಾಗಿ, ಆಕೆಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದ ಬಳಿಕ, ಬ್ಲೂ ಡ್ರಮ್‌ನಲ್ಲಿಇಟ್ಟು ಮೂರು ಚೀಲ ಸಿಮೆಂಟ್ ನೀರು ಬೆರೆಸಿ ಭರ್ತಿ ಮಾಡಿ, ಮನೆಯ ಅಂಗಳದಲ್ಲಿ 4-5 ಅಡಿ ಆಳದ ಗುಂಡಿ ತೋಡಿ ಹೂತುಹಾಕಿದ್ದರು.

ಆ ನಂತರ ಅದರ ಮೇಲೆ ದಪ್ಪನೆಯ ಸಿಮೆಂಟ್ ಸ್ಲ್ಯಾಬ್ ಹಾಕಿದ್ದರು. ಪೊಲೀಸರು ಅಂಗಳವನ್ನು ಅಗೆದು ಬ್ಲೂ ಡ್ರಮ್ ಹೊರತೆಗೆದು ವಿಧಿವಿಜ್ಞಾನ (Forensic) ಪರೀಕ್ಷೆಗೆ ಕಳುಹಿಸಿದ್ದಾರೆ.

ಸಾಲು ಸಾಲು ಹತ್ಯೆಗಳು

ತನಿಖೆ ಮುಂದುವರಿದಂತೆ ದಂಪತಿ ಇನ್ನು ಇಬ್ಬರು ಮಹಿಳೆಯರನ್ನು ಕೊಂದಿರುವುದು ತಿಳಿದುಬಂದಿದೆ:

ಶಾಂತಾಬೆನ್ ವಸಾವಾ (70): ಸಿಮೆಂಟ್ ತುಂಬಿದ ಬ್ಲೂ ಡ್ರಮ್‌ನಲ್ಲಿ ಹೂತುಹಾಕಲಾಗಿತ್ತು.

ಭಗವತಿಬೆನ್ (ಊರ್ಮಿಳಾಳ ಸಹೋದರಿ): ಕ್ಷಯರೋಗದಿಂದ (TB) ಬಳಲುತ್ತಿದ್ದ ಈಕೆಯ ಮುಖಕ್ಕೆ ದಿಂಬು ಒತ್ತಿ ಕೊಲೆ ಮಾಡಿ, ಪ್ರತ್ಯೇಕವಾಗಿ ಹೂತುಹಾಕಲಾಗಿತ್ತು.

ಮಂಜುಳಾಬೆನ್ ಸಾಧು (ಮಾಧವದಾಸ್‌ನ ತಾಯಿ): ಪಾರ್ಶ್ವವಾಯುವಿಗೆ (Paralysis) ಒಳಗಾಗಿದ್ದ ಈಕೆಯನ್ನೂ ಸಹ ದಿಂಬಿನಿಂದ ಉಸಿರುಗಟ್ಟಿಸಿ ಕೊಂದು, ಸಾಂಕ್ರಾಮಿಕದ ನೆಪದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು.

ಪೊಲೀಸರು ಮಾಧವದಾಸ್ ಹಾಗೂ ಊರ್ಮಿಳಾ ಇಬ್ಬರನ್ನೂ ಬಂಧಿಸಿದ್ದು, ಕಾನೂನು ಕ್ರಮ ಕೈಗೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles