ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಆನ್ ಲೈನ್ ನಲ್ಲಿ ಮರುಳು ಮಾಡಿ ಮೋಸ ಮಾಡಿದ್ದ ಅಂತಾರಾಜ್ಯದ ಐವರು ಆರೋಪಿಗಳ ಸೆರೆ ಸಿಕ್ಕಿದ್ದು ಹೇಗೆ ಗೊತ್ತಾ..? ಎಷ್ಟು ಕೇಸ್ ದಾಖಲಾಗಿವೆ ಗೊತ್ತಾ…? ಪೊಲೀಸರೇ ಶಾಕ್…!

On: January 25, 2024 5:36 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:25-01-2024

ದಾವಣಗೆರೆ: ಆನ್ ಲೈನ್ ನಲ್ಲಿ ಜನರನ್ನು ಮರುಳು ಮಾಡಿ ಮೋಸ ಮಾಡುತ್ತಿದ್ದ ಖತರ್ನಾಕ್ ಸೈಬರ್ ಕ್ರೈಂ ಎಸಗುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದು, ಮೋಸ ಮಾಡಿದ ಬಗೆ ಪೊಲೀಸರಿಗೆ ಶಾಕ್ ತಂದಿದೆ.

ಪುದುಚೇರಿಯ ಕಾರೈಕಲ್ ಜಿಲ್ಲೆಯ ತಿರುಮಲೈರಾಯನ್ ನ ಕಾಲಿಯಮನ್ ಕೋವಿಲ್ ಸ್ಟ್ರೀಟ್ ನ ಚಾಲಕ ವೈತಿಲಿಂಗಂ, ಅರುಮಾಚಲಂನ ರಿಯಲ್ ಎಸ್ಟೇಟ್ ಬ್ರೋಕರ್ ಸರವಣನ್ (33), ಚೆನ್ನೈನ ಕಾಂಚಿಪುರಂನ
ಉತ್ತಂಡಿ ಎಎಸ್ ಆರ್ ನ ಸರ್ಕಾರಿ ಮೆಡಿಕಲ್ ಕಾಲೇಜು ರಸ್ತೆಯಲ್ಲಿನ ಎಲ್ ಐ ಸಿ ಕಾಲೋನಿಯ ಮುತ್ತಾಲಮನ್ ಕೋವಿಲ್, ತಮಿಳುನಾಡಿನ ಚೈನ್ನೈನ ರಾಯ್ ಪೆಟ್ಟಂನ ಬಾಲಾಜಿನಗರದ ಉಮೈಜ್ ಅಹಮದ್ (37), ತಿಪತ್ತೂರು ಜಿಲ್ಲೆಯ ಅಂಬೂರ್ ತಾಲೂಕಿನ ವೈತಿಮನೈನ ಜುನೈದ್ ಅಹಮದ್ (33) ಹಾಗೂ ಕೊಲೈ ಅಂಬೂರ್ ತಾಲೂಕಿನ ಬಾಂಗಿಜುಬನ್ ನ ಜಾವೀದ್ ಅಹಮ್ಮದ್ (34) ಬಂಧಿತ ಆರೋಪಿಗಳು.

ಘಟನೆ ಹಿನ್ನೆಲೆ:

2023ರ ಮಾರ್ಚ್ 6ರಂದು ಜಗಳೂರು ತಾಲೂಕಿನ ಕೆ. ಎನ್. ಕ್ಯಾಸೇನಹಳ್ಳಿ ಗ್ರಾಮದ ಮಂಜಪ್ಪ ಎಂಬುವವರಿಗೆ ಅದೇ ವರ್ಷದ ಫೆಬ್ರವರಿ 5 ರಿಂದ 23ರವರೆಗೆ ಅನಾಮಿಕ ಮೊಬೈಲ್ ನಂಬರ್‌ಗಳಿಂದ ಕರೆ ಬಂದಿತ್ತು. ಕರೆ ಮಾಡಿ ಆನ್ ಲೈನ್ ಮೂಲಕ ಪ್ರೊಡಕ್ಟ್ ಗಳನ್ನು ಖರೀದಿಸಿದರೆ ಕಮಿಷನ್ ರೂಪದಲ್ಲಿ ಹಣ ಬರುತ್ತದೆ. ಮನೆಯಿಂದಲೇ ಸುಲಭವಾಗಿ ಕೆಲಸ ಮಾಡಿ ಹಣ ಗಳಿಸಬಹುದು ಅಂತ ಹೇಳಿ 9 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ಆನ್ ಲೈನ್ ಮೂಲಕ ಹಾಕಿಸಿಕೊಂಡು ಮೋಸ ಮಾಡಿದ್ದರು.

ಈ ಅಪರಿಚಿತ ವ್ಯಕ್ತಿ ವಿರುದ್ದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಆರೋಪಿತರ ಬ್ಯಾಂಕ್
ಖಾತೆಗಳ ಕೆವೈಸಿ ದಾಖಲಾತಿಗಳನ್ನು ಪಡೆದುಕೊಂಡು ಪರಿಶೀಲಿಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳ ಕುರಿತಂತೆ ಮಾಹಿತಿ ಸಂಗ್ರಹಿಸಲು ಮುಂದಾದ ಪೊಲೀಸರು ತಮಿಳುನಾಡು ರಾಜ್ಯದ ವಿರುಧನಗರ ಸಿಇಎನ್ ಪೊಲೀಸ್ ಠಾಣೆ, ರಾಣಿಪೇಟ್ ಪೊಲೀಸ್ ಠಾಣೆ, ತಿರುವಳ್ಳರ್ ಠಾಣೆ, ಕಡಲೂರು ಠಾಣೆಗಳಲ್ಲಿ ಮಾಹಿತಿ ಪಡೆದುಕೊಂಡರು. ಆರೋಪಿತರ ವಿರುದ್ದ ಪ್ರಕರಣ ದಾಖಲಾಗಿದ್ದು, ಹಾಲಿ ವಿರುಧನಗರ ಜೈಲಿನಲ್ಲಿ ಇರುವುದಾಗಿ ತಿಳಿದು ಬಂದಿತ್ತು.

ಬಳಿಕ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿ ಆರೋಪಿತರ ಬಾಡಿ ವಾರೆಂಟ್ ಪಡೆದು ಜನವರಿ 22ರಂದು 3 ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ 5 ದಿನ ಪೊಲೀಸ್ ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡು ಪುನಃ ನ್ಯಾಯಾಯಲಯಕ್ಕೆ ಹಾಜರುಪಡಿಸಲಾಗಿದೆ.

ಈ ಆರೋಪಿಗಳು ಆನ್‌ಲೈನ್ ವಂಚನೆ ಮಾಡಿರುವ ಬಗ್ಗೆ ತನಿಖೆ ವೇಳೆ ಆನ್‌ಲೈನ್ ಸೈಬರ್ ಪೋರ್ಟಲ್‌ನಲ್ಲಿ ಪರಿಶೀಲಿಸಲಾಗಿ ಕರ್ನಾಟಕ ರಾಜ್ಯ ಸೇರಿದಂತೆ 19 ರಾಜ್ಯಗಳಲ್ಲಿ 216 ಆನ್‌ಲೈನ್ ದೂರುಗಳು ದಾಖಲಾಗಿರುವುದು ತಿಳಿದು ಬಂದಿದೆ. ಉಳಿದ ಆರೋಪಿಗಳ ಪತ್ತೆಗೆ ಸಿಇಎನ್ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ.

ಈ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಸಿಇಎನ್ ಪೊಲೀಸ್ ನಿರೀಕ್ಷಕ ಪ್ರಸಾದ್ ಪಿ. ಸೇರಿದಂತೆ ಅಧಿಕಾರಿ ಸಿಬ್ಬಂದಿಯನ್ನು ಪೊಲೀಸ್ ಅಧೀಕ್ಷಕ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ. ಸಂತೋಷ್, ಜಿ. ಮಂಜುನಾಥ ಅವರು ಪ್ರಶಂಸಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment