ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮಸ್ತ್‌ ಮಜಾ ನೀಡಿದ ಫ್ಯಾಷನ್‌ ಮಸ್ತಿ: ಹುಲಿ ಕಾರ್ತಿಕ್ ತಂಡದ ಹಾಸ್ಯ ರಸದೂಟ!

On: May 10, 2025 7:01 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-10-05-2025

ದಾವಣಗೆರೆ: ದಾವಣಗೆರೆ ಜಿಎಂ ವಿವಿ ಆವರಣದ ಆಂಪಿಥಿಯೇಟರ್ ನಲ್ಲಿ ಆಯೋಜಿಸಿದ್ದ ಫ್ಯಾಷನ್ ಮಸ್ತ್ ಮಸ್ತ್ ಆಗಿತ್ತು. ಹುಲಿ ಕಾರ್ತಿಕ್ ತಂಡದ ಹಾಸ್ಯ ಕಾರ್ಯಕ್ರಮ ನೋಡುಗರಿಗೆ ರಸದೂಟ ನೀಡಿತು.

ಮಲ್ಲಿಕಾ ಉತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪ್ಯಾಷನ್‌ ಮಸ್ತಿಯಲ್ಲಿ ಸುಮಾರು 6 ವಿವಿಧ ಕಾಲೇಜ್‌ಗಳ ವಿದ್ಯಾರ್ಥಿಗಳು 14 ತಂಡಗಳಾಗಿ ದೇವರುಗಳ ವೇಷ ಭೂಷಣ ಸೇರಿದಂತೆ ಸಾಂಸ್ಕೃತಿಕ ಕಲೆ ಬಿಂಬಿಸುವ ಉಡುಪುಗಳು ಮತ್ತು
ವಿಶೇಷ ವೇಷ ಭೂಷಣಗಳ ಪ್ರದರ್ಶಿಸುತ್ತಾ ಮಿಂಚಿದರು.

ಕ್ಲಾಸಿಕಲ್ ಡ್ಯಾನ್ಸ್ ಸೋಲೋ, ಮೈಮ್ಸ್‌, ಸೋಲೋ ಸಿಂಗಿಂಗ್ – ಫಿಲ್ಮಿ, ಮ್ಯಾಡ್‌ ಆಡ್ಸ್‌, ಗ್ರೂಪ್ ಡ್ಯಾನ್ಸ್ ಜಾನಪದ, ಪ್ರತಿಭಾ ಪ್ರದರ್ಶನವಿತ್ತು. ಈ ಉತ್ಸವದ ಅಂಗವಾಗಿ ರಂಗೋಲಿ, ಮೆಹಂದಿ, ಛಾಯಾಗ್ರಹಣ, ಚಿತ್ರಕಲೆ, ಸ್ಟ್ಯಾಂಡಪ್ ಹಾಸ್ಯ, ವಾದ್ಯ ನುಡಿಸುವಿಕೆ- ತಾಳವಾದ್ಯೇತರ, ವಾದ್ಯ ನುಡಿಸುವಿಕೆ- ತಾಳವಾದ್ಯ, ಸಂಗೀತ ಕೊಲಾಜ್, ಮುಖ ಚಿತ್ರಕಲೆ, ಸೃಜನಾತ್ಮಕ ಬರವಣಿಗೆ (ಕಾನ್ ಮತ್ತು ಇಂಗ್ಲಿಷ್), ಚರ್ಚೆ, ಏಕವ್ಯಕ್ತಿ ಗಾಯನ – ಭಾವಗೀತೆ, ಕಿರುಚಿತ್ರ ನಿರ್ಮಾಣ ಗಳಂತಹ ಪ್ರೀ ಇವೆಂಟ್ಸ್‌ಗಳನ್ನು ನಡೆಸಲಾಯಿತು.

ಈ ಅದ್ದೂರಿ ಸಮಾರಂಭವು ಇಂಟರ್ ಕಾಲೇಜ್ ಫೆಸ್ಟಿವಲ್ ಆಗಿದ್ದು, ಈ ಸಮಾರಂಭಕ್ಕೆ ದಾವಣಗೆರೆ ಸೇರಿದಂತೆ ಚಿತ್ರದುರ್ಗ, ಶಿವಮೊಗ್ಗ, ರಾಣೇಬೆನ್ನೂರಿನ, ಹಾವೇರಿ ಇಂಜಿನಿಯರಿಂಗ್‌ ಮತ್ತು ಪದವಿಯ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.

ಹುಲಿ ಕಾರ್ತಿಕ್‌ ತಂಡದಿಂದ ಹಾಸ್ಯ ಸಂಜೆ : ವೇದಿಕೆ ಸಮಾರಂಭದಲ್ಲಿ ವಿಶೇಷವಾಗಿ ಮಜಾಭಾರತ ಖ್ಯಾತಿಯ ಹಾಸ್ಯ ನಟರಾದ ಹುಲಿ ಕಾರ್ತಿಕ್‌, ಜಗ್ಗಪ್ಪ ಮತ್ತು ಸುಶ್ಮಿತಾ ದಂಪತಿ ತಮ್ಮ ಹಾಸ್ಯದ ಸ್ಕಿಟ್‌ ಗಳ ಮೂಲಕ ನೆರೆದಿದ್ದವರಿಗೆ ನಗೆಯನ್ನು ತರಿಸಿ ರಂಜಿಸಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment