ಬೆಂಗಳೂರು: ಖ್ಯಾತ ರಿಯಾಲಿಟಿ ಶೋ ‘ಬಿಗ್ ಬಾಸ್ 19’ ರನ್ನರ್ ಅಪ್ ಫರ್ಹಾನಾ ಭಟ್ ಅವರ ಕುಟುಂಬದಲ್ಲಿ ದೊಡ್ಡ ಮಟ್ಟದ ಬಿರುಕು ಮೂಡಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಫರ್ಹಾನಾ ಅವರ ಆಪ್ತ ಮೂಲಗಳು ಹಾಗೂ ಕುಟುಂಬದ ಸದಸ್ಯರಿಂದಲೇ ಪರಸ್ಪರ ವಿರುದ್ಧ ಹೇಳಿಕೆಗಳು ಹೊರಬೀಳುತ್ತಿದ್ದು, ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಸಹೋದರಿ ಫೈಜಾನಾ ಮಾಡಿದ ಗಂಭೀರ ಆರೋಪಗಳೇನು?
ಫರ್ಹಾನಾ ಭಟ್ ಅವರ ಸೋದರಿ ಎಂದು ಹೇಳಿಕೊಂಡಿರುವ ಫೈಜಾನಾ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. “ನಾವು ಒಟ್ಟಿಗೆ ಬೆಳೆದಿದ್ದೇವೆ, ಕಷ್ಟದ ದಿನಗಳಲ್ಲಿ ಪರಸ್ಪರ ಬೆಂಬಲವಾಗಿ ನಿಂತಿದ್ದೇವೆ. ಆದರೆ ಫರ್ಹಾನಾ ಬಿಗ್ ಬಾಸ್ ಮನೆ ಪ್ರವೇಶಿಸಿದ ನಂತರ ನಮ್ಮ ಸಂಬಂಧ ಸಂಪೂರ್ಣ ಬದಲಾಯಿತು. ಅವಳು ನನ್ನನ್ನು ಸಾರ್ವಜನಿಕವಾಗಿ ತನ್ನ ಸಹೋದರಿ ಎಂದು ಒಪ್ಪಿಕೊಳ್ಳಲು ನಿರಾಕರಿಸಿದಳು. ಇದು ನನಗೆ ತೀವ್ರ ಮುಜುಗರ ಮತ್ತು ನೋವು ತಂದಿದೆ” ಎಂದು ಫೈಜಾನಾ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ, ಫರ್ಹಾನಾ ಹಾಗೂ ತಾಯಿ ಅಫ್ರೋಜಾ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ನಾನು ಕಾರಣ ಎಂದು ವರ್ಷಗಳಿಂದ ನನ್ನ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಮುಂಬೈನಲ್ಲಿ ತಾಯಿ ಅಫ್ರೋಜಾ ಅವರು ಫರ್ಹಾನಾ ಜೊತೆ ಇದ್ದಾಗ ಕೆಲವು ಘಟನೆಗಳು ನಡೆದಿವೆ. ಮಾನಸಿಕವಾಗಿ ನೊಂದ ತಾಯಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಈ ವಿಷಯದಲ್ಲಿ ಪೊಲೀಸರು ಕೂಡ ಮಧ್ಯಪ್ರವೇಶಿಸಿದ್ದರು ಎಂದು ಫೈಜಾನಾ ಗಂಭೀರವಾಗಿ ಆಪಾದಿಸಿದ್ದಾರೆ.
ಮಗಳ ಬೆಂಬಲಕ್ಕೆ ನಿಂತ ತಾಯಿ ಅಫ್ರೋಜಾ; ಖಡಕ್ ತಿರುಗೇಟು!
ಫೈಜಾನಾ ಅವರ ಈ ಆರೋಪಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಫರ್ಹಾನಾ ಅವರ ತಾಯಿ ಅಫ್ರೋಜಾ ವಿಡಿಯೋ ಒಂದನ್ನು ಬಿಡುಗಡೆ ಮಾಡಿ ಮಗಳ ಬೆಂಬಲಕ್ಕೆ ನಿಂತಿದ್ದಾರೆ. “ಫರ್ಹಾನಾ ನನ್ನನ್ನು ಮನೆಯಿಂದ ಹೊರಹಾಕಿದ್ದಾಳೆ ಎಂಬುದೆಲ್ಲಾ ಶುದ್ಧ ಸುಳ್ಳು. ನನ್ನ ಮಗಳ ಮನೆಯಿಂದ ನನ್ನನ್ನು ಹೊರಹಾಕಲು ಯಾರಿಗೂ ಅಧಿಕಾರವಿಲ್ಲ. ಫರ್ಹಾನಾ ಎಂದಿಗೂ ನನ್ನ ಮಗಳೇ, ಅವಳು ಇಂತಹ ತಪ್ಪು ಕೆಲಸ ಮಾಡಲು ಸಾಧ್ಯವೇ ಇಲ್ಲ” ಎಂದು ಕಣ್ಣೀರಿಡುತ್ತಲೇ ಸ್ಪಷ್ಟನೆ ನೀಡಿದ್ದಾರೆ.
ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಕೆಲವು ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳು ಸಂಪೂರ್ಣ ನಕಲಿ ಎಂದು ತಳ್ಳಿಹಾಕಿರುವ ಅಫ್ರೋಜಾ, ನನ್ನ ಮಗಳ ಹೆಸರಿಗೆ ಕಳಂಕ ತರಲು ಯತ್ನಿಸುತ್ತಿರುವವರಿಗೆ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಮೌನ ವಹಿಸಿರುವ ಫರ್ಹಾನಾ ಭಟ್:
ಇಷ್ಟೆಲ್ಲಾ ಹೈಡ್ರಾಮಾ ನಡೆಯುತ್ತಿದ್ದರೂ ಬಿಗ್ ಬಾಸ್ ಸ್ಟಾರ್ ಫರ್ಹಾನಾ ಭಟ್ ಮಾತ್ರ ಈ ಬಗ್ಗೆ ಎಲ್ಲೂ ತುಟಿ ಬಿಚ್ಚಿಲ್ಲ. ಇತ್ತೀಚೆಗಷ್ಟೇ ಕೇಪ್ ಟೌನ್‌ನಲ್ಲಿ ‘ಖತ್ರೋನ್ ಕೆ ಕಿಲಾಡಿ ಸೀಸನ್ 15’ ರಿಯಾಲಿಟಿ ಶೋ ಚಿತ್ರೀಕರಣ ಮುಗಿಸಿ ಬಂದಿರುವ ಅವರು, ಸದ್ಯಕ್ಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಸದ್ಯಕ್ಕೆ ಈ ವಿವಾದ ಕೇವಲ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಿಗೆ ಸೀಮಿತವಾಗಿದ್ದು, ಯಾವುದೇ ಅಧಿಕೃತ ಪುರಾವೆಗಳು ಲಭ್ಯವಾಗಿಲ್ಲ.
- Afroza response
- Bigg Boss 19 runner up
- entertainment news
- Faizana claims
- Farrhana Bhatt
- Farrhana Bhatt family feud
- Farrhana Bhatt Kannada News
- Farrhana Bhatt sister
- Khatron Ke Khiladi 15
- viral social media controversy
- ಅಫ್ರೋಜಾ ವಿಡಿಯೋ
- ಫರ್ಹಾನಾ ಭಟ್
- ಫರ್ಹಾನಾ ಭಟ್ ಕೌಟುಂಬಿಕ ಕಲಹ
- ಫೈಜಾನಾ ಆರೋಪ
- ಬಿಗ್ ಬಾಸ್ 19 ಫರ್ಹಾನಾ ಭಟ್
- ಬಿಗ್ ಬಾಸ್ ಕನ್ನಡ ಸುದ್ದಿ
- ಮನರಂಜನೆ ಸುದ್ದಿ





Leave a comment