SUDDIKSHANA KANNADA NEWS/ DAVANAGERE/ DATE:21-09-2024
ದಾವಣಗೆರೆ: ಮಹಿಳಾ ಅಭಿವೃದ್ಧಿ ನಿಗಮ ವತಿಯಿಂದ ಪ್ರಸ್ತಕ ಸಾಲಿಗೆ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಗಳಡಿ ಸಹಾಯಧನಕ್ಕಾಗಿ ಸೇವಾಸಿಂಧು ಪೋರ್ಟಲ್ ಮೂಲಕ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ರಾಜಾನಾಯ್ಕ ತಿಳಿಸಿದ್ದಾರೆ.
ಶಿಶಿಕ್ಷು ತರಬೇತಿ ಮತ್ತು ಉದ್ಯೋಗ ಮೇಳ:
ಬಾಪೂಜಿ ಪಾಲಿಟೆಕ್ನಿಕ್ ಶಾಬನೂರು, ದಾವಣಗೆರೆ, ಬೋರ್ಡ್ ಆಫ್ ಅಪ್ರೆಂಟಿಶಿಪ್ ತರಬೇತಿ ಕೇಂದ್ರ ಚೆನ್ನೈ (ದಕ್ಷಿಣ ವಲಯ) ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಬಾಪೂಜಿ ಪಾಲಿಟೆಕ್ನಿಕ್ ಶಾಮನೂರು ಕಾಲೇಜಿನಲ್ಲಿ ಶಿಶಿಕ್ಷು ತರಬೇತಿ ಹಾಗೂ ಉದ್ಯೋಗ ಮೇಳ ಕಾರ್ಯಕ್ರಮ ಏರ್ಪಡಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅಥಿತಿಯಾದ ಬಿ.ಐ.ಇ.ಟಿ ಕಾಲೇಜಿನ ನಿರ್ದೇಶಕರಾದ ಪ್ರೊ. ವೈ ವೃಷಬೇಂದ್ರಪ್ಪ ಮಾತನಾಡಿ ಅಭ್ಯರ್ಥಿಗಳು ಹೆಚ್ಚಿನ ಸ್ಟೈಫಂಡ್ ಮತ್ತು ಕೌಶಲ್ಯ ತರಬೇತಿಗಳು ಲಭ್ಯವಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಬಾಪೂಜಿ ಪಾಲಿಟೆಕ್ನಿಕ್ನ ಪ್ರಾಚಾರ್ಯರಾದ ಪುಷ್ಪಲತಾ ನಾಡಿಗ್ ಅಧ್ಯಕ್ಷತೆ ವಹಿಸಿ ಅಪ್ರೆಂಟಿಶಿಪ್ ಮತ್ತು ಉದ್ಯೋಗ ಮೇಳ ಕುರಿತು ವಿವರಣೆ ನೀಡಿದರು.
ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಬೋರ್ಡ್ ಆಫ್ ಅಪ್ರೆಂಟಿಶಿಪ್ ಸಹ ನಿರ್ದೇಶಕರಾದ ರಾಹುಲ್ ಅಸಾಟೆ ಅಭ್ಯರ್ಥಿಗಳಿಗೆ ನ್ಯಾಟ್ಸ್ ತಂತ್ರಾಂಶದಲ್ಲಿ ಹೇಗೆ ನೂಂದಾಯಿಸಿಕೊಂಡು ತರಬೇತಿ ಹಾಗು ಕೌಶಲ್ಯಗಳನ್ನು ಪಡೆಯಬೇಕೆಂದು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಬೋರ್ಡ್ ಆಫ್ ಅಪ್ರೆಂಟಿಶಿಪ್ ಸಹ ನಿರ್ದೇಶಕರಾದ ಸುರೇಶ್ ಡಿ, ಮತ್ತು ದಿಲೀಪ್ ಎಸ್.ಎನ್, ಹಾಗೂ ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು, ಉಪನ್ಯಾಸಕರುಗಳು, ಸಿಬ್ಬಂದಿ ವರ್ಗದವರು, 14 ವಿವಿಧ ಖಾಸಗಿ ಮತ್ತು ಸರ್ಕಾರಿ ಕಂಪನಿಗಳು, ಸುಮಾರು 250 ಅಭ್ಯರ್ಥಿಗಳು ಭಾಗವಹಿಸಿದ್ದರು.