SUDDIKSHANA KANNADA NEWS/ DAVANAGERE/ DATE:07-02-2024
ದಾವಣಗೆರೆ: ಕೆಲವು ತಿಂಗಳ ಹಿಂದೆ ಜಿಲ್ಲಾ ಬಿಜೆಪಿಯಲ್ಲಿ ಸಣ್ಣದೊಂದು ಗೊಂದಲ ಮೂಡಿಸಿದ್ದ ಜಗಳೂರು ಮಾಜಿ ಶಾಸಕ ಟಿ.ಗುರುಸಿದ್ಧನಗೌಡ ಮತ್ತು ಡಾ. ರವಿಕುಮಾರ್ ಟಿ.ಜಿ. ಅವರ ಉಚ್ಛಾಟನೆ ಪ್ರಹಸನಕ್ಕೆ ತೆರೆ ಬಿದ್ದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಬೆಂಗಳೂರಿನ ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಜಿ ಶಾಸಕ ಟಿ. ಗುರುಸಿದ್ಧನಗೌಡ ಮತ್ತು ಡಾ. ರವಿಕುಮಾರ್ ಟಿ.ಜಿ. ಅವರು ಬಿಜೆಪಿಯ ಅಧಿಕೃತ ಸದಸ್ಯರು ಎಂದು
ಮತ್ತೊಮ್ಮೆ ದೃಢಪಡಿಸಿದ್ದಾರೆ.
ಪಕ್ಷದ ಶಾಲು ಮತ್ತು ಬಾವುಟ ನೀಡುವ ಮೂಲಕ ಟಿ. ಗುರುಸಿದ್ಧನಗೌಡ ಮತ್ತು ಡಾ. ರವಿಕುಮಾರ್ ಟಿ.ಜಿ. ಅವರಿಗೆ ಆತ್ಮೀಯವಾಗಿ ಪುನರಾಗಮನ ಕೋರಿದರು.
ಈ ವೇಳೆ ಮಾತನಾಡಿದ ಟಿ. ಗುರುಸಿದ್ಧನಗೌಡ ಅವರು ಮಾಜಿ ಶಾಸಕರನ್ನು ಉಚ್ಛಾಟನೆ ಮಾಡುವ ಅಧಿಕಾರ ಜಿಲ್ಲಾ ಘಟಕಗಳಿಗೆ ಇರುವಿದಿಲ್ಲ. ಜತೆಗೆ, ಯಾವುದೇ ನೊಟೀಸ್ ನೀಡದೆಯೇ, ಸ್ಪಷ್ಟನೆಯನ್ನೂ ಕೇಳದೆ
ಪತ್ರಿಕೆಯಲ್ಲಿ ಉಚ್ಛಾಟನೆ ಎಂಬ ಸುದ್ದಿ ಹಬ್ಬಿಸಿದ್ದರು. ಇದೆಲ್ಲವೂ ಸಣ್ಣತನ ಎಂದು ನಿರ್ಲಕ್ಷ ಮಾಡಿದ್ದರೂ ಕೂಡ ವೈಯುಕ್ತಿವಾಗಿ ಈ ಸುದ್ದಿಯಿಂದ ನೋವಾಗಿತ್ತು. ಇಂದು ಬಿ. ವೈ. ವಿಜಯೇಂದ್ರ ಅವರು ನನ್ನ
ಪಕ್ಷ ನಿಷ್ಠೆಗೆ ತಕ್ಕ ಗೌರವ ನೀಡಿದ್ದಾರೆ. ಎಂದಿನಂತೆ ಪಕ್ಣ ಸಂಘಟನೆ ಕಾರ್ಯವನ್ನು ಮುಂದುವರಿಸಲಿದ್ದೇವೆ ಎಂದು ಹೇಳಿದ್ದಾರೆ.