SUDDIKSHANA KANNADA NEWS/ DAVANAGERE/ DATE:24-11-2024
ನವದೆಹಲಿ: ಭಾರತದಲ್ಲಿನ ಚುನಾವಣಾ ವ್ಯವಸ್ಥೆಯ ಬಗ್ಗೆ esla ಸಿಇಒ ಎಲೋನ್ ಮಸ್ಕ್ ಶ್ಲಾಘಿಸಿದ್ದಾರೆ. ಮಾತ್ರವಲ್ಲ, ಭಾರತದಲ್ಲಿ ಒಂದೇ ದಿನದಲ್ಲಿ 640 ಮಿಲಿಯನ್ ಮತಗಳ ಎಣಿಕೆ ಪ್ರಕ್ರಿಯೆ ನಡೆಸಿದೆ. ಆದ್ರೆ, ಯುಎಸ್ ಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಭಾರತದಲ್ಲಿ ಮಹಾರಾಷ್ಟ್ರ, ಜಾರ್ಖಂಡ್, ಉಪಚುನಾವಣೆಗಳು ಸೇರಿದಂತೆ ಒಂದೇ ದಿನದಲ್ಲಿ ಭಾರತವು 640 ಮಿಲಿಯನ್ ಮತಗಳನ್ನು ಎಣಿಸಿದೆ. ಕೇಂದ್ರ ಚುನಾವಣಾ ಆಯೋಗದ ಕಾರ್ಯವೈಖರಿಯನ್ನೂ ಶ್ಲಾಘಿಸಿದ್ದಾರೆ.
ಎಲೋನ್ ಮಸ್ಕ್ ಭಾರತದ ಚುನಾವಣಾ ವ್ಯವಸ್ಥೆಗೆ ಪ್ರಶಂಸೆ ವ್ಯಕ್ತಪಡಿಸುವ ಜೊತೆಗೆ ಯುಎಸ್ ಮತದಾನ ಪ್ರಕ್ರಿಯೆಗೆ ಲೇವಡಿ ಮಾಡಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿ ಇನ್ನೂ ಮತದಾನವನ್ನು ಕರೆಯದ ಯುಎಸ್ ಪ್ರಕ್ರಿಯೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ. “ಭಾರತವು ಒಂದು ದಿನದಲ್ಲಿ 640 ಮಿಲಿಯನ್ ಮತಗಳನ್ನು ಹೇಗೆ ಎಣಿಸಿತು” ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಲೇಖನವನ್ನು ಹಂಚಿಕೊಂಡ X ಪೋಸ್ಟ್‌ಗೆ ಮಸ್ಕ್ ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ ಭಾರತದಲ್ಲಿ, ಮೋಸ ಮಾಡುವುದು ಅವರ ಚುನಾವಣೆಗಳ ಪ್ರಾಥಮಿಕ ಗುರಿಯಲ್ಲ” ಎಂಬ ಶೀರ್ಷಿಕೆಯನ್ನು ಪೋಸ್ಟ್ ಮಾಡಲಾಗಿದೆ.
ಎಕ್ಸ್ ಪೋಸ್ಟ್ : https://twitter.com/elonmusk?
ಎಲೋನ್ ಮಸ್ಕ್ ಭಾರತದ ಚುನಾವಣಾ ಪ್ರಕ್ರಿಯೆಯನ್ನು ಶ್ಲಾಘಿಸಿದ್ದಾರೆ. ಪೋಸ್ಟ್ ಅನ್ನು ಉಲ್ಲೇಖಿಸಿದ ಮಸ್ಕ್, “ಭಾರತವು 1 ದಿನದಲ್ಲಿ 640 ಮಿಲಿಯನ್ ಮತಗಳನ್ನು ಎಣಿಸಿದೆ. ಕ್ಯಾಲಿಫೋರ್ನಿಯಾ ಇನ್ನೂ ಮತ ಎಣಿಕೆಯಲ್ಲಿದೆ ಎಂದು ಲೇವಡಿ ಮಾಡಿದ್ದಾರೆ.