ಭುವನೇಶ್ವರ: ಭಾರತೀಯ ರೈಲ್ವೆ ವಲಯದ ಈಸ್ಟ್ ಕೋಸ್ಟ್ ರೈಲ್ವೆ (ECoR), ಆಕ್ಟ್ ಅಪ್ರೆಂಟಿಸ್ 2026-27ನೇ ಸಾಲಿನ ಬೃಹತ್ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ರೈಲ್ವೆ ರಿಕ್ರೂಟ್‌ಮೆಂಟ್ ಸೆಲ್ (RRC) ಭುವನೇಶ್ವರ ಮೂಲಕ ಒಟ್ಟು 1,599 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆ ಮತ್ತು ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಶೇಕಡಾ 50% ಅಂಕಗಳೊಂದಿಗೆ 10ನೇ ತರಗತಿ (SSLC) ಹಾಗೂ NCVT/SCVT ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಪಟ್ಟ ಟ್ರೇಡ್‌ನಲ್ಲಿ ITI ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳ ವಯಸ್ಸು 15 ರಿಂದ 24 ವರ್ಷದೊಳಗಿರಬೇಕು (SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಗೆ 3 ವರ್ಷ ಹಾಗೂ PwBD ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ).
ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಶುಲ್ಕ:
ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಅಭ್ಯರ್ಥಿಗಳು SSLC ಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ನೇರ ಆಯ್ಕೆ ಮಾಡಲಾಗುತ್ತದೆ. ಸಾಮಾನ್ಯ ಮತ್ತು OBC ವರ್ಗದ ಗಂಡು ಮಕ್ಕಳಿಗೆ 100 ರೂ. ಅರ್ಜಿ ಶುಲ್ಕವಿದ್ದು, SC, ST, PwBD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ 26 ಆಗಸ್ಟ್ 2026 ರಿಂದ 15 ಸೆಪ್ಟೆಂಬರ್ 2026ರ ಸಂಜೆ 5:00 ಗಂಟೆಯವರೆಗೆ ಅಧಿಕೃತ ವೆಬ್‌ಸೈಟ್ www.rrcbbs.org.in ನಲ್ಲಿ ಅರ್ಜಿ ಸಲ್ಲಿಸಬಹುದು.





Leave a comment