SUDDIKSHANA KANNADA NEWS/ DAVANAGERE/ DATE:03-01-2025
ಬೆಂಗಳೂರು: ಜಮೀನಿನ ವ್ಯಾಜ್ಯ ಸಂಬಂಧ ದೂರು ನೀಡಲು ಬಂದಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಮಧುಗಿರಿ ಡಿವೈಎಸ್ಪಿ ಬಂಧಿಸಲಾಗಿದ್ದು, ಜೈಲಿನ ಹಿಂದೆ ಕಳುಹಿಸಲಾಗಿದೆ.
ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಮಹಿಳೆ ಜೊತೆಗೆ ನಡೆಸಿದ್ದ ರಾಸಲೀಲೆ ವಿಡಿಯೋ ವೈರಲ್ ಆಗಿತ್ತು. ಆ ಬಳಿಕ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಮಚಂದ್ರಪ್ಪ ವಿರುದ್ದ ಎಫ್ ಐ ಆರ್ ದಾಖಲಿಸಲಾಗಿತ್ತು. ಆ ಬಳಿಕ ಬಂಧನವೂ ಆಗಿತ್ತು.
ಜೈಲಿನ ಕಂಬಿನ ಹಿಂದೆ ರಾಸಲೀಲೆ ಡಿವೈಎಸ್ಪಿ!
ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ನ್ಯಾಯಾಧೀಶರ ಮುಂದೆ ರಾಮಚಂದ್ರಪ್ಪರನ್ನು ಹಾಜರುಪಡಿಸಲಾಯಿತು. ಬಳಿಕ ಜೈಲಿನ ಕಂಬಿ ಹಿಂದೆ ನ್ಯಾಯಾಧೀಶರು ಕಳುಹಿಸಿದರು.
ರಾಸಲೀಲೆ ವಿಡಿಯೋ ಪ್ರಕರಣದಲ್ಲಿ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಅವರನ್ನು ಸಸ್ಪೆಂಡ್ ಮಾಡಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶಿಸಿದ್ದಾರೆ. ರಾಸಲೀಲೆ ಪ್ರಕರಣ ಹೊರ ಬರುತ್ತಿದ್ದಂತೆ ಪೊಲೀಸ್ ಇಲಾಖೆಗೆ ಮುಜುಗರ ತಂದಿತ್ತು, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರೂ ಸಹ ಕೂಡಲೇ ಕ್ರಮ ಜರುಗಿಸುವಂತೆ ಸೂಚಿಸಿದ್ದರು. ವಿಡಿಯೋ ವೈರಲ್ ಹಾಗೂ ಸಂತ್ರಸ್ತ ಮಹಿಳೆ ದಾಖಲಿಸುವ ದೂರು ಆಧರಿಸಿ ಕಾನೂನು ಕ್ರಮ ಜರುಗಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಬಳಿಕ ಪ್ರಾಥಮಿಕ ವಿಚಾರಣೆ ನಡೆಸಿ ರಾಮಚಂದ್ರಪ್ಪರನ್ನು ಬಂಧಿಸಲಾಗಿದೆ.
ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಲು ಮಹಿಳೆಯೊಬ್ಬರ ಜೊತೆ ತನ್ನ ಕಚೇರಿಯ ವಿಶ್ರಾಂತಿ ಕೊಠಡಿಯಲ್ಲಿ ರಾಸಲೀಲೆ ನಡೆಸಿದ್ದರು ಎಂಬ ದೂರು ಕೇಳಿ ಬಂದಿತ್ತು. ಮಧುಗಿರಿ ಡಿವೈಎಸ್ಪಿ ಕಚೇರಿಯಲ್ಲಿ ನಡೆದಿದೆ ಎನ್ನಲಾಗಿದ್ದು, ಈ ಸಂಬಂಧ ತನಿಖೆ ಮುಂದುವರಿಸಲಾಗಿದೆ.