ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ವಿಶೇಷಚೇತನರ ಮಾಸಿಕ ಪಿಂಚಣಿ ಹೆಚ್ಚಳಕ್ಕೆ ಸಂಸತ್ ನಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

On: March 11, 2025 6:32 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:11-03-2025

ದಾವಣಗೆರೆ: ಇಂದಿರಾಗಾಂಧಿ ರಾಷ್ಟ್ರೀಯ ವಿಶೇಷಚೇತನರ ಪಿಂಚಣಿ ಯೋಜನೆಯಡಿ ಫಲಾನುಭವಿಗಳಿಗೆ ತಿಂಗಳಿಗೆ ಕೇವಲ‌ 300 ರೂಪಾಯಿ ನೀಡಲಾಗುತ್ತಿದೆ.ಇದರಿಂದ ಮೂಲಭೂತ ಅಗತ್ಯಗಳನ್ನು ಪೂರೈಸಲು ಸಾಧ್ಯವಿಲ್ಲ‌ ಆದ್ದರಿಂದ‌ ಪಿಂಚಣಿ ಮೊತ್ತ ಏರಿಕೆಗೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯಿಸಿದ್ದಾರೆ.

ನವದೆಹಲಿಯ ಸಂಸತ್ತಿನಲ್ಲಿ ನಡೆದ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಸಂಸದರು ವಿಶೇಷಚೇತನರು‌ ತಮ್ಮ ಮೂಲಭೂತ ಅಗತ್ಯಗಳನ್ನು‌ ನೋಡಿಕೊಳ್ಳಲು ಅಲ್ಪ ಮೊತ್ತದ‌ ಮಾಸಾಶನದಿಂದ‌ ಸಾಧ್ಯವಾಗುವುದಿಲ್ಲ ಆದ್ದರಿಂದ ಮಾಸಾಶನ ಹೆಚ್ಚಿಸಬೇಕೆಂದು‌ ಒತ್ತಾಯಿಸಿದರು.

ಪ್ರಸ್ತುತ, 80% ಅಥವಾ ಅದಕ್ಕಿಂತ ಹೆಚ್ಚಿನ ಅಂಗವಿಕಲತೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಅರ್ಹತೆ ಇದೆ. 40% ಅಥವಾ ಹೆಚ್ಚು ಅಂಗವಿಕಲತೆಯನ್ನು ಹೊಂದಿರುವವರಿಗೂ ಈ ಯೋಜನೆಯ ಲಾಭವನ್ನು ವಿಸ್ತರಿಸುವುದರ ಬಗ್ಗೆ ಪರಿಗಣಿಸಬೇಕೆಂದು ಸದನದ ಗಮನಸೆಳೆದರು.ಸಂಸದರ ಪ್ರಶ್ನೆಗೆ ಕೇಂದ್ರ ಗ್ರಾಮಿಣ ವಿಕಾಸ್ ಸಚಿವರಾದ ಶಿವರಾಜ್ ಸಿನ್ಹಾ ಚೌಹಾಣ್ ಉತ್ತರಿಸುತ್ತಾ ಕೇಂದ್ರ ಸರ್ಕಾರದಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪಗಳಿಲ್ಲ ಆದರೆ ಆಯಾ ರಾಜ್ಯಗಳ ವ್ಯಾಪ್ತಿಯಲ್ಲಿ ವಿಶೇಷಚೇತನರ ಮಾಸಾಶನ ಹೆಚ್ಚಳ ಮಾಡಬಹುದಾಗಿದೆ ಎಂದರು. ದಾವಣಗೆರೆ ಸಂಸದರು ವಿಶೇಷಚೇತನರ ಮಾಸಿಕ ಪಿಂಚಣಿ ಹೆಚ್ಚಳ ಕುರಿತು ಸದನದ ಗಮನಸೆಳೆದಿರುವುದು ವಿಶೇಷವಾಗಿತ್ತು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment