SUDDIKSHANA KANNADA NEWS/ DAVANAGERE/ DATE:26-07-2024
ಮದುವೆಗೂ ಮುನ್ನ ಗಂಡು-ಹೆಣ್ಣಿನ ಜಾತಕವನ್ನು ಪರೀಕ್ಷಿಸಬೇಕು. ಒಂದು ವೇಳೆ ಕುಜ ದೋಷ ಇದ್ದರೆ, ಕುಜದೋಷ ಇರುವಂತವರ ಜೊತೆ ಮದುವೆ ಮಾಡಬೇಕು. ಕುಜ ದೋಷವಿದ್ದರೆ ಅದು ಮದುವೆ ಹಾಗೂ ವೈವಾಹಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಆದರೆ ನಮ್ಮ ಜಾತಕದ ಕೆಲವೊಂದು ಮನೆಯಲ್ಲಿ ಮಂಗಳನಿದ್ದರೆ ಕುಜದೋಷ ಪರಿಣಾಮ ಬೀರುವುದಿಲ್ಲ.
ಮಂಗಳ ಗ್ರಹವು ವೈವಾಹಿಕ ಜೀವನದಲ್ಲಿ ಬಹಳ ಸಂತೋಷ ಹಾಗೂ ಮದುವೆಗೆ ನೇರ ಹೊಣೆಯಾಗಿರುವನು. ದಾಂಪತ್ಯದ ಜೀವನದಲ್ಲಿ ಮಂಗಳನ ಪ್ರಭಾವವು ದಂಪತಿಗಳ ನಡುವೆ ಸುಖ ಹಾಗೂ ಕಷ್ಟ ಅನುಭವಿಸುವವರು. ಅದೇ ಮಂಗಳನು ಅಶುಭ ಸ್ಥಾನದಲ್ಲಿದ್ದಾಗ ಎಲ್ಲವನ್ನು ಕಳೆದುಕೊಂಡು ಕಷ್ಟದಲ್ಲಿರುವ ಹಾಗೆ ಮಾಡುವನು. ಹಾಗಾಗಿಯೇ ಮದುವೆಗೂ ಮುನ್ನ ಕುಂಡಲಿ ಅಥವಾ ಜಾತಕ ನೋಡುವಾಗ ಕುಜ ದೋಷವಿದೆಯೇ ಎನ್ನುವುದನ್ನು ನೋಡುತ್ತಾರೆ. ಈ ದೋಷವನ್ನು ಕುಜ ದೋಷ, ಮಾಂಗಲಿಕ ದೋಷ, ಮಂಗಲ ದೋಷ ಅಥವಾ ಭೌಮ ದೋಷವೆಂದೂ ಕರೆಯುತ್ತಾರೆ.
ಜಾತಕದಲ್ಲಿ ಮಂಗಳದೋಷ
ಜಾತಕದಲ್ಲಿ ಮಂಗಳನು ವಧು ವರರ ಎರಡನೇ ಮನೆಯಲ್ಲಿದ್ದರೆ ಮಂಗಳ ದೋಷವು ರೂಪುಗೊಳ್ಳುತ್ತದೆ. ಅದೇ ಉತ್ತರ ಭಾರತದ ಕಡೆ 1,4,7,8 ಅಥವಾ 12ನೇ ಮನೆಯಲ್ಲಿದ್ದರೆ ಕುಜ ದೋಷವು ಸಂಭವಿಸುತ್ತದೆ. ಇಂತಹ ಸಂದರ್ಭದಲ್ಲಿ ವಧು ವರರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು.
ಯಾವುದೇ ಶುಭ ಗ್ರಹಗಳೊಂದಿಗೆ ಮಂಗಳ ಗ್ರಹವು ಇಲ್ಲದಿದ್ದಾಗ ವ್ಯಕ್ತಿಯ ಜೀವನದಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಈ ಗ್ರಹವು ಶುಭ ಗ್ರಹಗಳ ಅಂಶವನ್ನು ಹೊಂದಿದ್ದರೆ ಅಥವಾ ಬುಧ, ಗುರು ಮತ್ತು ಶುಕ್ರನಸಂಯೋಗವನ್ನು ಹೊಂದಿದ್ದರೆ ದಾಂಪತ್ಯಜೀವನದಲ್ಲಿ ಮಂಗಳನು ಮಾರಕನಾಗುವುದಿಲ್ಲ.
ಕುಜನು ಯಾವ್ಯಾವ ಮನೆಯಲ್ಲಿದ್ದರೆ ಕುಜದೋಷ ಸಂಭವಿಸುವುದು? ಕುಜದೋಷಕ್ಕೆ ಏನು ಪರಿಹಾರ ಗೊತ್ತಾ?
ಜಾತಕದಲ್ಲಿನ ಮನೆಗಳು ಅಂದರೆ
ಜಾತಕದಲ್ಲಿ 1,2,4,7,8 ಮತ್ತು 12ನೇ ಮನೆಗಳು ವೈವಾಹಿಕ ಜೀವನವನ್ನು ಲೆಕ್ಕಹಾಕುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಲ್ಲಿ ಒಂದನೇ ಮನೆ ತನು ಅಂದರೆ ಆರೋಗ್ಯವನ್ನು ಸೂಚಿಸಿದರೆ, ಎರಡನೇ ಮನೆ ಧನ ಅಂದರೆ ಸಂಪತ್ತು, ಮೂರನೇ ಮನೆ ಕುಟುಂಬ ಅಂದರೆ ಭಾತೃ/ ಸಹೋದರ, ಮಾತು ಮತ್ತು ಶಕ್ತಿಯನ್ನು ಸೂಚಿಸುತ್ತದೆ. ಇದರ ಜೊತೆಗೆ ನಾಲ್ಕನೇ ಮನೆ ಸಂತೋಷ ಮತ್ತು ಭೌತಿಕಸುಖವನ್ನು ಪ್ರತಿನಿಧಿಸುತ್ತದೆ. ಏಳನೇ ಮನೆ ಮದುವೆ ಅಂದರೆ ವೈವಾಹಿಕ ಜೀವನ ಮತ್ತು ಪತ್ನಿಯೊಂದಿಗೆ ಸಂಬಂಧವನ್ನು ಸೂಚಿಸುತ್ತದೆ.
ಎಂಟನೇ ಮನೆಯು ಆಯಸ್ಸು, ವಧುವಿಗೆ ಅದೃಷ್ಟ ಹಾಗೂ ಯೋಗದ ಮನೆಯಾಗಿ ಮುಖ್ಯವಾಗಿದೆ. ಇದು ಮಹಿಳೆಯ ಗಂಡ ಮತ್ತು ಆಯಸ್ಸನ್ನು ಸೂಚಿಸುತ್ತದೆ. ಜೊತಗೆ ಇದು ಸಂತೋಷವನ್ನು ಪ್ರತಿನಿಧಿಸುತ್ತದೆ. ಜ್ಯೋತಿಷ್ಯ ಗ್ರಂಥಗಳಲ್ಲಿ ಹೇಳುವಂತೆ ಮಂಗಳ ದೋಷವನ್ನು ನಿವಾರಿಸಲು ಸಾಧ್ಯವಿಲ್ಲ,ಆದರೆ ಪೂಜಾ ಶಾಂತಿ ಮಾಡಿಸುವುದರ ಮೂಲಕ ಅದರ ತೀವ್ರತೆಯನ್ನು ಕಡಿಮೆ ಮಾಡಬಹುದು. ಆದರೆ ದಾನ ,ಧರ್ಮ, ದೈವಭಕ್ತಿ ಮೂಲಕ ಕೆಲವೊಬ್ಬರ ಜಾತಕದಲ್ಲಿ ಮಾಂಗಲಿಕ ದೋಷವು ತನ್ನಿಂದ ತಾನಾಗಿಯೇ ನಿವಾರಣೆಯಾಗುತ್ತದೆ.
ಮದುವೆಯ ವಿಳಂಬಕ್ಕೆ ಈ ಕಾರಣವೂ ಇರಬಹುದು..! ಪರಿಹಾರ ಕ್ರಮಗಳು ಇಲ್ಲಿದೆ ನೋಡಿ. ಈ ಕೆಳಕಂಡ ರಾಶಿಯಲ್ಲಿದ್ದಾಗ ಮಂಗಳನು ಪರಿಣಾಮ ಬೀರುವುದಿಲ್ಲ.
ಮಂಗಳ ಗ್ರಹವು ಈ ನಾಲ್ಕು ರಾಶಿಚಿಹ್ನೆಗಳಲ್ಲಿದ್ದಾಗ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಆ ರಾಶಿಗಳು ಯಾವುದೆಂದರೆ ಮೇಷ, ಕಟಕ, ತುಲಾ ಮತ್ತು ಮಕರ ರಾಶಿ. ಮಂಗಳನು ತನ್ನದೇ ಅಧಿಪತ್ಯವಿರುವ ರಾಶಿಗಳಾದ ಮೇಷ ಮತ್ತು ವೃಶ್ಚಿಕ ರಾಶಿ ಹಾಗೂ ಪ್ರಭಾವಶಾಲಿ ರಾಶಿಯಾದ ಮಕರದಲ್ಲಿದ್ದಾಗ ದುರುದ್ದೇಶಪೂರಿತ ಫಲವನ್ನು ನೀಡುವುದಿಲ್ಲ. ಆ ರಾಶಿಯಲ್ಲಿದ್ದಾಗ ಮಂಗಳ ದೋಷವು ನಿವಾರಣೆಯಾಗುತ್ತದೆ.
ಮಂಗಲ ದೋಷ
ಅದೇ ರೀತಿ ಸೂರ್ಯ, ಚಂದ್ರ ಮತ್ತು ಗುರುವಿನಂತಹ ಸ್ನೇಹಪರ ಗ್ರಹಗಳ ಸಂಯೋಜನೆಯಲ್ಲಿಯೂ ಮಂಗಳ ದೋಷ ಅಥವಾ ಕುಜ ದೋಷವು ನಡೆಯುವುದಿಲ್ಲ. ಜೊತೆಗೆ ಕಟಕ ರಾಶಿಯಲ್ಲೂ ಇದ್ದಾಗ ಮಂಗಳನು ದೋಷವನ್ನುಂಟು ಮಾಡುವುದಿಲ್ಲ. ಜಾತಕದ ಕೇಂದ್ರ ಮನೆಯಲ್ಲಿ ಚಂದ್ರನಿದ್ದಾಗಲೂ ಕುಜನ ದೋಷ ಪರಿಣಾಮ ಬೀರದು.
ಮಂಗಳನ ದೋಷಪೂರಿತ ಪರಿಣಾಮ
ಜಾತಕದಲ್ಲಿ ಮಂಗಳನು ಕೆಟ್ಟ ಸ್ಥಾನದಲ್ಲಿದ್ದರೆ ಅದು ವ್ಯಕ್ತಿಯ ವಿನಾಶಕ್ಕೆ ಕಾರಣವಾಗುತ್ತದೆ. ಆದರೆ ಶುಭ ಗ್ರಹ ಅಥವಾ ಸೂರ್ಯನೊಂದಿಗೆ ಮಂಗಳನು ವಕ್ರಿಯಾಗಿದ್ದರೆ ಕುಜ ದೋಷವು ಉಂಟಾಗುವುದಿಲ್ಲ. ಉತ್ತರ ಭಾರತದ ಪ್ರಕಾರ ಮಂಗಲ ದೋಷವು ಒಂದೇ ಮನೆಯಲ್ಲಿ ಅಥವಾಆ ಲಗ್ನದ ಮನೆಯಲ್ಲಿ ಮಂಗಳನಿದ್ದಾಗ ಸಂಭವಿಸುತ್ತೆ. ದಕ್ಷಿಣ ಭಾರತದಲ್ಲಿ ಕುಂಡಲಿಯ ಎರಡನೇ ಮನೆಯಲ್ಲಿ ಮಂಗಳನಿದ್ದರೆ ಕುಜ ದೋಷವೆನ್ನಲಾಗುತ್ತದೆ.
ಎರಡನೇ ಮನೆಯಲ್ಲಿ ಮಂಗಳನಿದ್ದರೆ ಕುಜ ದೋಷವಿರುತ್ತದೆ. ಇದು ಪುರುಷರಲ್ಲೂ, ಮಹಿಳೆಯರಲ್ಲೂ ಕಂಡು ಬರುವ ದೋಷವಾಗಿದೆ. ಮಹಿಳೆಯರ ಜಾತಕದಲ್ಲಿ 1,2, 4,5,7, 8, ಮತ್ತು 12ನೇ ಮನೆಯಲ್ಲಿ ಮಂಗಳನಿದ್ದರೆ ಮಾಂಗಲಿಕ ದೋಷ ಕಂಡುಬರುತ್ತದೆ. 8ನೇ ಮನೆಯು ಮಾಂಗಲ್ಯವನ್ನು ಪ್ರತಿನಿಧಿಸುವ ಮನೆಯಾದ್ದರಿಂದ ಮಹಿಳೆಯರಿಗೆ ಏಳನೇ ಮನೆಯಷ್ಟೇ ಎಂಟನೇ ಮನೆಯೂ ಬಹಳ ಮುಖ್ಯವಾಗಿರುತ್ತದೆ.
ನಿಖರವಾಗಿ ಮಂಗಳ ದೋಷವನ್ನು ಲಗ್ನ ಕುಂಡಲಿ, ಚಂದ್ರ ಮತ್ತು ಶುಕ್ರ ಕುಂಡಲಿಯಿಂದ ಲೆಕ್ಕ ಹಾಕಲಾಗುತ್ತದೆ. ಅದರ ಪರಿಣಾಮವನ್ನು ನಿರ್ಧರಿಸುವ ಮೂಲಕ, ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಹೇಳಲಾಗುತ್ತದೆ.
ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403