Home ಕ್ರೈಂ ನ್ಯೂಸ್ ಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ: “ನಾನು ಚುನಾವಣಾ ಕಣದಲ್ಲಿರಲಿಲ್ಲ, ಇದ್ದಿದ್ದರೆ ಭರ್ಜರಿ ಜಯ ಸಾಧಿಸುತ್ತಿದ್ದೆ” ಎಂದ ಡೊನಾಲ್ಡ್ ಟ್ರಂಪ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ: “ನಾನು ಚುನಾವಣಾ ಕಣದಲ್ಲಿರಲಿಲ್ಲ, ಇದ್ದಿದ್ದರೆ ಭರ್ಜರಿ ಜಯ ಸಾಧಿಸುತ್ತಿದ್ದೆ” ಎಂದ ಡೊನಾಲ್ಡ್ ಟ್ರಂಪ್!

Share
ಡೊನಾಲ್ಡ್ ಟ್ರಂಪ್
Share

ವಾಷಿಂಗ್ಟನ್: ಅಮೆರಿಕದ 2026ರ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷಕ್ಕೆ ಹಿನ್ನಡೆಯಾಗಿ ಡೆಮಾಕ್ರಟ್‌ಗಳು ಮೇಲುಗೈ ಸಾಧಿಸುತ್ತಿರುವ ಬೆನ್ನಲ್ಲೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸೋಲಿಗೆ ವಿಚಿತ್ರ ಸಮರ್ಥನೆ ನೀಡಿದ್ದಾರೆ.

ತಾವು ನೇರವಾಗಿ ಚುನಾವಣಾ ಕಣದಲ್ಲಿರಲಿಲ್ಲ, ಒಂದು ವೇಳೆ ತಾನೇ ಸ್ಪರ್ಧಿಸಿದ್ದರೆ ಪಕ್ಷವು ಭರ್ಜರಿ ಬಹುಮತದೊಂದಿಗೆ (ಲ್ಯಾಂಡ್‌ಸ್ಲೈಡ್) ಗೆಲುವು ಸಾಧಿಸುತ್ತಿತ್ತು ಎಂದು ಟ್ರಂಪ್ ಹೇಳಿದ್ದಾರೆ. ಚುನಾವಣಾ ಫಲಿತಾಂಶಗಳು ರಿಪಬ್ಲಿಕ್ ಪಕ್ಷಕ್ಕೆ ಆಘಾತ ತಂದಿರುವ ಸಂದರ್ಭದಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಚುನಾವಣೆಗೆ ಮುಂಚಿತವಾಗಿ ನಡೆದ ಚುನಾವಣಾ ಪ್ರಚಾರ ಸಭೆಗಳಲ್ಲಿ ತಾನೇ ಸ್ಪರ್ಧಿಸಿದ್ದೇನೆಂದು ಭಾವಿಸಿ ಮತಹಾಕುವಂತೆ ಟ್ರಂಪ್ ಮತದಾರರಲ್ಲಿ ಮನವಿ ಮಾಡಿದ್ದರು. ಆದರೆ ದರ ಏರಿಕೆ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಬೇಸತ್ತ ಮತದಾರರು ಡೆಮಾಕ್ರಟ್ ಪಕ್ಷದತ್ತ ಒಲವು ತೋರಿದ್ದಾರೆ. ಈ ಚುನಾವಣಾ ಫಲಿತಾಂಶದಿಂದಾಗಿ ಹೌಸ್ ಆಫ್ ರಿಪ್ರೆಸೆಂಟೇಟಿವ್ಸ್ ಮೇಲಿನ ನಿಯಂತ್ರಣ ಕಳೆದುಕೊಳ್ಳುವ ಭೀತಿಯು ರಿಪಬ್ಲಿಕ್ ಪಕ್ಷಕ್ಕೆ ಎದುರಾಗಿದೆ.

ಟ್ರಂಪ್ ಹೇಳಿಕೆ: “ನಾನು ಚುನಾವಣಾ ಕಣದಲ್ಲಿರಲಿಲ್ಲ, ಒಂದು ವೇಳೆ ನಾನು ಸ್ಪರ್ಧಿಸಿದ್ದರೆ ನಾವು ಸಂಪೂರ್ಣ ಬಹುಮತದಿಂದ ಗೆಲುವು ಸಾಧಿಸುತ್ತಿದ್ದೆವು” ಎಂದು ಟ್ರಂಪ್ ‘ಟ್ರುತ್ ಸೋಶಿಯಲ್’ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಿಪಬ್ಲಿಕ್ ಪಕ್ಷಕ್ಕೆ ಆಘಾತ: ಸೌತ್ ಕರೊಲಿನಾ ಮತ್ತು ನಾರ್ತ್ ಕರೊಲಿನಾದಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಒಹಾಯೋ ಗವರ್ನರ್ ಚುನಾವಣೆಯಲ್ಲಿ ವಿವೇಕ್ ರಾಮಸ್ವಾಮಿ ಸೋಲುಂಡಿದ್ದಾರೆ.

ಮಹಾಭಿಯೋಗದ ಭೀತಿ: ಡೆಮಾಕ್ರಟ್‌ಗಳು ಹೌಸ್ ಆಫ್ ರಿಪ್ರೆಸೆಂಟೇಟಿವ್ಸ್ ವಶಪಡಿಸಿಕೊಂಡರೆ, ಅಧ್ಯಕ್ಷ ಟ್ರಂಪ್ ವಿರುದ್ಧ ಮತ್ತೆ ತನಿಖೆಗಳು ಮತ್ತು ಮಹಾಭಿಯೋಗ (Impeachment) ಪ್ರಕ್ರಿಯೆಗಳು ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles