ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

INTRESTING STORY: ಮೇಡಂ ಮದ್ವೆಗೆ ಬರ್ಬೇಕು.. ಅಣ್ಣನ ಮುಂದೆ ಆಸೆ ವ್ಯಕ್ತಪಡಿಸಿದ್ದ ತಂಗಿ… ಪ್ರಭಾ ಮಲ್ಲಿಕಾರ್ಜುನ್ ಬರುತ್ತಿದ್ದಂತೆ ಹೇಗಿತ್ತು ಗೊತ್ತಾ ಅಣ್ಣ – ತಂಗಿ ಸಂಭ್ರಮ…?

On: February 26, 2024 3:01 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:26-02-2024

ದಾವಣಗೆರೆ: ಅಣ್ಣ.. ನಾನು ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಅಭಿಮಾನಿ. ಅವ್ರು ನನ್ನ ಮದುವೆಗೆ ಬರ್ಬೇಕು. ನಾನು ಅವರ ದೊಡ್ಡ ಅಭಿಮಾನಿ. ದಯವಿಟ್ಟು ಮದುವೆಗೆ ಮೇಡಂ ಅವರು ಬರುವಂತೆ ಆಹ್ವಾನಿಸು. ನೀನು ನನ್ನ ಮದುವೆಗೆ ನೀಡುವ ಉಡುಗೊರೆ. ತಂಗಿ ಆಸೆಯನ್ನು ಅಣ್ಣ ಈಡೇರಿಸುವ ಮೂಲಕ ತಂಗಿಯ ಮೊಗದಲ್ಲಿ ಮಂದಹಾಸ ಮತ್ತಷ್ಟು ಹೆಚ್ಚಾಗುವಂತೆ ಮಾಡಿದರು.

ಇದು ದಾವಣಗೆರೆಯ ದೇವರಾಜ ಅರಸ್ ಬಡಾವಣೆಯ ಬಿ ಬ್ಲಾಕ್ ನ ಶ್ರೀ ಶಿವಪಾರ್ವತಿ ಕಲ್ಯಾಣ ಮಂಟಪವು ಅಪರೂಪದ ಘಟನೆಗೆ ಸಾಕ್ಷಿಯಾಯ್ತು. ತಂಗಿ ಆಸೆ ಅಣ್ಣ ಈಡೇರಿಸಿದ ಅಪರೂಪದ ಪ್ರಸಂಗ. ಶೃತಿ ಎಂ. ಮಿರಜಕರ್ ತಂಗಿಯಾದರೆ ಅಣ್ಣನ ಹೆಸರು ವಿನಯ್ ಮಿರಜಕರ್.

ಲತಾ, ಮಾಲತೇಶ್ ಮಿರಜಕರ್ ದಂಪತಿ ಪುತ್ರಿ ಶೃತಿ ಎಂ. ಮಿರಜಕರ್ ಹಾಗೂ ಮೈಸೂರಿನ ಲಕ್ಷ್ಮೀ, ಎಸ್. ಕೆ. ಪುಂಡಲಿಕರಾವ್ ರ ಪುತ್ರ ಎಸ್. ಪಿ. ಸಚಿನ್ ರ ವಿವಾಹ ಶ್ರೀ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯಿತು. ಮದುವೆ ನಡೆದದ್ದರಲ್ಲಿ ವಿಶೇಷ ಏನೂ ಇಲ್ಲ. ಪ್ರಭಾ ಮಲ್ಲಿಕಾರ್ಜುನ್ ಅವರು ಮದುವೆಗೆ ಆಗಮಿಸುತ್ತಿದ್ದಂತೆ ತಂಗಿಯ ಮುಖದಲ್ಲಿ ಸಂತೋಷದ ಜೊತೆಗೆ ಆನಂದಭಾಷ್ಪ. ಅಣ್ಣನ ಮುಖದಲ್ಲಿ ತಂಗಿ ಆಸೆ ಈಡೇರಿಸಿದ ಧನ್ಯತಾ ಭಾವ ಕಂಡು ಬಂತು.

ತಂಗಿ ಆಸೆ ಈಡೇರಿಸುವ ಸಲುವಾಗಿ ಅಣ್ಣನು ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಮದುವೆಗೆ ಆಹ್ವಾನಿಸಿದ್ದ ವಿನಯ್ ಮಿರಜಕರ್ ಅವರು ಮೇಡಂ ಮದುವೆಗೆ ತಪ್ಪಿಸದೇ ಬರಬೇಕು. ತಂಗಿಯ ಆಸೆ ಈಡೇರಿಸಬೇಕು ಎಂದು ಮನವಿ ಮಾಡಿದ್ದರು.

ನನ್ನ ತಂಗಿ ನಿಮ್ಮ ದೊಡ್ಡ ಅಭಿಮಾನಿ ಎಂದು ಕೇಳಿಕೊಂಡಿದ್ದ. ಅದರಂತೆ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಆಹ್ವಾನಿಸಿದ್ದರು. ಇದನ್ನು ನೆನಪಿಟ್ಟುಕೊಂಡಿದ್ದ ಪ್ರಭಾ ಮಲ್ಲಿಕಾರ್ಜುನ್ ಅವರು ಮದುವೆಗೆ ಹೋಗಿ ವಧು ವರರನ್ನು ಹಾರೈಸಿದರು, ಆಶೀರ್ವದಿಸಿದರು. ಈ ವೇಳೆ ಆಕೆಯು ಮಲ್ಲಿಕಾರ್ಜುನ್ ಅವರ ಕಾಲಿಗೆ ಬಿದ್ದು ಶೃತಿ ಆಶೀರ್ವಾದ ಪಡೆದರು.

ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ಸೊಸೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಎಲ್ಲೆಡೆ ಸಂಚರಿಸುತ್ತಿದ್ದಾರೆ. ಎಸ್. ಎಸ್. ಕೇರ್ ಟ್ರಸ್ಟ್ ಹಾಗೂ ಎಸ್. ಎಸ್. ಹೈಟೆಕ್ ಆಸ್ಪತ್ರೆ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಎಲ್ಲರನ್ನೂ ಸೆಳೆಯುತ್ತಿದ್ದಾರೆ. ಡಾ. ಶಾಮನೂರು ಶಿವಶಂಕರಪ್ಪರ ಸೊಸೆ, ಸಚಿವರ ಪತ್ನಿ ಎಂಬ ಹಮ್ಮು ಬಿಮ್ಮು ಇಲ್ಲದೇ ಸರಳವಾಗಿ ನಡೆದುಕೊಳ್ಳುವ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಕಾಂಗ್ರೆಸ್ ಕಾರ್ಯಕರ್ತನೂ ಅಲ್ಲ, ಮುಖಂಡರೂ ಅಲ್ಲ:

ಎಂದಿನಂತೆ ತಮ್ಮ ಮನೆಯ ಮುಂಭಾಗ ಸಾರ್ವಜನಿಕರ ಸಮಸ್ಯೆ ಆಲಿಸುತ್ತಿದ್ದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕಷ್ಟ ಕೇಳುತ್ತಿದ್ದರು. ನೂರಾರು ಸಾರ್ವಜನಿಕರ ನಡುವೆ ಒಬ್ಬ ಯುವಕ ಮದುವೆ ಆಮಂತ್ರಣ ಪತ್ರಿಕೆಯನ್ನು ಹಿಡಿದುಕೊಂಡು ಮುಂದೆ ಬಂದ. ಆತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಅಲ್ಲ, ಪಕ್ಷದ ಮುಖಂಡರ ಕುಟುಂಬವೂ ಅಲ್ಲ. ಪಕ್ಷದ ಮುಖಂಡರ ಜೊತೆಯೂ ಬಂದಿರಲಿಲ್ಲ. ಆತ ಡಾ. ಪ್ರಭಾ ಮಲ್ಲಿಕಾರ್ಜುನ್ ರವರ ಕೈಗೆ ಮದುವೆ ಆಮಂತ್ರಣ ಪತ್ರಿಕೆಯನ್ನು ಕೊಟ್ಟು ತಂಗಿಯ ಮದುವೆಗೆ ಆಮಂತ್ರಿಸಿದ ರೀತಿ ವಿಶೇಷ ಆಗಿತ್ತು.

ನನ್ನ ತಂಗಿ ನಿಮ್ಮ ದೊಡ್ಡ ಅಭಿಮಾನಿ:

ನನ್ನ ತಂಗಿ ನಿಮ್ಮ ದೊಡ್ಡ ಅಭಿಮಾನಿ, ಅವಳ ಮದುವೆಗೆ ನಿಮ್ಮನ್ನು ಕರೆಸಬೇಕು ಎನ್ನುವುದು ಅವಳ ಆಸೆ, ತಾವು ದಯವಿಟ್ಟು ಅವಳ ಮದುವೆಗೆ ಬರಬೇಕು ಎಂದು ತಂಗಿಯ ಮದುವೆಗೆ ಅಣ್ಣ ಕರೆದಿದ್ದ. ಇಂದು ಅ ಅಣ್ಣನ ತಂಗಿಯ ಮದುವೆ. ಮದುವೆ ದಿನ ನೆನಪಿಟ್ಟುಕೊಂಡು ಮದುವೆಗೆ ಹೋಗಿ ಶುಭ ಹಾರೈಸಿದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಇಬ್ಬರ ಮುಖದಲ್ಲಿ ಸಂತಸ ತಂದರು. ಅಣ್ಣನ ಸಂಭ್ರಮಕ್ಕಂತೂ ಪಾರವೇ ಇರಲಿಲ್ಲ. ತಂಗಿಯ ಮೊಗದಲ್ಲಿ ನಗು ಅರಳಿತು.

ಶುಭ ಹಾರೈಸಿದ ಪ್ರಭಾ ಮಲ್ಲಿಕಾರ್ಜುನ್:

ತಂಗಿಯ ಆಸೆ ಈಡೇರಿಸಿದ ಅಣ್ಣ ಒಂದೆಡೆಯಾದರೆ, ಮದುವೆಗೆ ಬಂದಿದ್ದವರೂ ಸಹ ಪ್ರಭಾ ಮಲ್ಲಿಕಾರ್ಜುನ್ ಅವರು ಬರುತ್ತಿದ್ದಂತೆ ಸಂತಸಗೊಂಡರು. ಪ್ರಭಾ ಮಲ್ಲಿಕಾರ್ಜುನ್ ಅವರು ಸಹ ಶೃತಿ ಜೊತೆಗೆ ಖುಷಿಖುಷಿಯಾಗಿ ಮಾತನಾಡಿಸಿ, ಮದುವೆಯ ಶುಭ ಹಾರೈಸಿದರು. ನೂತನ ದಂಪತಿ ಮುಂದಿನ ಬದುಕು ಸುಖಕರವಾಗಿರಲಿ ಎಂದು ಹಾರೈಸಿದರು.

ಯೋಗರಾಜ್

ಇದು ಡಿಜಿಟಲ್ ಯುಗ. ಕೈ ಬೆರಳಿನಲ್ಲೇ ಸುದ್ದಿಗಳು ಜನರಿಗೆ ತಲುಪಬೇಕು ಎಂಬುದು ನಮ್ಮ ಸದುದ್ದೇಶ. ಈಗಾಗಲೇ ಲಕ್ಷಾಂತರ ಓದುಗರನ್ನೊಳಗೊಂಡ ಈ ಡಿಜಿಟಲ್ ಮಾಧ್ಯಮ ಜನಮನ ಗೆದ್ದಿದೆ. ಡೈಲಿಹಂಟ್ ನಲ್ಲಿಯೂ ಜನರ ಕೈಬೆರಳಿನಲ್ಲೇ ಸಿಗುತ್ತದೆ. ದಾವಣಗೆರೆ, ಕೃಷಿ, ಉದ್ಯೋಗ, ವಾಣಿಜ್ಯ, ಅಪರಾಧ ಜಗತ್ತಿನ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿದಂತೆ ಓದುಗರಿಗೆ ಬೇಕಾದ ಮಾಹಿತಿ ಒದಗಿಸಲಾಗುತ್ತಿದೆ. ಭಾರೀ ಮಟ್ಟದಲ್ಲಿ ಪ್ರತಿಕ್ರಿಯೆಯೂ ಬಂದಿದೆ, ಬರುತ್ತಲೇ ಇದೆ. ಓದುಗರು ನೀಡಿದ ಪ್ರೋತ್ಸಾಹ, ತೋರಿದ ಪ್ರೀತಿ, ನೀಡುತ್ತಿರುವ ಮಾರ್ಗದರ್ಶನವೇ ಈ ಮಾಧ್ಯಮ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ದಾವಣಗೆರೆಯಲ್ಲಿ ನಂಬರ್ ಒನ್ ನ್ಯೂಸ್ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಷ್ಟೋ ಮಂದಿ ನ್ಯೂಸ್ ಪ್ರಕಟಿಸುವಂತೆ ಹೇಳುತ್ತಲೇ ಇದ್ದಾರೆ. ದಾವಣಗೆರೆ ಜಿಲ್ಲೆ ಮಾತ್ರವಲ್ಲ, ಬೇರೆ ಜಿಲ್ಲೆಗಳಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸ್ಥಳೀಯ ಸಮಸ್ಯೆಗಳು, ಜನರಿಗೆ ಮತ್ತಷ್ಟು ಹತ್ತಿರವಾಗುವ ಸದುದ್ದೇಶದಿಂದ ಸುದ್ದಿಗಳನ್ನು ಪ್ರಕಟಿಸಲಾಗುವುದು. ವೈಯಕ್ತಿಕ ವಿಚಾರ, ಆಸ್ತಿ ವಿಚಾರ, ಗಂಡ ಹೆಂಡತಿ ಸಮಸ್ಯೆಯಂಥ ಸುದ್ದಿಗಳನ್ನ ಬಿತ್ತರಿಸಲಾಗುವುದಿಲ್ಲ. ನಿಜವಾದ ಸಮಸ್ಯೆಗಳಿದ್ದರೆ ಖಂಡಿತವಾಗಿಯೂ ಪ್ರಕಟಿಸಲಾಗುವುದು. ಹಾಗಾಗಿ, ಹೊಸ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ವಾಟ್ಸಪ್ ನಂಬರ್: 96869-97836, ಇ-ಮೇಲ್ ವಿಳಾಸ: suddikshana.com ಈ ವಿಳಾಸಕ್ಕೆ ಕಳುಹಿಸಿಕೊಡಿ. ಅರ್ಹವಿದ್ದ ಸುದ್ದಿಗಳನ್ನು ಖಂಡಿತವಾಗಿಯೂ ಪ್ರಕಟಿಸಲಾಗುತ್ತದೆ. ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment