SUDDIKSHANA KANNADA NEWS/DAVANAGERE/DATE:30-04-2024
ಬೆಂಗಳೂರು: ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹಾಗೂ ಡಿ. ಕೆ. ಶಿವಕುಮಾರ್ ನಡುವಿನ ಟಾಕ್ ಫೈಟ್ ಮತ್ತಷ್ಟು ತಾರಕಕ್ಕೇರಿದೆ. ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ ಸಂಬಂಧ ವಾದ – ಪ್ರತಿವಾದ ತಾರಕಕ್ಕೇರಿದೆ.
ಬೆಂಗಳೂರಿನಲ್ಲಿ ಮಾಧ್ಯಮವದರ ಜೊತೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಪೆನ್ ಡ್ರೈವ್ ಹಂಚಲು ಡಿ. ಕೆ. ಶಿವಕುಮಾರ್ ಕೈವಾಡವಿದೆ ಎಂಬ ಆರೋಪಕ್ಕೆ ಸಖತ್ತಾಗಿಯೇ ಟಾಂಗ್ ನೀಡಿದ ಡಿ. ಕೆ. ಶಿವಕುಮಾರ್ ಆ ಕುಟುಂಬಕ್ಕೆ ನನ್ನ ಹೆಸರು ಹೇಳದಿದ್ದರೆ ನಿದ್ರೆನೇ ಬರಲ್ಲ ಎಂದಿದ್ದಾರೆ.
ಹೆಚ್. ಡಿ. ಕುಮಾರಸ್ವಾಮಿ ಅವರು ತುಂಬಾ ವರ್ಷದಿಂದ ನನ್ನ ಹೆಸರು ನೆನಪಿಸಿಕೊಳ್ಳುತ್ತಿದ್ದಾರೆ. ಇಂಥ ವಿಡಿಯೋಗಳನ್ನು ಮಾಡಿ ಪೆನ್ ಡ್ರೈವ್ ಹಂಚುವಂಥ ಚೀಪ್ ಕೆಲಸಕ್ಕೆ ಕೈ ಹಾಕಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
ಪ್ರಜ್ವಲ್ ರೇವಣ್ಣ ಮಾಡಿರುವುದು ಅಕ್ಷಮ್ಯ, ನಾಡಿನ ತಾಯಂದಿರು, ಸಹೋದರಿಯರು ಆತನ ಕೃತ್ಯ ನೋಡಿದ್ದಾರೆ, ಅಸಹ್ಯ ಪಟ್ಟುಕೊಂಡಿದ್ದಾರೆ. ಇಂಥವರಿಗೆ ತಕ್ಕ ಪಾಠ ಕಲಿಸಬೇಕೋ ಬೇಡವೋ ಎಂದು ಪ್ರಶ್ನಿಸಿದ್ದಾರೆ.