ಮುಂಬೈ: ಬಾಲಿವುಡ್‌ನ ಖ್ಯಾತ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮನೆಗೆ ಎರಡನೇ ಪುಟ್ಟ ಅತಿಥಿಯ ಆಗಮನವಾಗಿದೆ. ಶನಿವಾರ ದೀಪಿಕಾ ಪಡುಕೋಣೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಕುಟುಂಬದಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ.
ಈ ಸಂತಸದ ಸುದ್ದಿಯನ್ನು ದಂಪತಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜಂಟಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ. ಪೋಸ್ಟ್‌ನಲ್ಲಿ “ವೆಲ್ಕಮ್ ಬೇಬಿ ಗರ್ಲ್” ಎಂದು ಬರೆದುಕೊಂಡು ದೃಷ್ಟಿಯಾಗದಿರಲಿ ಎಂಬ ಇವಿಲ್ ಐ (Evil Eye) ಎಮೋಜಿಯನ್ನು ಹಂಚಿಕೊಂಡಿದ್ದಾರೆ.
ದುವಾಗೆ ಸಿಕ್ಕಳು ತಂಗಿ
ದೀಪಿಕಾ ಮತ್ತು ರಣವೀರ್ ದಂಪತಿಗೆ 2024ರ ಸೆಪ್ಟೆಂಬರ್ 8ರಂದು ಮೊದಲ ಹೆಣ್ಣು ಮಗು ‘ದುವಾ’ ಜನ್ಮತಾಳಿದ್ದಳು. ಇದೀಗ ಸರಿಯಾಗಿ ಎರಡು ವರ್ಷಗಳ ನಂತರ ಮತ್ತೊಬ್ಬ ಹೆಣ್ಣು ಮಗು ಜನಿಸಿದ್ದು, ದುವಾಗೆ ತಂಗಿಯ ಆಗಮನವಾಗಿದೆ.
ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಜೋಡಿ
ಮಗುವಿನ ಆಗಮನಕ್ಕೂ ಕೆಲವೇ ದಿನಗಳ ಮೊದಲು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಕುಟುಂಬದೊಂದಿಗೆ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ಮೊದಲ ಮಗು ದುವಾ ಜನಿಸುವ ಮುನ್ನವೂ ಈ ಜೋಡಿ ಸಿದ್ಧಿ ವಿನಾಯಕನ ದರ್ಶನ ಪಡೆದಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ತಿಳಿಯುತ್ತಿದ್ದಂತೆ ಬಾಲಿವುಡ್ ಗಣ್ಯರಾದ ಸೋನಮ್ ಕಪೂರ್, ಕೃತಿ ಸನೋನ್, ಅನಿಲ್ ಕಪೂರ್ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಾಶಯಗಳ ಸುರಿಮಳೆ ಗೈಯುತ್ತಿದ್ದಾರೆ.





Leave a comment