ದಾವಣಗೆರೆ: ನಗರದ ವಿನೋಬನಗರ 2ನೇ ಮುಖ್ಯರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಯ ವಿಜೃಂಭಣೆಯ ವಿಸರ್ಜನಾ ಮೆರವಣಿಗೆಯ ಹಿನ್ನೆಲೆಯಲ್ಲಿ, ಸಾರ್ವಜನಿಕರ ಅನುಕೂಲ ಹಾಗೂ ಕಾನೂನು-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೆಪ್ಟೆಂಬರ್ 22 ರಂದು ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ನಗರದಲ್ಲಿ ವಾಹನ ಸಂಚಾರ ಮಾರ್ಗಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 31 ರಡಿ ನೀಡಲಾದ ಅಧಿಕಾರವನ್ನು ಬಳಸಿ ಈ ಆದೇಶವನ್ನು ಹೊರಡಿಸಲಾಗಿದ್ದು, ಸಾರ್ವಜನಿಕರು ಹಾಗೂ ಸಾರಿಗೆ ಸಂಸ್ಥೆಗಳು ಈ ಕೆಳಗಿನ ಮಾರ್ಗ ಬದಲಾವಣೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.
ಪ್ರಮುಖ ಸಂಚಾರ ಮಾರ್ಗಗಳ ವಿವರ:
1. ಹರಿಹರ ಕಡೆಯಿಂದ ಬರುವ ವಾಹನಗಳು:
ಸರಕು ಲಾರಿಗಳು: ಹರಿಹರದಿಂದ ಹಳೆ ಪಿ.ಬಿ. ರಸ್ತೆ ಮೂಲಕ ಬರುವ ಲಾರಿಗಳನ್ನು ಶಿವಮೊಗ್ಗ ಬೈಪಾಸ್ ಹಾಗೂ ಹೊಸ ಎನ್.ಹೆಚ್-48 ರಸ್ತೆ ಮೂಲಕ ಆವರಗೆರೆ (ಬಾಡಾ ಕ್ರಾಸ್, DCM ಅಂಡರ್ ಪಾಸ್, ಧನದ ಮಾರ್ಕೆಟ್) ಮಾರ್ಗವಾಗಿ APMC ಗೆ ಹಾದಿ ಸುಗಮಗೊಳಿಸಲಾಗಿದೆ.
KSRTC ಬಸ್‌ಗಳು: ಬಾಡಾ ಕ್ರಾಸ್ ಮತ್ತು ಆವರಗೆರೆ ಮಾರ್ಗವಾಗಿ ನೂತನ KSRTC ಬಸ್ ನಿಲ್ದಾಣವನ್ನು ತಲುಪಿ, ಅದೇ ಮಾರ್ಗವಾಗಿ ಬೆಂಗಳೂರು ಮತ್ತು ಬೆಳಗಾವಿ ಕಡೆಗೆ ನಿರ್ಗಮಿಸಬೇಕು.
ಖಾಸಗಿ ಬಸ್‌ಗಳು: ನೂತನ ಖಾಸಗಿ ಬಸ್ ನಿಲ್ದಾಣ ಹಾಗೂ M.G. ಸರ್ಕಲ್ ಮೂಲಕ ಪ್ರಯಾಣಿಕರನ್ನು ಇಳಿಸಿ, ಹರಿಹರ ರಸ್ತೆಗೆ ಪ್ರವೇಶಿಸದೆ ಬಂದ ದಾರಿಯಲ್ಲೇ ವಾಪಸ್ ಚಲಿಸತಕ್ಕದ್ದು.
2. ಚಿತ್ರದುರ್ಗ ಕಡೆಯಿಂದ ಬರುವ ವಾಹನಗಳು:
ಸರಕು ಲಾರಿಗಳು: DCM ಅಂಡರ್ ಪಾಸ್ ಹತ್ತಿರದ ಧನದ ಮಾರ್ಕೆಟ್ ಕ್ರಾಸ್ ಮಾರ್ಗವಾಗಿ APMC ಗೆ ತಲುಪಬೇಕು.
KSRTC ಹಾಗೂ ಖಾಸಗಿ ಬಸ್‌ಗಳು: ಬಾಡಾ ಕ್ರಾಸ್/ಆವರಗೆರೆ ಮಾರ್ಗವಾಗಿ ನೂತನ ಬಸ್ ನಿಲ್ದಾಣಗಳಿಗೆ ತಲುಪಿ, ನಿಗದಿತ ನಿಯಮಗಳಂತೆ ನಿರ್ಗಮಿಸಬೇಕು.
3. ನಗರದೊಳಗಿನ ಸಂಚಾರ ನಿಷೇಧ:
ಗಣೇಶ ವಿಸರ್ಜನಾ ಮೆರವಣಿಗೆ ಸಾಗುವ ಹಳೆ ಪಿ.ಬಿ. ರಸ್ತೆಯಲ್ಲಿ (M.G. ಸರ್ಕಲ್‌ನಿಂದ ಭಾತಿ ಕೆರೆಯವರೆಗೆ) ಬೆಳಿಗ್ಗೆ 11.00 ರಿಂದ ರಾತ್ರಿ 11.00 ರವರೆಗೆ ಖಾಸಗಿ ಸಿಟಿ ಬಸ್‌ಗಳು, KSRTC ಬಸ್‌ಗಳು ಹಾಗೂ ಗೂಡ್ಸ್ ಲಾರಿಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
4. ಲಾರಿಗಳ ಪಾರ್ಕಿಂಗ್ ಹಾಗೂ ಖಾಸಗಿ ಬಸ್‌ಗಳ ಚಲನೆ:
GMIT ಕಾಲೇಜ್ ಬಳಿ ಅಥವಾ ಹಳೆ ಪಿ.ಬಿ. ರಸ್ತೆಯ ಇರುಬದಿಗಳಲ್ಲಿ ಲಾರಿಗಳನ್ನು ನಿಲ್ಲಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಖಾಸಗಿ ಬಸ್‌ಗಳು AC ಕಚೇರಿ ಸರ್ಕಲ್, ಅರುಣ ಸರ್ಕಲ್ ಹಾಗೂ ಗಾಂಧಿ ಸರ್ಕಲ್ ಮೂಲಕ ಹಡಡಿ ರಸ್ತೆ ಕಡೆಗೆ ಚಲಿಸಬೇಕಾಗಿದೆ.





Leave a comment