Home ದಾವಣಗೆರೆ ದಾವಣಗೆರೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಹರಿಹರ ಶಾಸಕ ಬಿ.ಪಿ. ಹರೀಶ್ ವಿರುದ್ಧ ಬಂಡಾಯವೆದ್ದ ಸ್ವಪಕ್ಷೀಯರು!
ದಾವಣಗೆರೆಬೆಂಗಳೂರು

ದಾವಣಗೆರೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಹರಿಹರ ಶಾಸಕ ಬಿ.ಪಿ. ಹರೀಶ್ ವಿರುದ್ಧ ಬಂಡಾಯವೆದ್ದ ಸ್ವಪಕ್ಷೀಯರು!

Share
ದಾವಣಗೆರೆ
Share

ದಾವಣಗೆರೆ: ಜಿಲ್ಲಾ ಬಿಜೆಪಿ ರಾಜಕಾರಣದಲ್ಲಿ ಆಂತರಿಕ ಭಿನ್ನಮತ ಮತ್ತೆ ಬೀದಿಗೆ ಬಂದಿದ್ದು, ಹರಿಹರ ಶಾಸಕ ಬಿ.ಪಿ. ಹರೀಶ್ ವಿರುದ್ಧ ಸ್ವಪಕ್ಷೀಯ ನಾಯಕರೇ ಬಹಿರಂಗವಾಗಿ ದಂಗೆ ಎದ್ದಿದ್ದಾರೆ. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬೆಂಬಲಿತ ಬಣವು ಹಾಲಿ ಶಾಸಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಭದ್ರಾ ಡ್ಯಾಂ ನೀರು ಹರಿಸುವಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಟಾಂಗ್ ನೀಡಿದೆ.

ದಾವಣಗೆರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚನ್ನಗಿರಿ ಬಿಜೆಪಿ ಯುವ ನಾಯಕ ಮಾಡಾಳ್ ಮಲ್ಲಿಕಾರ್ಜುನ್, ಹರಿಹರ ಶಾಸಕ ಬಿ.ಪಿ. ಹರೀಶ್ ಅವರ ನಡವಳಿಕೆ ವಿರುದ್ಧ ವಾಗ್ದಾಳಿ ನಡೆಸಿದರು. “ಜಿಲ್ಲೆಯ ಪ್ರಮುಖ ಹಿತಾಸಕ್ತಿಗಳ ವಿಚಾರದಲ್ಲಿ ಶಾಸಕ ಹರೀಶ್ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಬಿಜೆಪಿ ಜಿಲ್ಲಾಧ್ಯಕ್ಷರಾಗಿ ರಾಜಶೇಖರ್ ನಾಗಪ್ಪ ಅವರನ್ನು ರಾಜ್ಯ ನಾಯಕರು ನೇಮಕ ಮಾಡಿದಾಗಲೂ ಅವರು ವಿರೋಧ ವ್ಯಕ್ತಪಡಿಸಿದ್ದರು. ಪಕ್ಷದ ಹೈಕಮಾಂಡ್ ನಿರ್ಧಾರವನ್ನು ಧಿಕ್ಕರಿಸಿ, ವ್ಯರ್ಥ ಪ್ರಯತ್ನ ನಡೆಸಿದ ಮೇಲೆ ಈಗ ಜಿಲ್ಲೆಯ ನಾಯಕನಾಗಲು ಹೊರಟಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

ಪಕ್ಷ ಸಂಘಟನೆಗೆ ಹಿನ್ನಡೆ ಆರೋಪ: ಕಳೆದ ಮೂರು ವರ್ಷಗಳಿಂದ ಶಾಸಕ ಹರೀಶ್ ಪಕ್ಷ ಸಂಘಟನೆಗೆ ಯಾವುದೇ ರೀತಿ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದ ಮಾಡಾಳ್ ಮಲ್ಲಿಕಾರ್ಜುನ್, “ನಾವು ಪ್ರತಿ ತಾಲೂಕಿನಲ್ಲಿ ೫೦ ರಿಂದ ೬೦ ಸಾವಿರ ಬಿಜೆಪಿ ಸದಸ್ಯತ್ವ ನೋಂದಣಿ ಮಾಡಿಸಿದ್ದರೆ, ಹರಿಹರ ಕ್ಷೇತ್ರದಲ್ಲಿ ಕನಿಷ್ಠ ೮ ಸಾವಿರ ಸದಸ್ಯತ್ವವನ್ನೂ ದಾಟಿಸಲು ಶಾಸಕರಿಗೆ ಸಾಧ್ಯವಾಗಿಲ್ಲ” ಎಂದು ಅಂಕಿ-ಅಂಶಗಳ ಸಮೇತ ಕಿಡಿಕಾರಿದರು.

ರೈತರ ಹೋರಾಟದಿಂದ ದೂರ: “ಜಿಲ್ಲೆಯ ಮೆಕ್ಕೆಜೋಳ, ಭತ್ತ ಬೆಳೆಗಾರರ ಸಂಕಷ್ಟ ಪರಿಹಾರಕ್ಕೆ ಹಾಗೂ ಭದ್ರಾ ಡ್ಯಾಂನಿಂದ ನೀರು ಹರಿಸುವಂತೆ ಆಗ್ರಹಿಸಿ ನಾವು ಸಾಲು ಸಾಲು ಹೋರಾಟಗಳನ್ನು ಮಾಡಿದ್ದೇವೆ. ಆದರೆ ಈ ಯಾವುದೇ ರೈತಪರ ಹೋರಾಟಗಳಲ್ಲಿ ಬಿ.ಪಿ. ಹರೀಶ್ ಭಾಗವಹಿಸಲಿಲ್ಲ. ನೂರು ಜನರು ಸರಿ ಎಂದು ಬೆಂಬಲಿಸುವ ವಿಷಯಕ್ಕೆ, ನೂರ ಒಂದನೇ ವ್ಯಕ್ತಿಯಾಗಿ ಬೇಡ ಎನ್ನುವುದು ಹರೀಶ್ ಅಭ್ಯಾಸವಾಗಿದೆ” ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.

Share

Leave a comment

Leave a Reply

Your email address will not be published. Required fields are marked *