Home ದಾವಣಗೆರೆ ದಾವಣಗೆರೆ: ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ 7,086 ಮತದಾರರಿಗೆ ನೋಟಿಸ್ ಜಾರಿ!
ದಾವಣಗೆರೆಬೆಂಗಳೂರು

ದಾವಣಗೆರೆ: ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ 7,086 ಮತದಾರರಿಗೆ ನೋಟಿಸ್ ಜಾರಿ!

Share
ದಾವಣಗೆರೆ
Share

ದಾವಣಗೆರೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 (SIR) ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಕರಡು ಪಟ್ಟಿಯಿಂದ ಹೊರಗುಳಿದ ಮತದಾರರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ತಿಳಿಸಿದ್ದಾರೆ.

ಆಗಸ್ಟ್ 24 ರಂದು ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 12,98,219 ಮತದಾರರಿದ್ದಾರೆ. 2002 ರ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರೂ ಸೂಕ್ತ ದಾಖಲೆ ಸಲ್ಲಿಸದವರು ಹಾಗೂ ಗೈರುಹಾಜರಿ ಮತದಾರರ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ.

ನೋಟಿಸ್ ಮತ್ತು ವಿಚಾರಣೆಯ ಪ್ರಮುಖ ವಿವರಗಳು:

  • ನೋಟಿಸ್ ಜಾರಿ: ಇದುವರೆಗೆ ಒಟ್ಟು 7,086 ನೋಟೀಸ್‌ಗಳನ್ನು ಜನರೇಟ್ ಮಾಡಲಾಗಿದ್ದು, ಅದರಲ್ಲಿ 6,166 ನೋಟೀಸ್‌ಗಳನ್ನು ಈಗಾಗಲೇ ಮತದಾರರಿಗೆ ಜಾರಿಗೊಳಿಸಲಾಗಿದೆ.

  • ವಿಚಾರಣೆ ಪ್ರಗತಿ: ಎಲ್ಲಾ 7 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 1,341 ಪ್ರಕರಣಗಳಲ್ಲಿ ಈಗಾಗಲೇ ವಿಚಾರಣೆ ಪೂರ್ಣಗೊಂಡಿದೆ.

  • ದಾಖಲೆ ಪರಿಶೀಲನೆ: ಮ್ಯಾಪಿಂಗ್ ಆಗದ 328 ಪ್ರಕರಣಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ದಾಖಲೆ ಪರಿಶೀಲನೆಗಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಕಳುಹಿಸಿಕೊಡಲಾಗಿದೆ.

  • ಅಂತಿಮ ಪ್ರಕಟಣೆ: ನೋಟೀಸ್ ಆಧಾರಿತ 1,009 ಪ್ರಕರಣಗಳನ್ನು ಅಂತಿಮ ಪ್ರಕಟಣೆಗಾಗಿ ಕಾಯ್ದಿರಿಸಲಾಗಿದೆ.

ಅರ್ಹ ಮತದಾರರು ಪಟ್ಟಿಯಿಂದ ವಂಚಿತರಾಗದಂತೆ ಅತ್ಯಂತ ಪಾರದರ್ಶಕವಾಗಿ ಪರಿಶೀಲನಾ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles