SUDDIKSHANA KANNADA NEWS/ DAVANAGERE/ DATE:12-10-2023
ದಾವಣಗೆರೆ (Davanagere): ಜಿಲ್ಲೆಯ ದಾವಣಗೆರೆಯ ಹಿಲ್ಡಾ ಮೊಂತೇರೋ ಮತ್ತು ದೊಣೆಹಳ್ಳಿಯ ಪ್ರಿಯದರ್ಶಿನಿಯವರು ಇಸ್ರೇಲ್ನಲ್ಲಿ ಇದ್ದು ಸುರಕ್ಷಿತವಾಗಿದ್ದಾರೆ. ಈಗಾಗಲೇ ಅವರ ಸಂಪರ್ಕವನ್ನು ಮಾಡಲಾಗಿದ್ದು ಸರ್ಕಾರ ನೀಡುವ ಸೂಚನೆಗಳನ್ನು ಪಾಲಿಸಲು ತಿಳಿಸಲಾಗಿದೆ. ಸಹಾಯ ಅಗತ್ಯವಿದ್ದಲ್ಲಿ ಇಸ್ರೇಲ್ ರಾಯಭಾರಿ ಕಚೇರಿಯ ಮೂಲಕ ಸಹಾಯ ನೀಡಲಾಗುತ್ತದೆ ಎಂದು ಅವರೊಟ್ಟಿಗೆ ಮಾತನಾಡಿದ್ದು ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ. ವಿ. ವೆಂಕಟೇಶ್ ತಿಳಿಸಿದರು.
READ ALSO THIS STORY:
ಸುರಕ್ಷಿತವಾಗಿದ್ದಾರೆ, ಏನೂ ತೊಂದರೆ ಇಲ್ಲ, ಯುದ್ಧಪೀಡಿತ ಇಸ್ರೇಲ್ (Israel)ನಲ್ಲಿ ಸಿಲುಕಿರುವ ದಾವಣಗೆರೆಯ ಹಿಲ್ಡಾ ಮೊಂತೇರೋ: ಇನ್ನು 2 ವರ್ಷ ಯಾಕೆ ಬರೋಲ್ಲ ದಾವಣಗೆರೆಗೆ….?
ಅ. 22ರಿಂದ ಅಂತರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿ; ಅಂತರಾಷ್ಟ್ರೀಯ ಟೆನ್ನೀಸ್ ಫೆಡರೇಷನ್ ವತಿಯಿಂದ ದಾವಣಗೆರೆ (Davanagere)ಯಲ್ಲಿ ಇದೇ ಅಕ್ಟೋಬರ್ 22 ರಿಂದ 29 ರ ವರೆಗೆ ಅಂತರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ಅಮೆರಿಕಾ, ಸ್ವಿಜ್ಜರ್ಲ್ಯಾಂಡ್, ಸ್ವೀಡನ್ , ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಅನೇಕ ರಾಷ್ಟ್ರಗಳ 400 ಕ್ಕೂ ಹೆಚ್ಚು ಆಟಗಾರರು ಭಾಗವಹಿಸುತ್ತಿದ್ದಾರೆ. ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿನ 4 ಸಿಂಥಟೆಕ್ ಅಂಕಣಗಳಲ್ಲಿ ಪಂದ್ಯಾವಳಿಗಳು ನಡೆಯಲಿವೆ ಎಂದರು.
150 ದಿನ ಕೂಲಿ ಹೆಚ್ಚಳಕ್ಕೆ ಪ್ರಸ್ತಾವನೆ:
ಬರಗಾಲದ ಹಿನ್ನಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ವಾರ್ಷಿಕ 100 ದಿನಗಳ ಉದ್ಯೋಗವನ್ನು 150 ದಿನಗಳಿಗೆ ಹೆಚ್ಚಳ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಯಾರು 100 ದಿನಗಳನ್ನು ಪೂರೈಸುವರು, ಅವರಿಗೆ ಹೆಚ್ಚುವರಿಯಾಗಿ 50 ದಿನಗಳ ಕೂಲಿಯನ್ನು ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು ಇದಕ್ಕೆ ಮಂಜೂರಾತಿ ಸಿಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ತಿಳಿಸಿದರು.