Home ದಾವಣಗೆರೆ ಪೆಟ್ರೋಲ್ ಹೆಸರಲ್ಲಿ ಎಥನಾಲ್ ವಂಚನೆಗೆ ಮೋದಿ, ಗಡ್ಕರಿ ಹೊಣೆ ಹೊರಬೇಕು: ವಾಹನಗಳ ಇಂಜಿನ್ ಹಾಳಾದರೆ ಹೊಣೆ ಯಾರೆಂದು ಪ್ರಶ್ನಿಸಿದ ಸೈಯದ್ ಖಾಲಿದ್ ಅಹ್ಮದ್
ದಾವಣಗೆರೆನವದೆಹಲಿಬೆಂಗಳೂರು

ಪೆಟ್ರೋಲ್ ಹೆಸರಲ್ಲಿ ಎಥನಾಲ್ ವಂಚನೆಗೆ ಮೋದಿ, ಗಡ್ಕರಿ ಹೊಣೆ ಹೊರಬೇಕು: ವಾಹನಗಳ ಇಂಜಿನ್ ಹಾಳಾದರೆ ಹೊಣೆ ಯಾರೆಂದು ಪ್ರಶ್ನಿಸಿದ ಸೈಯದ್ ಖಾಲಿದ್ ಅಹ್ಮದ್

Share
ಪೆಟ್ರೋಲ್
Share

ದಾವಣಗೆರೆ: ಕರ್ನಾಟಕದ 7 ಜಿಲ್ಲೆಗಳಲ್ಲಿ ಪೆಟ್ರೋಲ್ ಮಾದರಿಗಳನ್ನು ಪರೀಕ್ಷಿಸಿದಾಗ, ನಿಗದಿತ ಶೇಕಡಾ 20 ಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣವಾಗಿರುವುದು ಕಂಡುಬಂದಿದ್ದು. ವಾಹನಗಳಿಂದ ಪೆಟ್ರೋಲ್ ಕಳ್ಳತನ ಮಾಡಲಾಗುತ್ತಿದೆ. ಇದರ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಭೂಹೆದ್ದಾರಿ ಖಾತೆಯ ಸಚಿವ ನಿತಿನ್ ಗಡ್ಕರಿ ಹೊರಬೇಕು. ದೇಶದ ಜನರಿಗೆ ಎಥೆನಾಲ್ ಮೂಲಕ ವಂಚಿಸಲಾಗುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಆಗ್ರಹಿಸಿದ್ದಾರೆ.

ದುಬಾರಿ ಹಣ ನೀಡಿ ಪೆಟ್ರೋಲ್ ಅನ್ನು ಸಾರ್ವಜನಿಕರು ತಮ್ಮ ವಾಹನಗಳಿಗೆ ತುಂಬಿಸುತ್ತಿದ್ದಾರೆ. ಆದರೆ ಇಷ್ಟು ಹೆಚ್ಚಿನ ಪ್ರಮಾಣದ ಎಥೆನಾಲ್ ಅನ್ನು ತಡೆದುಕೊಳ್ಳುವ ಸಾಮರ್ಥ್ಯ ಸಾಮಾನ್ಯ ವಾಹನ ಇಂಜಿನ್‌ಗಳಿಗೆ ಇರಲ್ಲ. ಇದರಿಂದ ವಾಹನದ ಮೈಲೇಜ್ ಕಡಿಮೆಯಾಗುವುದಲ್ಲದೆ, ಇಂಜಿನ್ ಬೇಗನೇ ಹಾಳಾಗಿ ರಿಪೇರಿ ವೆಚ್ಚ ಹೆಚ್ಚಾಗುತ್ತದೆ. ಇದಕ್ಕೆ ಯಾರು ಹಣ ನೀಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಎಥೆನಾಲ್ ಬಳಕೆಯಿಂದ ವಾಹನಗಳು ಹಾಳಾದರೆ ಗ್ರಾಹಕರ ವೇದಿಕೆಗೆ ಯಾರ ವಿರುದ್ಧ ದೂರು ನೀಡಬೇಕು? ನರೇಂದ್ರ ಮೋದಿ, ನಿತಿನ್ ಗಡ್ಕರಿ ಹಾಗೂ ತೈಲ ಕಂಪೆನಿಗಳು ಸೇರಿದಂತೆ ಯಾರ ವಿರುದ್ಧ ದೂರು ದಾಖಲಿಸಬೇಕು. ನ್ಯಾಯ ಪಡೆಯಲು ಎಲ್ಲಿಗೆ ಹೋಗಬೇಕು ಎಂಬುದನ್ನು ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರಾಜ್ಯದ 7 ಜಿಲ್ಲೆಗಳ ವಿವಿಧ ಪೆಟ್ರೋಲ್ ಬಂಕ್‌ಗಳಿಂದ ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ ಸರ್ಕಾರಿ ಮಾನ್ಯತೆ ಪಡೆದ ಪ್ರಯೋಗಾಲಯಕ್ಕೆ ಕಳುಹಿಸಿತ್ತು. 14 ಮಾದರಿಗಳಲ್ಲಿ 11 ಮಾದರಿಗಳಲ್ಲಿ 20% ಗಿಂತ ಹೆಚ್ಚು ಎಥನಾಲ್ ಇರುವುದು ಪತ್ತೆಯಾಗಿದೆ. ಐಒಸಿಎಲ್ ನ ಮಾದರಿಯಲ್ಲಿ ಶೇ. 31.2 ಹಾಗೂ ಹೆಚ್‌ಪಿಸಿಎಲ್ ನ ಮಾದರಿಯಲ್ಲಿ ಶೇ. 30.5 ರಷ್ಟು ಎಥನಾಲ್ ಮಿಶ್ರಣಗೊಂಡಿದೆ ಎಂದು ಬಂದಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನದಲ್ಲಿ ಎಷ್ಟು ಪ್ರಮಾಣದ ಎಥನಾಲ್ ಬೆರೆಸಲಾಗಿದೆ ಎಂಬ ಮಾಹಿತಿಯ ವಿವರಣಾತ್ಮಕ ಲೇಬಲ್ ಹಾಕುತ್ತಿಲ್ಲ. ಗ್ರಾಹಕರಿಗೆ ಸೂಕ್ತವಾದ ಇಂಧನವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

ದೇಶದ ಜನರ ವಾಹನಗಳಿಗೆ ನಿಜವಾಗಿ ಏನು ತುಂಬಿಸಲಾಗುತ್ತಿದೆ? ಪೆಟ್ರೋಲ್‌ನಲ್ಲಿ ನಿಜವಾಗಿ ಇರುವ ಎಥನಾಲ್ ಪ್ರಮಾಣ ಎಷ್ಟು? ಶೇಕಡಾ 20ಕ್ಕಿಂತ ಹೆಚ್ಚು ಎಥನಾಲ್ ಬೆರೆಸಿ ನಿಯಮ ಉಲ್ಲಂಘಿಸಿರುವ ತೈಲ ಕಂಪನಿಗಳ ವಿರುದ್ಧ ಸರ್ಕಾರ ಕೈಗೊಳ್ಳುವ ಕ್ರಮವೇನು? ಈ ವಿಚಾರವಾಗಿ ಸರ್ಕಾರಿ ಸ್ವಾಮ್ಯದ ಐಒಸಿಎಲ್, ಹೆಚ್ ಪಿಸಿಎಲ್. ಬಿಪಿಸಿಎಲ್ ಮತ್ತು ಖಾಸಗಿ ಕಂಪನಿಗಳು ನಿಯಮ ಉಲ್ಲಂಘಿಸಿದ್ದು, ಜನರ ಕಣ್ಮಿಗೆ ಮಣ್ಣು ಎರಚುವುದನ್ನು ಬಿಡಬೇಕು. ಇಲ್ಲದಿದ್ದರೆ ದೇಶದ ಜನರೇ ತಕ್ಕ ಪಾಠ ಕಲಿಸುವುದು ಖಚಿತ ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles