Home ದಾವಣಗೆರೆ ಮುಸ್ಲಿಂ ಸಿಎಂ ಆಗ್ತಾರೆ ಎಂದಿದ್ದ ಅಸಾದುದ್ದೀನ್ ಒವೈಸಿ ಅಜೆಂಡಾಕ್ಕೆ ಉತ್ತರಪ್ರದೇಶದಲ್ಲಿ ಜಾಗವಿಲ್ಲ: ಸಿಎಂ ಯೋಗಿ ಆದಿತ್ಯನಾಥ್ ಕಿಡಿನುಡಿ!
ದಾವಣಗೆರೆನವದೆಹಲಿಬೆಂಗಳೂರು

ಮುಸ್ಲಿಂ ಸಿಎಂ ಆಗ್ತಾರೆ ಎಂದಿದ್ದ ಅಸಾದುದ್ದೀನ್ ಒವೈಸಿ ಅಜೆಂಡಾಕ್ಕೆ ಉತ್ತರಪ್ರದೇಶದಲ್ಲಿ ಜಾಗವಿಲ್ಲ: ಸಿಎಂ ಯೋಗಿ ಆದಿತ್ಯನಾಥ್ ಕಿಡಿನುಡಿ!

Share
ಯೋಗಿ ಆದಿತ್ಯನಾಥ್
Share

ಅಯೋಧ್ಯೆ (ಉತ್ತರ ಪ್ರದೇಶ):  ಉತ್ತರಪ್ರದೇಶದಲ್ಲಿ ಮುಸ್ಲಿಂ ಮುಖ್ಯಮಂತ್ರಿ ಹಾಗೂ ಬುರ್ಖಾ ಧರಿಸಿದ ಪ್ರಧಾನಿ ಬರಲಿದ್ದಾರೆ ಎಂಬ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರ ಹೇಳಿಕೆಗೆ ತೀವ್ರ ತಿರುಗೇಟು ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಂತಹವರ ಆಸೆಗಳು ಎಂದಿಗೂ ಈಡೇರುವುದಿಲ್ಲ ಮತ್ತು ಅಂತಹವರಿಗೆ ಯುಪಿಯಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಗುಡುಗಿದ್ದಾರೆ.

‘ಆಜ್‌ತಕ್ ಪಂಚಾಯತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒವೈಸಿ ದೇಶ ವಿರೋಧಿ ಹಾಗೂ ಹಿಂದು ವಿರೋಧಿ ಅಜೆಂಡಾವನ್ನು ಹೊಂದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕದ ಮಿಚಿಗನ್ ಸೆನೆಟ್ ಚುನಾವಣೆಯಲ್ಲಿ ಅಬ್ದುಲ್ ಎಲ್-ಸಾಯೆದ್ ಗೆಲುವು ಸಾಧಿಸಿರುವುದನ್ನು ಉಲ್ಲೇಖಿಸಿ, ಯುಪಿಯ ಮುಸ್ಲಿಮರು ಸ್ವತಂತ್ರ ರಾಜಕೀಯ ಗುರುತು ಬೆಳೆಸಿಕೊಳ್ಳಬೇಕು ಎಂದು ಒವೈಸಿ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಯೋಗಿ ಆದಿತ್ಯನಾಥ್, ಒವೈಸಿ ಹಾಗೂ ಕಾಂಗ್ರೆಸ್-ಸಮಾಜವಾದಿ ಪಕ್ಷಗಳ ರಾಜಕೀಯ ಅಜೆಂಡಾ ಒಂದೇ ಆಗಿದೆ ಎಂದು ಟೀಕಿಸಿದ್ದಾರೆ. ದೇಶದ ಐಕ್ಯತೆಯನ್ನು ದುರ್ಬಲಗೊಳಿಸುವ ಶಕ್ತಿಗಳಿಗೆ ರಾಜ್ಯದಲ್ಲಿ ಜಾಗವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒವೈಸಿ ಹೇಳಿಕೆಗೆ ತಿರುಗೇಟು: ಯುಪಿಯಲ್ಲಿ ಮುಸ್ಲಿಂ ಮುಖ್ಯಮಂತ್ರಿ ಮತ್ತು ಬುರ್ಕಾ ಧರಿಸಿದ ಪ್ರಧಾನಿ ಆಗುವ ಒವೈಸಿ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ಸಿಎಂ ಯೋಗಿ ಸ್ಪಷ್ಟಪಡಿಸಿದ್ದಾರೆ.

ವಿರೋಧಿಗಳ ಒಗ್ಗೂಡುವಿಕೆ ಟೀಕೆ: ಕಾಂಗ್ರೆಸ್, ಸಮಾಜವಾದಿ ಪಕ್ಷ ಹಾಗೂ ಎಐಎಂಐಎಂ ಪಕ್ಷಗಳ ರಾಜಕೀಯ ಧೋರಣೆ ಒಂದೇ ಆಗಿದ್ದು, ಇವೆಲ್ಲವೂ ದೇಶದ ಹಿತಾಸಕ್ತಿಯನ್ನು ಕಡೆಗಣಿಸಿವೆ ಎಂದು ಯೋಗಿ ಆರೋಪಿಸಿದ್ದಾರೆ.

ಅಬ್ದುಲ್ ಹೇಳಿಕೆ ವಿವಾದ: ಅಮೆರಿಕದ ಚುನಾವಣೆ  ಉಲ್ಲೇಖಿಸಿ ಒವೈಸಿ ನೀಡಿದ್ದ ಹೇಳಿಕೆಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಸಂವಿಧಾನ ವಿರೋಧಿ ಅಜೆಂಡಾ: ಒವೈಸಿ ಅವರು ದೇಶದ ಸಾಂವಿಧಾನಿಕ ಮೌಲ್ಯಗಳಿಗೆ ಹಾಗೂ ಹಿಂದುಗಳಿಗೆ ವಿರೋಧವಾದ ಅಜೆಂಡಾವನ್ನು ಜಾರಿಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles