ದಾವಣಗೆರೆ: ಜಿಲ್ಲೆಯ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯವು ಬಿರುಸಿನಿಂದ ಸಾಗುತ್ತಿದ್ದು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು 2777 ಮತಗಳ ಭಾರೀ ಮುನ್ನಡೆ ಸಾಧಿಸಿದ್ದಾರೆ.
ಎರಡನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ತಮ್ಮ ಮುನ್ನಡೆಯನ್ನು ಕಾಯ್ದುಕೊಂಡಿದ್ದರು. ಆದರೆ ನಂತರ ಶ್ರೀನಿವಾಸ್ ದಾಸಕರಿಯಪ್ಪ ಅವರು ಭಾರೀ ಮುನ್ನಡೆ ಸಾಧಿಸಿ, ಕಾಂಗ್ರೆಸ್ ಗೆ ಶಾಕ್ ಕೊಟ್ಟಿದ್ದಾರೆ.
ಮೊದಲ ಸುತ್ತಿನಲ್ಲಿ ಅಲ್ಪ ಹಿನ್ನಡೆ ಅನುಭವಿಸಿದ್ದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ಎರಡನೇ ಸುತ್ತಿನಲ್ಲೂ ಕಾಂಗ್ರೆಸ್ ಪೈಪೋಟಿಗೆ ತತ್ತರಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಸಮರ್ಥ್ ಶಾಮನೂರು ಅವರು ಎರಡನೇ ಸುತ್ತಿನಲ್ಲಿ 712 ಮತಗಳ ಭಾರೀ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಅಂಚೆ ಮತಗಳ ಎಣಿಕೆಯಲ್ಲಿ ಶುಭಾರಂಭ ಮಾಡಿದ್ದ ಕಾಂಗ್ರೆಸ್, ಈಗ ಇವಿಎಂ ಮತಗಳ ಎಣಿಕೆಯಲ್ಲೂ ಮನ್ನಡೆ ಮುಂದುವರಿಸಿರುವುದು ಬೆಂಬಲಿಗರಲ್ಲಿ ಸಂಭ್ರಮ ತಂದಿದೆ.
- Davanagere Election News 2026
- Davanagere South By-election Results
- Karnataka Bypoll Results.
- Round 2 Vote Counting Updates
- Samarth Shamanur Lead
- Srinivas Dasakariyappa
- ಎರಡನೇ ಸುತ್ತಿನ ಮತ ಎಣಿಕೆ
- ದಾವಣಗೆರೆ ದಕ್ಷಿಣ ಉಪಚುನಾವಣೆ
- ದಾವಣಗೆರೆ ರಾಜಕೀಯ ಸುದ್ದಿ
- ಮತ ಎಣಿಕೆ ಫಲಿತಾಂಶ 2026
- ಶ್ರೀನಿವಾಸ್ ದಾಸಕರಿಯಪ್ಪ ಹಿನ್ನಡೆ
- ಸಮರ್ಥ್ ಶಾಮನೂರು ಮುನ್ನಡೆ





Leave a comment