Home ದಾವಣಗೆರೆ BIG BREAKING: ದಾವಣಗೆರೆ ದಕ್ಷಿಣ ದಕ್ಷಿಣಾಧಿಪತಿ ಸಮರ್ಥ್ ಶಾಮನೂರು: ಶ್ರೀನಿವಾಸ್ ದಾಸಕರಿಯಪ್ಪರ ವಿರುದ್ಧ 5708 ಮತಗಳ ಪ್ರಯಾಸದ ಗೆಲುವು!
ದಾವಣಗೆರೆಬೆಂಗಳೂರು

BIG BREAKING: ದಾವಣಗೆರೆ ದಕ್ಷಿಣ ದಕ್ಷಿಣಾಧಿಪತಿ ಸಮರ್ಥ್ ಶಾಮನೂರು: ಶ್ರೀನಿವಾಸ್ ದಾಸಕರಿಯಪ್ಪರ ವಿರುದ್ಧ 5708 ಮತಗಳ ಪ್ರಯಾಸದ ಗೆಲುವು!

Share
ದಾವಣಗೆರೆ
Share

ದಾವಣಗೆರೆ: ತೀವ್ರ ಹಣಾಹಣಿಯಿಂದ ಕೂಡಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪರ ಮೊಮ್ಮಗ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಶಾಮನೂರು ಅವರು 5708 ಮತಗಳ ಪ್ರಯಾಸದ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ದಾವಣಗೆರೆ ದಕ್ಷಿಣ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿದೆ.

ಡಾ. ಶಾಮನೂರು ಶಿವಶಂಕರಪ್ಪರ ನಿಧನದಿಂದ ತೆರವಾದ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು 69,578 ಮತಗಳನ್ನು ಪಡೆದು 5708 ಮತಗಳಿಂದ ಗೆದ್ದು ಬೀಗಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು 63,870 ಮತಗಳನ್ನು ಪಡೆದು ತೀವ್ರ ಪೈಪೋಟಿ ನೀಡಿ ವಿರೋಚಿತ ಸೋಲು ಕಂಡಿದ್ದಾರೆ. ಎಸ್ ಡಿಪಿಐ ಅಪ್ಸರ್ ಕೊಡ್ಲಿಪೇಟೆ 18,975 ಮತಗಳನ್ನು ಪಡೆದು ಗಮನ ಸೆಳೆದಿದ್ದಾರೆ.

ಸುದ್ದಿಯ ಸಾರಾಂಶ

  • ಗೆದ್ದವರು: ಸಮರ್ಥ್ ಶಾಮನೂರು (ಕಾಂಗ್ರೆಸ್) – 69,578 ಮತಗಳು.

  • ಸೋತವರು: ಶ್ರೀನಿವಾಸ್ ದಾಸಕರಿಯಪ್ಪ (ಬಿಜೆಪಿ) – 63,870 ಮತಗಳು.

  • ಗೆಲುವಿನ ಅಂತರ: 5,708 ಮತಗಳು.

  • ಗಮನಾರ್ಹ ಅಂಶ: ಎಸ್‌ಡಿಪಿಐ ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆ ಅವರು 18,975 ಮತಗಳನ್ನು ಪಡೆಯುವ ಮೂಲಕ ಗಮನಾರ್ಹ ಪೈಪೋಟಿ ನೀಡಿದ್ದಾರೆ.

21 ಸುತ್ತಿನ ಮತ ಎಣಿಕೆ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು 4873 ಮತಗಳನ್ನು ಪಡೆದು ಮುನ್ನಡೆಯಲ್ಲಿದ್ದರು. ಆದರೆ ಎಸ್ ಡಿಪಿಐನ ಅಪ್ಸರ್ ಕೊಡ್ಲಿಪೇಟೆ ಮೂರು ವಿವಿ ಪ್ಯಾಟ್ ಗಳಲ್ಲಿನ ಮತ ಎಣಿಕೆ ಬಗ್ಗೆ
ಆಕ್ಷೇಪ ವ್ಯಕ್ತಪಡಿಸಿದ್ದರು. ಬೆಳಿಗ್ಗೆ ಮತ ಎಣಿಕೆ ವೇಳೆ ಮೂರು ಬೀಗದ ಕೀಗಳು ಇರಲಿಲ್ಲ. ಇದರಿಂದ ಈ ಬಗ್ಗೆ ಸೂಕ್ತವಾಗಿ ಮತ ಎಣಿಕೆ ಮಾಡಬೇಕೆಂದು ಪಟ್ಟು ಹಿಡಿದಿದ್ದರು. ಅಲ್ಲದೇ, ಇವಿಎಂ ಮತ ಯಂತ್ರಗಳಲ್ಲಿ ದೋಷವಿದ್ದು, ಎಲ್ಲರ ಸಮ್ಮುಖದಲ್ಲಿ ಮತ ಎಣಿಕೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಸಮರ್ಥ್ ಶಾಮನೂರು ಅವರು 21 ಸುತ್ತಿನ ಮತ ಎಣಿಕೆಯ ಬಳಿಕ ಮುನ್ನಡೆಯಲ್ಲಿದ್ದರೂ ಫಲಿತಾಂಶ ಘೋಷಿಸಲಿಲ್ಲ. ಅಂತಿಮವಾಗಿ 24 ಸುತ್ತುಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಅಂತಿಮವಾಗಿ ಸಮರ್ಥ್ ಶಾಮನೂರು
ಅವರು 5708 ಮತಗಳಿಂದ ಗೆದ್ದು ಗೆಲುವಿನ ನಗೆ ಬೀರಿದ್ದಾರೆ.

Share

Leave a comment

Leave a Reply

Your email address will not be published. Required fields are marked *