Home ಉದ್ಯೋಗ ವಾರ್ತೆ ಇಂಡಿಯನ್ ಆಯಿಲ್‌ನಲ್ಲಿ ಬಂಪರ್ ನೇಮಕಾತಿ ಪರೀಕ್ಷೆಯಿಲ್ಲದೆ ಚಾನ್ಸ್: 10th, 12th, Diploma ಮುಗಿಸಿದವರಿಗೆ ಕೆಲಸ, ಇಂದೇ ಅರ್ಜಿ ಹಾಕಿ!
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

ಇಂಡಿಯನ್ ಆಯಿಲ್‌ನಲ್ಲಿ ಬಂಪರ್ ನೇಮಕಾತಿ ಪರೀಕ್ಷೆಯಿಲ್ಲದೆ ಚಾನ್ಸ್: 10th, 12th, Diploma ಮುಗಿಸಿದವರಿಗೆ ಕೆಲಸ, ಇಂದೇ ಅರ್ಜಿ ಹಾಕಿ!

Share
ನೇಮಕಾತಿ
Share

ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮಾರ್ಕೆಟಿಂಗ್ ವಿಭಾಗದ ಉತ್ತರಾಖಂಡ್, ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಪಂಜಾಬ್ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ 434 ಆಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆಗಳು: 434

ಹುದ್ದೆಯ ಹೆಸರು: ಟೆಕ್ನಿಷಿಯನ್, ಟ್ರೇಡ್, ಗ್ರ್ಯಾಜುಯೇಟ್ ಮತ್ತು ಡೇಟಾ ಎಂಟ್ರಿ ಆಪರೇಟರ್ ಆಪ್ರೆಂಟಿಸ್

ಅರ್ಜಿ ಶುಲ್ಕ: ಉಚಿತ (ಯಾವುದೇ ಶುಲ್ಕವಿಲ್ಲ)

ವಯೋಮಿತಿ ಮತ್ತು ಅರ್ಹತೆ:

ಅಭ್ಯರ್ಥಿಗಳ ವಯಸ್ಸು 18 ರಿಂದ 24 ವರ್ಷದೊಳಗಿರಬೇಕು (ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ). 10ನೇ ತರಗತಿ, 12ನೇ ತರಗತಿ, ಐಟಿಐ, ಡಿಪ್ಲೊಮಾ ಅಥವಾ ಯಾವುದೇ ಪದವಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಲು ಅರ್ಹರು.

ಆಯ್ಕೆ ಪ್ರಕ್ರಿಯೆ:

ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಿ, ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ತಪಾಸಣೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಪ್ರಾರಂಭ: ಆಗಸ್ಟ್ 07, 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 06, 2026 (ಸಂಜೆ 5:00)

ಅಧಿಕೃತ ವೆಬ್ ಸೈಟ್ (Official Website) iocl.com

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles