Home ದಾವಣಗೆರೆ ದಾವಣಗೆರೆಯಲ್ಲಿ ಕ್ವಿಟ್ ಇಂಡಿಯಾ 84ನೇ ವರ್ಷಾಚರಣೆ: ಹುತಾತ್ಮರಿಗೆ ಪುಷ್ಪನಮನ, ಮಾಜಿ ಸೈನಿಕರಿಗೆ ಸನ್ಮಾನ!
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆಯಲ್ಲಿ ಕ್ವಿಟ್ ಇಂಡಿಯಾ 84ನೇ ವರ್ಷಾಚರಣೆ: ಹುತಾತ್ಮರಿಗೆ ಪುಷ್ಪನಮನ, ಮಾಜಿ ಸೈನಿಕರಿಗೆ ಸನ್ಮಾನ!

Share
ದಾವಣಗೆರೆ
Share

ದಾವಣಗೆರೆ: ಕ್ವಿಟ್ ಇಂಡಿಯಾ ಚಳುವಳಿಯ (ಬ್ರಿಟೀಷರೇ ಭಾರತ ಬಿಟ್ಟು ತೊಲಗಿ) 84ನೇ ವರ್ಷಾಚರಣೆಯನ್ನು ನಗರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ ದೇಶಕ್ಕಾಗಿ ಹುತಾತ್ಮರಾದ ದಾವಣಗೆರೆಯ ಮಾಗನಹಳ್ಳಿ ಹನುಮಂತಪ್ಪ, ಹಳ್ಳೂರು ನಾಗಪ್ಪ, ಅಕ್ಕಸಾಲಿ ವಿರೂಪಾಕ್ಷಪ್ಪ, ಹದಡಿ ನಿಂಗಪ್ಪ, ಬಿದರಕುಂದಿ ನಿಂಗಪ್ಪ ಹಾಗೂ ಹಮಾಲಿ ತಿಮ್ಮಣ್ಣ ಅವರ ಸ್ಮರಣಾರ್ಥ ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ನಮನಗಳನ್ನು ಸಲ್ಲಿಸಲಾಯಿತು. ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಸೈನಿಕರಾದ ಕುಮಾರಸ್ವಾಮಿ ಆರ್., ರುದ್ರೇಗೌಡ ಎರೆಹಳ್ಳಿ ಹಾಗೂ ಬಸವರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅದೇ ರೀತಿ, 2026–27ನೇ ಸಾಲಿನ ಮಾಧ್ಯಮ ಪ್ರಶಸ್ತಿಗೆ ಭಾಜನರಾದ ಪತ್ರಕರ್ತರಾದ ಮಹಾದೇವ,  ಅಣ್ಣಪ್ಪ ಹಾಗೂ ವಿಡಿಯೋ ಜರ್ನಲಿಸ್ಟ್ ಶಿವರಾಜ್ ಇಳಿಗೆರೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಬಯಲುಸೀಮೆ ಮಾಜಿ ಅಧ್ಯಕ್ಷ ಅಣಬೇರು ಜೀವನಮೂರ್ತಿ,  ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್,  ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಬಿ. ರಮೇಶ್ ನಾಯಕ್, ದೋಗ್ಗಳ್ಳಿ ವೀರೇಶ್, ಗೋಪಾಲ್ ರಾವ್ ಮಾನೆ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಶಿವನಗೌಡ ಟಿ. ಪಾಟೀಲ್, ಶಂಕರಗೌಡ ಬಿರಾದರ್, ನವೀನಕುಮಾರ್ ಎಚ್.ಬಿ., ಬಾಲರಾಜ್ ಶ್ರೇಷ್ಠಿ, ಜಗದೀಶ್ ಎಚ್.ಎನ್., ಕುಮಾರ್ ಘಾಟ್ಗೆ, ಟಿಂಕರ್ ಮಂಜಣ್ಣ, ನರಸಿಂಹ, ಮಹೇಂದ್ರ ಹೆಬ್ಬಾಳ, ಶಿವಕುಮಾರ್ ದೇವರಡ್ಡಿ, ಗಾಂಧಿನಗರದ ಹನುಮಂತಪ್ಪ, ಪೈಲ್ವಾನ್ ಹನುಮಂತಪ್ಪ, ಗಣೇಶ್, ಗುಡ್ಡಪ್ಪ, ನನ್ನಯ್, 6ನೇ ಕಲ್ಲು ವಿಜಯ್ ಕಿಶೋರ್ ಕುಮಾರ್, ಪುಲೈ,ರಾಹುಲ್, ನಾಗರಾಜ್ , ಪಿಗ್ನಿ ಹನುಮಂತ, ವಿನಾಯಕ್, ಕುಮಾರ್ ಯೋಗೇಶ್, ಯರಗುಂಟೆ ಮಂಜುನಾಥ್, ಮಲ್ಲಿಕಾರ್ಜುನ, ನಿಂಗರಾಜ, ಮಂಜಾನಾಯ್ಕ, ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಚೇತನಾ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿಗಳಾದ ಭಾಗ್ಯ ಪಿಸಾಳೆ, ಮಮತಾ, ದಾಕ್ಷಾಯಿಣಮ್ಮ, ಮಂಜುಳಾ ಇಟಗಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles