ಮುಂಬೈ: ನಟಿಗೆ ಸಿನಿಮಾ ಅವಕಾಶ ನೀಡುವ ನೆಪದಲ್ಲಿ ಮನೆಗೆ ಕರೆಸಿಕೊಂಡು, ಮಾದಕ ದ್ರವ್ಯ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 73 ವರ್ಷದ ಬಾಲಿವುಡ್ ನಿರ್ದೇಶಕ ಶಕೀಲ್ ನೂರಾನಿ ಅವರನ್ನು ಮುಂಬೈನ ಮಾಲ್ವಾಣಿ ಪೊಲೀಸರು ಬಂಧಿಸಿದ್ದಾರೆ.
33 ವರ್ಷದ ನಟಿ ನೀಡಿದ ದೂರಿನನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿ ಶಕೀಲ್ ನೂರಾನಿಯನ್ನು ವಶಕ್ಕೆ ಪಡೆದಿದ್ದಾರೆ. ಮುಂಬೈನ ಮಾಲ್ವಾಣಿಯಲ್ಲಿರುವ ತಮ್ಮ ಮನೆಗೆ ನಟಿಯನ್ನು ಹೊಸ ಸಿನಿಮಾದ ಕಥೆ ಚರ್ಚಿಸುವ ನೆಪದಲ್ಲಿ ಕರೆಸಿಕೊಂಡಿದ್ದ ನಿರ್ದೇಶಕ, ಡ್ರಿಂಕ್ಸ್‌ನಲ್ಲಿ ಮಾದಕ ದ್ರವ್ಯ ಬೆರೆಸಿ ನೀಡಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ ಘಟನೆಯ ವಿಡಿಯೋ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಂಧಿತ ಆರೋಪಿಯನ್ನು ಬೊರಿವಲಿ ರಜಾಕಾಲದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆತನನ್ನು ಆಗಸ್ಟ್ 12 ರವರೆಗೆ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ. ಶಕೀಲ್ ನೂರಾನಿ ಅವರು ಹಿಂದಿಯ ‘ಬಡೆ ದಿಲ್ವಾಲಾ’ (1999) ಮತ್ತು ‘ಜೋರು ಕಾ ಗುಲಾಂ’ (2000) ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿ, ನಿರ್ಮಿಸಿದ್ದಾರೆ.
- Bade Dilwala director
- Bollywood director rape case
- Bollywood news
- Borivali court
- Joru Ka Ghulam
- Malvani police station
- Mumbai crime news
- Mumbai Police
- Shakeel Noorani
- Shakeel Noorani arrested
- ಜೋರು ಕಾ ಗುಲಾಂ
- ನಟಿ ಮೇಲೆ ಅತ್ಯಾಚಾರ
- ಬಡೆ ದಿಲ್ವಾಲಾ
- ಬಾಲಿವುಡ್ ನಿರ್ದೇಶಕ ಬಂಧನ
- ಬಾಲಿವುಡ್ ಮೀಟೂ
- ಬೊರಿವಲಿ ಕೋರ್ಟ್
- ಮಾಲ್ವಾಣಿ ಪೊಲೀಸ್
- ಮುಂಬೈ ಕ್ರೈಮ್
- ಮುಂಬೈ ಸುದ್ದಿ
- ಶಕೀಲ್ ನೂರಾನಿ





Leave a comment