SUDDIKSHANA KANNADA NEWS/ DAVANAGERE/ DATE: 08-09-2023
ದಾವಣಗೆರೆ (Davanagere): ಸೆಪ್ಟಂಬರ್ 10 ರಂದುನಗರ ದದೇವರಾಜ ಅರಸು ಬಡಾವಣೆಯಲ್ಲಿರುವ ಹಾಲಕೆರೆ ಶ್ರೀಅನ್ನದಾನೀಶ್ವರ ಶಾಖಾಮಠದಲ್ಲಿ ಲಿಂಗೈಕ್ಯ ಶ್ರೀಗುರು ಅನ್ನದಾನ ಮಹಾಸ್ವಾಮಿಗಳವರ 46ನೇಪುಣ್ಯಾರಾಧನೆ , ಲಿಂಗೈಕ್ಯ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳ ದ್ವಿತೀಯ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಅನ್ನದಾನೀಶ್ವರ ಮಠದ ಸಾರ್ವಜನಿಕ ಸೇವಾ ಟ್ರಸ್ಟಿನ ಅಧ್ಯಕ್ಷ ಅಥಣಿ . ಎಸ್. ವೀರಣ್ಣ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ಸಂದರ್ಭದಲ್ಲಿ 501 ಮುತ್ತೈದೆಮಹಿಳೆಯರಿಗೆ ಉಡಿ ತುಂಬುವುದು ಸೇರಿದಂತೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಈ ಸುದ್ದಿಯನ್ನೂ ಓದಿ:
ಕುಸಿಯುತ್ತಿದ್ದ ಅಡಿಕೆ (Areca nut) ಧಾರಣೆ ಏರಿಕೆ: 51 ಸಾವಿರ ಗಡಿ ದಾಟಿದ ಕ್ವಿಂಟಾಲ್ ಅಡಿಕೆ…!
ಶ್ರೀಅನ್ನದಾನೇಶ್ವರ ಸಂಸ್ಥಾನ ಮಠದ ಜಗದ್ಗುರು ಶ್ರೀಮನಿಪ್ರಮುಪ್ಪಿನಬಸವಲಿಂಗಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ನಾಡು ನುಡಿಗೆ ಸೇವೆ ಸಲ್ಲಿಸುತ್ತಿರುವ 8 ಗಣ್ಯರಿಗೆ ಗೌರವ ಶ್ರೀರಕ್ಷೆ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮಗಳಸಮಾರಂಭದ ನೇತೃತ್ವವನ್ನು ಆವರಗೊಳ್ಳಪುರ ಮಠದ ಶ್ರೀಓಂಕಾರಶಿವಾಚಾರ್ಯ ಮಹಾಸ್ವಾಮೀಜಿ ಅವರು ಸಾನಿಧ್ಯ ವಹಿಸುವರು ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಉಭಯಜಗದ್ಗುರುಗಳವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಮರ್ಪಿಸುವರು ಎಂದು ಹೇಳಿದರು.
ಲೋಕಸಭಾ ಸದಸ್ಯಡಾ. ಜಿ. ಎಂ. ಸಿದ್ದೇಶ್ವರ, ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕಡಾ. ಎ. ಹೆಚ್. ಶಿವಯೋಗಿಸ್ವಾಮಿ. ಹಿರಿಯ ವಕೀಲ ಮಿರ್ಜಾ ಇಸ್ಮಾಯಿಲ್ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಜಗದ್ಗುರುಗಳವರ ಮತ್ತುಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಕುರಿತು ಮಹಾಂತೇಶ್ಶಾಸ್ತೀ ಹಿರೇಮಠಕಲ್ಲೂರು ಇವರು ಉಪನ್ಯಾಸ ನೀಡಲಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.
ಶ್ರೀಸಿದ್ದಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಶಿಕ್ಷಣ ಶಿಲ್ಪಿ ಲಿಂಗೈಕ್ಯ ಎಂ. ಎಸ್. ಶಿವಣ್ಣನವರ” ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಕ್ಕಿ ವರ್ತಕ ಎ. ಬಿ. ಚಂದ್ರಶೇಖರ್ ಗೆ ವಾಣಿಜ್ಯ ಸಿರಿ, ಇಎಸ್ಐ ಆಸ್ಪತ್ರೆಯ ಅಧೀಕ್ಷಕ ಡಾ. ಬಸವನಗೌಡರುರಿಗೆ ವೈದ್ಯರತ್ನ, ಹಿರಿಯ ನ್ಯಾಯವಾದಿ, ಸಿನಿಮಾ ನಟರೂ ಆದ ಎಂ ವಿ. ರೇವಣಸಿದ್ದಯ್ಯನವರಿಗೆ ಕಾಯಕರತ್ನ, ಡಾ.ಮಂಜುನಾಥ ದೊಗ್ಗಳ್ಳಿಗೆ ಸಮಾಜ ಸೇವಾ ಚಿಂತಾಮಣಿ, ಖಾಲಿ ಚೀಲ ವ್ಯಾಪಾರಿಗಳಸಂಘದ ಮಾಜಿ ಅಧ್ಯಕ್ಷ ಎಂ. ಎಸ್. ಶರಣಪ್ಪರಿಗೆ ಕಾಯಕಸೌರಭ, ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಗಿ ರಾಧೇಶ್ ರಿಗೆ “ಗಣಕ ಶ್ರೇಷ್ಠ “, ಕನ್ನಡ ಭಾರತಿ ಸಂಪಾದಕ ಮಲ್ಲಿಕಾರ್ಜುನ್ ಕಬ್ಬೂರು ಅವರಿಗೆ ಪತ್ರಿಕೋದ್ಯಮ ಸಿರಿ ಹಾಗೂ ಟ್ರಸ್ಟಿನ ಹಿರಿಯ ಸದಸ್ಯ ಶಿವಪುತ್ರಪ್ಪ ಹೆರೂರು ನಾಗೂರು ಅವರಿಗೆ “ಕಾಯಕಜೀವಿ “ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದುಎಂದು ಮಾಹಿತಿ ನೀಡಿದರು.
1986 ರಲ್ಲಿ ಶ್ರೀಮಠ ದಾವಣಗೆರೆಯಲ್ಲಿ ಸ್ವಂತ ಕಟ್ಟಡ ಹೊಂದಿದ್ದುಅನೇಕ ಸಾರ್ವಜನಿಕ, ಸಾಮಾಜಿಕ, ಸಾಂಸ್ಕೃತಿಕಹಾಗೂ ಆಧ್ಯಾತ್ಮಿಕ ಸಮಾರಂಭವನ್ನು ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ವೀರಪ್ಪಎಂ.ಭಾವಿ, ಪ್ರಧಾನ ಕಾರ್ಯದರ್ಶಿ ಎನ್. ಅಡಿವೆಪ್ಪ, ಉಪಾಧ್ಯಕ್ಷರಾದ ಅಮರಯ್ಯ ಗುರುವಿನಮಠ, ಎನ್. ಶಿವಪುತ್ರಪ್ಪ, ನಾಗರಾಜ ಯರಗಲ್ ಮತ್ತಿತರರು ಉಪಸ್ಥಿತರಿದ್ದರು.