Home ಕ್ರೈಂ ನ್ಯೂಸ್ ಇಸ್ಮಾಯಿಲ್ ಮದುವೆ ಮುರಿದು ಬೀಳಲು ಆಂಟಿ ಜೊತೆಗಿನ ಸಹವಾಸ ಕಾರಣ, 14ರಿಂದ 15 ಮಹಿಳೆಯರಿಗೆ ಬೆದರಿಕೆ ಹಾಕ್ತಿದ್ದ: ಸಂತ್ರಸ್ತ ಮಹಿಳೆ ಸ್ಫೋಟಕ ಆರೋಪ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಇಸ್ಮಾಯಿಲ್ ಮದುವೆ ಮುರಿದು ಬೀಳಲು ಆಂಟಿ ಜೊತೆಗಿನ ಸಹವಾಸ ಕಾರಣ, 14ರಿಂದ 15 ಮಹಿಳೆಯರಿಗೆ ಬೆದರಿಕೆ ಹಾಕ್ತಿದ್ದ: ಸಂತ್ರಸ್ತ ಮಹಿಳೆ ಸ್ಫೋಟಕ ಆರೋಪ!

Share
ಮದುವೆ
Share

ದಾವಣಗೆರೆ: ಜಿಲ್ಲೆಯ ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನದ ಬಳಿಯಿರುವ ‘ಪವರ್ ಫಿಟ್ನೆಸ್ ಜಿಮ್’ ಮಾಲೀಕ ಇಸ್ಮಾಯಿಲ್ ವಿರುದ್ಧ ಕೇಳಿಬಂದಿರುವ ಆರೋಪಗಳ ಬೆನ್ನಲ್ಲೇ, ಸಂತ್ರಸ್ತ ಮಹಿಳೆಯೊಬ್ಬರು ಪತ್ರಿಕಾಗೋಷ್ಠಿ ನಡೆಸಿ ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.

ದಾವಣಗೆರೆ ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನದ ಪವರ್ ಫಿಟ್ನೆಸ್ ಜಿಮ್ ಮಾಲೀಕನ ಮೊದಲ ಮದುವೆ ಹಾಗೂ ಎರಡನೇ ಮದುವೆ ಮುರಿದು ಬೀಳಲು ನಾನು ಕಾರಣಳಲ್ಲ. ಆತನಿಗೆ ಹತ್ತು ವರ್ಷದ ಹಿಂದೆಯೇ ಆಂಟಿಯೊಬ್ಬರ ಜೊತೆ ಅಕ್ರಮ ಸಂಬಂಧ ಇತ್ತು. ಇದರಿಂದಾಗಿಯೇ ಮೊದಲ ಮದುವೆ ಮೂರು ತಿಂಗಳಲ್ಲಿಯೇ ಮುರಿದು ಬಿದ್ದಿತ್ತು. ಮಾತ್ರವಲ್ಲ, ನನ್ನಂತೆಯೇ ಸುಮಾರು 14 ರಿಂದ 15 ಹಿಂದೂ ಯುವತಿಯರು ಮತ್ತು ಮಹಿಳೆಯರಿಗೆ ಇಸ್ಮಾಯಿಲ್ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತ ಮಹಿಳೆ ಸ್ಫೋಟಕ ಆರೋಪ ಮಾಡಿದ್ದಾರೆ.

“ಆತನ ಮೊದಲ ಹಾಗೂ ಎರಡನೇ ಮದುವೆ ಮುರಿದು ಬೀಳಲು ನಾನು ಕಾರಣಳಲ್ಲ. ಆತನಿಗೆ ಹತ್ತು ವರ್ಷಗಳ ಹಿಂದೆಯೇ ಆಂಟಿಯೊಬ್ಬರ ಜೊತೆ ಅಕ್ರಮ ಸಂಬಂಧ ಇತ್ತು” ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.

ಹಿಂದೂ ಎಂದು ನಂಬಿಸಿ ಖೆಡ್ಡಾಕ್ಕೆ ಬೀಳಿಸುತ್ತಿದ್ದ!

ಸಂತ್ರಸ್ತೆ ನೀಡಿರುವ ಮಾಹಿತಿ ಪ್ರಕಾರ, ಆರೋಪಿ ಇಸ್ಮಾಯಿಲ್ ಜಿಮ್‌ಗೆ ಬರುವ ಯುವತಿಯರಿಗೆ ತನ್ನ ಹೆಸರನ್ನು ‘ಆಕಾಂಕ್ಷ್’ ಎಂದು ಪರಿಚಯಿಸಿಕೊಳ್ಳುತ್ತಿದ್ದ. ತಾನು ಹಿಂದೂ ಧರ್ಮದವನೆಂದು ನಂಬಿಸಿ, ಬಾಡಿ ಶೇಪ್ ಚೇಂಜ್ ಮಾಡಿಕೊಡುವ ಆಮಿಷ ಒಡ್ಡಿ ಯುವತಿಯರನ್ನು ತನ್ನ ಜಾಲಕ್ಕೆ ಬೀಳಿಸಿಕೊಳ್ಳುತ್ತಿದ್ದ. ಒಂದೂವರೆ ವರ್ಷದ ಹಿಂದೆ ಜಿಮ್‌ಗೆ ಹೋಗಿದ್ದ ತಾನು, ನಂತರ ಜಿಮ್ ಬದಲಾಯಿಸಿದಾಗಿನಿಂದ ಈ ಕಿರುಕುಳ ಹಾಗೂ ಬ್ಲ್ಯಾಕ್ ಮೇಲ್ ತಂತ್ರಗಳು ಶುರುವಾದವು ಎಂದು ಮಹಿಳೆ ತಿಳಿಸಿದ್ದಾರೆ.

ಡ್ರೆಸ್ ಬದಲಿಸುವ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್!

“ಹುಟ್ಟುಹಬ್ಬದ ಪಾರ್ಟಿಗೆ ಹೋದಾಗ ತೆಗೆದಿದ್ದ ಸೆಲ್ಫಿ ಹಾಗೂ ಜಿಮ್‌ನ ಡ್ರೆಸ್ಸಿಂಗ್ ರೂಮ್‌ನಲ್ಲಿ ಬಟ್ಟೆ ಬದಲಾಯಿಸುವ ವಿಡಿಯೋಗಳನ್ನು ಇಟ್ಟುಕೊಂಡು ಇಸ್ಮಾಯಿಲ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ತನ್ನ ಜೊತೆ ದೈಹಿಕ ಸಂಬಂಧ ಹೊಂದದಿದ್ದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ನನ್ನಂತೆ ಸುಮಾರು 14 ರಿಂದ 15 ಹಿಂದೂ ಯುವತಿಯರು ಹಾಗೂ ಮಹಿಳೆಯರಿಗೆ ಈತ ವಂಚಿಸಿದ್ದಾನೆ. ಕೆಲವರಿಂದ ಫೋನ್ ಪೇ ಹಾಗೂ ನಗದು ರೂಪದಲ್ಲಿ ಹಣವನ್ನೂ ವಸೂಲಿ ಮಾಡಿದ್ದಾನೆ” ಎಂದು ಸಂತ್ರಸ್ತೆ ಆಕ್ರೋಶ ಹೊರಹಾಕಿದ್ದಾರೆ.

ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಈಗಾಗಲೇ ಈ ಜಿಮ್ ಟ್ರೈನರ್ ಇಸ್ಮಾಯಿಲ್ ಜಾಲಕ್ಕೆ ಬಿದ್ದಿದ್ದ ಮೂವರು ಹೆಣ್ಣುಮಕ್ಕಳು ಧೈರ್ಯ ಮಾಡಿ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರ ಬಳಿಯೂ ಆರೋಪಿಗೆ ಸಂಬಂಧಿಸಿದ ವಿಡಿಯೋ ಸಾಕ್ಷ್ಯಗಳು ಲಭ್ಯವಿವೆ ಎನ್ನಲಾಗಿದೆ.

“ನನ್ನ ಗಂಡನಿಗೆ ಎರಡೂವರೆ ಲಕ್ಷ ರೂಪಾಯಿ ಸಂಬಳ ಇದೆ, ನನಗ್ಯಾಕೆ ಆತನ ಹಣ ಬೇಕು? ಸತ್ಯಾಸತ್ಯತೆ ತಿಳಿಯದೆ ನನ್ನ ಮೇಲೆ ಆರೋಪ ಮಾಡುವುದು ಸರಿಯಲ್ಲ. ಒಂದು ವೇಳೆ ಗಂಡ-ಹೆಂಡತಿ ಆತ್ಮಹತ್ಯೆ ಮಾಡಿಕೊಂಡರೆ ಯಾರು ಹೊಣೆ?” ಎಂದು ಸಂತ್ರಸ್ತೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ. ಪ್ರಕರಣದ ತನಿಖೆಯನ್ನು ವಿದ್ಯಾನಗರ ಪೊಲೀಸರು ಚುರುಕುಗೊಳಿಸಿದ್ದಾರೆ

Share

Leave a comment

Leave a Reply

Your email address will not be published. Required fields are marked *

Related Articles