Home ಕ್ರೈಂ ನ್ಯೂಸ್ BIG BREAKING: ನಿಧಿ ಆಸೆಗಾಗಿ ₹85 ಲಕ್ಷ ಕಳೆದುಕೊಂಡ ಮಹಾರಾಷ್ಟ್ರದ ಉದ್ಯಮಿ: ಚಿನ್ನದ ನಿಧಿ ಹೆಸರಲ್ಲಿ ₹85 ಲಕ್ಷಕ್ಕೆ ಮಕ್ಮಲ್ ಟೋಪಿ ಹಾಕಿದ್ದ ಗ್ಯಾಂಗ್ ಸೆರೆ, ₹62.25 ಲಕ್ಷ ನಗದು ಜಪ್ತಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

BIG BREAKING: ನಿಧಿ ಆಸೆಗಾಗಿ ₹85 ಲಕ್ಷ ಕಳೆದುಕೊಂಡ ಮಹಾರಾಷ್ಟ್ರದ ಉದ್ಯಮಿ: ಚಿನ್ನದ ನಿಧಿ ಹೆಸರಲ್ಲಿ ₹85 ಲಕ್ಷಕ್ಕೆ ಮಕ್ಮಲ್ ಟೋಪಿ ಹಾಕಿದ್ದ ಗ್ಯಾಂಗ್ ಸೆರೆ, ₹62.25 ಲಕ್ಷ ನಗದು ಜಪ್ತಿ!

Share
ನಿಧಿ
Share

ದಾವಣಗೆರೆ: ಹಳೇ ಕಾಲದ ಚಿನ್ನದ ನಿಧಿ ಸಿಕ್ಕಿದೆ ಎಂದು ಅಸಲಿ ಬಂಗಾರದ ತುಣುಕುಗಳನ್ನು ತೋರಿಸಿ ನಂಬಿಸಿ, ನಂತರ ಬರೋಬ್ಬರಿ ₹85 ಲಕ್ಷ ಹಣ ಪಡೆದು ನಕಲಿ ಬಂಗಾರ ನೀಡಿ ವಂಚಿಸಿದ್ದ ಅಂತರರಾಜ್ಯ ಮಟ್ಟದ ಖದೀಮರ ಜಾಲವನ್ನು ಭೇದಿಸುವಲ್ಲಿ ದಾವಣಗೆರೆ ಜಿಲ್ಲೆಯ ನ್ಯಾಮತಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ₹62.25 ಲಕ್ಷ ನಗದು ಹಣವನ್ನು ಜಪ್ತಿ ಮಾಡಲಾಗಿದೆ.

ವಂಚನೆಯ ಜಾಲ: ನಡೆದಿದ್ದೇನು?

ಪೋನ್ ಕರೆ ಹಾಗೂ ನಂಬಿಕೆ ದ್ರೋಹ: ಆರೋಪಿ ರಮೇಶ ಎಂಬಾತ ಫಿರ್ಯಾದುದಾರ ಶಿವಾನಂದಪ್ಪ ಅವರ ಸ್ನೇಹಿತ ವಿಜಯಕುಮಾರ್‌ಗೆ ಪೋನ್ ಮಾಡಿ, “ನಮ್ಮ ಹಳೇ ಕಾಲದ ಮನೆಯನ್ನು ಕೆಡವಿ ಪಾಯ ತೆಗೆಯುತ್ತಿರುವಾಗ ಬಂಗಾರದ ನಿಧಿ ಸಿಕ್ಕಿರುತ್ತದೆ. ಅದನ್ನು ನಿಮಗೆ ಕಡಿಮೆ ಬೆಲೆಗೆ ಕೊಡುತ್ತೇವೆ” ಎಂದು ನಂಬಿಸಿದ್ದನು.

ಅಸಲಿ ಸ್ಯಾಂಪಲ್ ಪರೀಕ್ಷೆ: ನಂಬಿಕೆ ಮೂಡಿಸಲು ಆರೋಪಿಗಳು ಮೊದಲು ಸ್ಯಾಂಪಲ್ ನೀಡಿದ್ದರು. ಶಿವಾನಂದಪ್ಪ ಮತ್ತು ವಿಜಯಕುಮಾರ್ ಅದನ್ನು ಪರೀಕ್ಷಿಸಿದಾಗ ಅದು ಅಸಲಿ ಬಂಗಾರವೆಂದು ದೃಢಪಟ್ಟಿತ್ತು.

ವಂಚನೆ ಮತ್ತು ಪಲಾಯನ: ಇದನ್ನು ನಂಬಿದ ಶಿವಾನಂದಪ್ಪ ಅವರು ದಿನಾಂಕ 28-06-2026 ರಂದು ಮಾಚಿಗೊಂಡನಹಳ್ಳಿ ಕೆರೆ ಹತ್ತಿರದ ತೋಟದಲ್ಲಿ ಆರೋಪಿಗಳನ್ನು ಭೇಟಿ ಮಾಡಿ ₹85 ಲಕ್ಷ ನಗದು ನೀಡಿದರು. ಆರೋಪಿಗಳು ಪ್ರತಿಯಾಗಿ ಅಂದಾಜು 1 ಕೆ.ಜಿ ತೂಕದ ನಕಲಿ ಬಂಗಾರದ ಬಿಲ್ಲೆಗಳಿದ್ದ ಕವರನ್ನು ನೀಡಿ ಸ್ಥಳದಿಂದ ಪರಾರಿಯಾಗಿದ್ದರು. ತದನಂತರ ಅದು ನಕಲಿ ಬಂಗಾರವೆಂದು ತಿಳಿದು ಶಿವಾನಂದಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದರು.

ಬಂಧಿತ ಆರೋಪಿಗಳು

  1. ಸಚಿನ್ ಗೋಂಧಳಿ @ ಸ್ಯಾಂಡಿ @ ರಮೇಶ (21 ವರ್ಷ), ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ.

  2. ಸಂದೀಪ (38 ವರ್ಷ), ನ್ಯಾಮತಿ ತಾಲ್ಲೂಕು, ದಾವಣಗೆರೆ ಜಿಲ್ಲೆ.

ತನಿಖೆಯ ವೇಳೆ ಇವರೊಂದಿಗೆ ಸೇರಿ ಕೃತ್ಯ ಎಸಗಿದ್ದ ಮತ್ತೊಬ್ಬ ಆರೋಪಿ ರವಿ (40 ವರ್ಷ, ನ್ಯಾಮತಿ ತಾಲ್ಲೂಕು) ಎಂಬಾತನ ಪಾತ್ರವೂ ಸಾಬೀತಾಗಿದ್ದು, ಬಂಧಿತ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಶಿವಾನಂದಪ್ಪ ಎಂಬುವವರ ಸ್ನೇಹಿತ ವಿಜಯಕುಮಾರ್ ಎಂಬುವವರಿಗೆ ಕರೆ ಮಾಡಿದ್ದ ಆರೋಪಿಗಳು, “ನಮ್ಮ ಹಳೇ ಮನೆಯ ಪಾಯ ತೆಗೆಯುವಾಗ ಚಿನ್ನದ ನಿಧಿ ಸಿಕ್ಕಿದೆ, ಅದನ್ನು ನಿಮಗೆ ಕಡಿಮೆ ಬೆಲೆಗೆ ನೀಡುತ್ತೇವೆ” ಎಂದು ಆಮಿಷ ಒಡ್ಡಿದ್ದರು. ಬಳಿಕ ಪರಿಶೀಲನೆಗಾಗಿ ಅಸಲಿ ಚಿನ್ನದ ಸ್ಯಾಂಪಲ್ ನೀಡಿದ್ದರು.

ಅದನ್ನು ಪರೀಕ್ಷಿಸಿ ಅಸಲಿ ಎಂದು ನಂಬಿದ ಶಿವಾನಂದಪ್ಪ ಅವರು ಮಾಚಿಗೊಂಡನಹಳ್ಳಿ ಕೆರೆ ಹತ್ತಿರದ ತೋಟದಲ್ಲಿ ಆರೋಪಿಗಳಿಗೆ ₹85 ಲಕ್ಷ ನೀಡಿ ಸುಮಾರು 1 ಕೆ.ಜಿ ತೂಕದ ಬಂಗಾರದ ಬಿಲ್ಲೆಗಳನ್ನು ಪಡೆದಿದ್ದರು. ಆದರೆ ವಂಚಕರು ನೀಡಿದ್ದು ನಕಲಿ ಬಂಗಾರ ಎಂದು ತಿಳಿದುಬಂದಾಗ ಸಂತ್ರಸ್ತರು ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಖದೀಮರ ಬಂಧನ: ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದ ಪೊಲೀಸರು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಚನ್ನಗಿರಿಯ ಸಚಿನ್ ಗೋಂಧಳಿ (21) ಹಾಗೂ ನ್ಯಾಮತಿಯ ಸಂದೀಪ (38) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮತ್ತೊಬ್ಬ ಆರೋಪಿ ರವಿ (40) ಎಂಬಾತನೊಂದಿಗೆ ಸೇರಿ ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

ತನಿಖಾ ತಂಡ ಮತ್ತು ಶ್ಲಾಘನೆ

ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಅವರ ಮಾರ್ಗದರ್ಶನದಲ್ಲಿ, ಚನ್ನಗಿರಿ ಉಪವಿಭಾಗದ ಡಿವೈಎಸ್‌ಪಿ ಬಸವರಾಜ್ ಬಿ.ಎಸ್ ಅವರ ಉಸ್ತುವಾರಿಯಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ.

ತಂಡದ ನೇತೃತ್ವ: ನ್ಯಾಮತಿ ಪೊಲೀಸ್ ಇನ್ಸ್‌ಪೆಕ್ಟರ್  ಸಿದ್ದೇಗೌಡ ಹೆಚ್.ಎಂ.

ಪ್ರಮುಖ ಅಧಿಕಾರಿಗಳು: ಪಿಎಸ್‌ಐಗಳಾದ  ಹೊಳಬಸಪ್ಪ ಹೋಳಿ, ಶೋಭಾರಾಣಿ ಮತ್ತು ಎಎಸ್‌ಐ  ಮಲ್ಲೇಶಪ್ಪ.

ತನಿಖಾ ಸಿಬ್ಬಂದಿ:

ವಿಕ್ರಂ, ಉಮೇಶ, ಉಮೇಶ, ಮಂಜಪ್ಪ ಕೆ, ಗಿರೀಶನಾಯ್ಕ, ರಂಗಪ್ಪ,  ಸುರೇಶ,  ಶಿವರಾಜ್, ಆನಂದ, ನಾಗರಾಜನಾಯ್ಕ,  ಮುರುಳಿ ಬಿ.ಎನ್., ಪ್ರಸನ್ನ ಕೆ, ಪ್ರವೀಣಕುಮಾರ, ರಾಮಪ್ಪ, ಪಂಪಾನಾಯ್ಕ,ಉಮೇಶ, ಬಸವರಾಜ್, ಪ್ರಶಾಂತ, ಮಹೇಶನಾಯ್ಕ,  ಚಂದ್ರಶೇಖರ್, ಹೇಮರಾಜ್,  ಚನ್ನೇಶ, ಪ್ರಶಾಂತ,  ರವಿಕುಮಾರ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿ ವರ್ಗ.

ಪೊಲೀಸ್ ವರಿಷ್ಠಾಧಿಕಾರಿಗಳ ಶ್ಲಾಘನೆ:

ಅತ್ಯಂತ ಕಡಿಮೆ ಅವಧಿಯಲ್ಲಿ ತಾಂತ್ರಿಕ ಹಾಗೂ ಬಾತ್ಮೀದಾರರ ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ, ಸಿಂಹಪಾಲು ನಗದು ಹಣವನ್ನು ವಶಪಡಿಸಿಕೊಂಡ ಇಡೀ ತಂಡದ ಸಮಯೋಚಿತ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles