ದಾವಣಗೆರೆ: ನಗರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆಪ್ಟೆಂಬರ್ 26 ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 3:00 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ.
ಇಲ್ಲಿ ಇರಲ್ಲ ಕರೆಂಟ್:
ಬಾರ್ ಲೈನ್ ರೋಡ್ , ಕಾಡಪ್ಪ ಕಣ, ಕಾಯಿ ಪೇಟೆ , ಎಂ.ಬಿ. ಕೆರೆ , ಹೊಂಡದ ಸರ್ಕಲ್ , ಚಲುವಾದಿಕೇರಿ , ಜಾಲಿ ನಗರ , ಟೀಚರ್ಸ್ ಕಾಲೋನಿ , ಶಿವಾಜಿ ನಗರ ,ದುರ್ಗಾಂಭಿಕ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ, ಸಂಬಂಧಪಟ್ಟ ಪ್ರದೇಶಗಳ ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಈ ಕಾಮಗಾರಿಗೆ ಸಹಕರಿಸಬೇಕಾಗಿ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ನಗರ ಉಪವಿಭಾಗ-2 ರ ವ್ಯಾಪ್ತಿಯ 66/11 ಕೆವಿ ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್18-ದುರ್ಗಾಂಭಿಕ ಫೀಡರ್ ಮಾರ್ಗದಲ್ಲಿ ‘ತುರ್ತು ಜಲಸಿರಿ ಕಾಮಗಾರಿ’ ಕೈಗೆತ್ತಿಕೊಳ್ಳುತ್ತಿರುವುದರಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು:
ಬಾರ್ ಲೈನ್ ರೋಡ್, ಕಾಡಪ್ಪ ಕಣ, ಕಾಯಿ ಪೇಟೆ, ಎಂ.ಬಿ. ಕೆರೆ, ಹೊಂಡದ ಸರ್ಕಲ್, ಚಲುವಾದಿಕೇರಿ, ಜಾಲಿ ನಗರ, ಟೀಚರ್ಸ್ ಕಾಲೋನಿ, ಶಿವಾಜಿ ನಗರ, ದುರ್ಗಾಂಭಿಕ ದೇವಸ್ಥಾನ ಹಾಗೂ ಇದರ ಸುತ್ತಮುತ್ತಲಿನ ಪ್ರದೇಶಗಳು.
ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಈ ನಿಗದಿತ ಅವಧಿಯಲ್ಲಿ ಮುನ್ನೆಚ್ಚರಿಕೆ ವಹಿಸಿ ಬೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸಬೇಕಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿನಂತಿಸಿದ್ದಾರೆ.





Leave a comment