Home ದಾವಣಗೆರೆ ಜೂನ್ 4ರ ನಾಳೆ ದಾವಣಗೆರೆ ನಗರದ ಪ್ರಮುಖ ಪ್ರದೇಶಗಳಲ್ಲಿ 8 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ
ದಾವಣಗೆರೆಬೆಂಗಳೂರು

ಜೂನ್ 4ರ ನಾಳೆ ದಾವಣಗೆರೆ ನಗರದ ಪ್ರಮುಖ ಪ್ರದೇಶಗಳಲ್ಲಿ 8 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ

Share
ದಾವಣಗೆರೆ
Share

ದಾವಣಗೆರೆ:ದಾವಣಗೆರೆ ಮತ್ತು ಕೆ.ವಿ ಯರಗುಂಟಾ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಬೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂನ್ 4 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ವಿದ್ಯುತ್ ನಿಲುಗಡೆ ಪ್ರಮುಖ ಪ್ರದೇಶಗಳು:

ದಾವಣಗೆರೆ ಮತ್ತು ಕೆ.ವಿ ಯರಗುಂಟಾ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಫೀಡರ್‌ಗಳಲ್ಲಿ ಬೆವಿಕಂ ವತಿಯಿಂದ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿAದ ಜೂನ್‌ 4 ರಂದು ಬೆಳಿಗ್ಗೆ 9 ರಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಕರೂರು ಇಂಡಸ್ಟ್ರೀಯಲ್‌ ಫೀಡರ್ ಮತ್ತು ಸುತ್ತಮುತ್ತಲ ಪ್ರದೇಶಗಳು, ಜಿಲ್ಲಾಧಿಕಾರಿಗಳ ಕಛೇರಿ , ಜಿ.ಎಮ್.ಐ.ಟಿ ಹಿಂಭಾಗ, ಸ್ಮಾರ್ಟ್ ಸಿ.ಟಿ ಆಫೀಸ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು. ಜಯನಗರ ಫೀಡರ್,ಇ.ಎಸ್.ಐ ಹಾಸ್ಪೀಟಲ್ ಸುತ್ತಮುತ್ತ.

ರಾಷ್ಟ್ರೋತ್ತನ ಶಾಲೆ, ದುರ್ಗಾಂಭಿಕಾ ದೇವಸ್ಥಾನ, ನಿಟ್ಟುವಳ್ಳಿ ಬಡಾವಣೆ, ಚಕ್ಕಿನಹಳ್ಳಿ ಬಡಾವಣೆ, 60 ಅಡಿ ರಸ್ತೆ, ಸೈಯದ್ ಪೀರ್ ಬಡಾವಣೆ, ಮೌನೇಶ್ವರ ಬಡಾವಣೆ, ಮಂಜುನಾಥ ಲೇಔಟ್, ಸರಸ್ವತಿ ಬಡಾವಣೆ ಬೆಸ್ಕಾಂ ಆಫೀಸ್ ದುರ್ಗಾಂಬಿಕಾ ಶಾಲೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು ಕಾಳಿದಾಸ ಸರ್ಕಲ್, ಜಯನಗರ ಬಿ ಮತ್ತು ಸಿ ಬ್ಲಾಕ್, ಚರ್ಚ್ ರೋಡ್, ಭಗಿರಥ ಸರ್ಕಲ್, ಮೋರ್, ಖಾದಿ ಕೇಂದ್ರ, ಆಂಜನೇಯ ದೇವಸ್ಥಾನ, ಕರಿಯಮ್ಮ ದೇವಸ್ಥಾನ ಮತ್ತು ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜು ಇರುವುದಿಲ್ಲವೆಂದು ಬೆಸ್ಕಾಂ ದಾವಣಗೆರೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ರವರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *