ದಾವಣಗೆರೆ: ಜಿಲ್ಲೆಯ ವಿವಿಧ ವಿದ್ಯುತ್ ಉಪಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಹಾಗೂ ತುರ್ತು ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಜೂನ್ 23 ರಂದು ಜಿಲ್ಲೆಯ ಪ್ರಮುಖ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ.
ಪ್ರದೇಶ ಮತ್ತು ಸಮಯದ ವಿವರಗಳು:
ಜಗಳೂರು, ಬಿದರಕೆರೆ, ಹಿರೇಮಲ್ಲನಹೊಳೆ ವ್ಯಾಪ್ತಿ (ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ): ಜಗಳೂರು ಟೌನ್ ಸೇರಿದಂತೆ ಈ ಕೇಂದ್ರಗಳ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ಎನ್‍ಜೆವೈ ಮತ್ತು ಐ.ಪಿ ಮಾರ್ಗಗಳಲ್ಲಿ ತುರ್ತು ಕೆಲಸ ನಡೆಯಲಿದೆ.
ದಾವಣಗೆರೆ ನಗರ ಮತ್ತು ಗ್ರಾಮೀಣ ಭಾಗಗಳು (ಬೆಳಿಗ್ಗೆ 10 ರಿಂದ ಸಂಜೆ 5:30 ರವರೆಗೆ): ಎಮ್.ಸಿ.ಸಿ.ಬಿ, ಶಾಬನೂರು ರಸ್ತೆ, ಎಸ್.ಎಸ್. ಲೇಔಟ್, ಕುವೆಂಪು ನಗರ, ಸಿದ್ದವೀರಪ್ಪ ಬಡಾವಣೆ, ಬಿ.ಐ.ಇ.ಟಿ ಕಾಲೇಜು ರಸ್ತೆ, ಮಂಡಿಪೇಟೆ, ಎಮ್ ಜಿ ರಸ್ತೆ, ನಿಟುವಳ್ಳಿ, ಜಯನಗರ, ಶಕ್ತಿನಗರ, ಪಿ.ಬಿ. ರಸ್ತೆ, ವಿನೋಬ ನಗರ, ಕುಂದುವಾಡ ರಸ್ತೆ, ಕರೂರು ಕೈಗಾರಿಕಾ ಪ್ರದೇಶ, ಡಿ.ಸಿ ಮತ್ತು ಎಸ್.ಪಿ ಕಚೇರಿಗಳು, ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಸುತ್ತಮುತ್ತಲಿನ ಗ್ರಾಮಗಳು.
ದಾವಣಗೆರೆ ನಗರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳು
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 5:30 ರವರೆಗೆ
ಕಾರಣ: 66/11 ಕೆ.ವಿ. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ಮತ್ತು ತುರ್ತು ನಿರ್ವಹಣಾ ಕಾಮಗಾರಿ.
ಬಾಧಿತ ಪ್ರಮುಖ ಪ್ರದೇಶಗಳು:
ನಗರದ ಪ್ರಮುಖ ಬಡಾವಣೆಗಳು: ಎಮ್.ಸಿ.ಸಿ.ಬಿ, ಶಾಬನೂರು ರಸ್ತೆ, ಎಸ್.ಎಸ್. ಲೇಔಟ್ (ಎ ಬ್ಲಾಕ್), ಕುವೆಂಪು ನಗರ, ಸಿದ್ದವೀರಪ್ಪ ಬಡಾವಣೆ (1 ರಿಂದ 7ನೇ ಅಡ್ಡರಸ್ತೆ), ಗ್ಲಾಸ್ ಹೌಸ್, ಬಿ.ಐ.ಇ.ಟಿ. ಕಾಲೇಜು ಸುತ್ತಮುತ್ತ, ವಿನೋಬ ನಗರ 1ನೇ ಮುಖ್ಯ ರಸ್ತೆ, ಶಾಂತಿ ನಗರ, ಬಸವೇಶ್ವರ ಬಡಾವಣೆ, ಮಹಾಲಕ್ಷ್ಮೀ ಬಡಾವಣೆ, ಬಾಲಾಜಿ ನಗರ.
ವ್ಯಾಪಾರ ಮತ್ತು ಪ್ರಮುಖ ರಸ್ತೆಗಳು: ಮಾಮಾಸ್ ಜಾಯಿಂಟ್ ರಸ್ತೆ, ಮಂಡಿಪೇಟೆ, ಬೆನ್ನೆ ಕಂಪನಿ ರಸ್ತೆ, ಎಮ್ ಜಿ ರಸ್ತೆ, ಎನ್ ಆರ್ ರಸ್ತೆ, ಮಹಾವೀರ ರಸ್ತೆ, ಪಿ.ಬಿ. ರಸ್ತೆ, ಕೆ.ಆರ್. ರಸ್ತೆ, ಆರ್.ಎಂ.ಸಿ. ಲಿಂಕ್ ರಸ್ತೆ, ಗುಜರಿ ಲೈನ್, ಬಂಬೂ ಬಜಾರ್, ಎಪಿಎಂಸಿ.
ಇತರ ಬಡಾವಣೆಗಳು: ಬಿ.ಟಿ. ಲೇಔಟ್, ಇಂದಿರಾ ನಗರ, ಸಿದ್ದರಾಮೇಶ್ವರ ಬಡಾವಣೆ, ಕಾರ್ಲ್ ಮಾರ್ಕ್ಸ್ ನಗರ, ಕೋಳಿ ಚನ್ನಪ್ಪ ಬಡಾವಣೆ, ನಿಟುವಳ್ಳಿ (ಹೊಸ ಬಡಾವಣೆ), ಜಯನಗರ, ಶಕ್ತಿನಗರ, ಇಮಾಮ್ ನಗರ, ಆನೆಕೊಂಡ, ಎಲ್.ಬಿ.ಎಸ್. ನಗರ, ಭಾರತ್ ಕಾಲೋನಿ, ಅಣ್ಣಾ ನಗರ.
ಪ್ರಮುಖ ಕಚೇರಿ/ಸಂಸ್ಥೆಗಳು: ಡಿ.ಸಿ. ಕಛೇರಿ, ಎಸ್.ಪಿ. ಕಛೇರಿ, ಆರ್.ಟಿ.ಓ. ಕಛೇರಿ, ಜಿ.ಎಂ.ಐ.ಟಿ, ಎಸ್.ಎಸ್. ಹೈಟೆಕ್ ಆಸ್ಪತ್ರೆ ರಸ್ತೆ, ಇ.ಎಸ್.ಐ ಆಸ್ಪತ್ರೆ, ಮಹಾನಗರ ಪಾಲಿಕೆ ಕುಡಿಯುವ ನೀರಿನ ಸ್ಥಾವರ, ದಾವಣಗೆರೆ ವಿಶ್ವವಿದ್ಯಾಲಯ.
ಸುತ್ತಮುತ್ತಲಿನ ಗ್ರಾಮಗಳು: ಕರೂರು ಇಂಡಸ್ಟ್ರಿಯಲ್ ಏರಿಯಾ, ಕುಂದುವಾಡ ಕೆರೆ ಪರಿಸರ, ಚಿತ್ತನಹಳ್ಳಿ, ಕಕ್ಕರಗೊಳ್ಳ, ಆವರಗೊಳ್ಳ, ನೀಲನಹಳ್ಳಿ, ದೊಡ್ಡಬಾತಿ, ಹಳೆಬಾತಿ, ಯರಗುಂಟಾ, ಕೋಡಿಹಳ್ಳಿ, ಮಾಗಾನಹಳ್ಳಿ, ಓಬಜ್ಜಿಹಳ್ಳಿ, ಕಡ್ಲೇಬಾಳು, ಅರಸಾಪುರ, ಆನಗೋಡು, ಹೆಬ್ಬಾಳು, ನೀರ್ಥಡಿ, ಶಿವಪುರ, ಹಾಲುವರ್ತಿ, ಅತ್ತಿಗೆರೆ, ಕುರ್ಕಿ, ಬಾಡ, ಕಬ್ಬೂರು, ಆವರಗೆರೆ, ಹೊನ್ನೂರು, ತೊಳಹುಣಸೆ ಮತ್ತು ಸುತ್ತಮುತ್ತಲಿನ ಗ್ರಾಮಗಳು.
ಕೆ.ವಿ.ಎಸ್.ಆರ್.ಎಸ್. ವಿದ್ಯುತ್ ಸ್ವೀಕರಣಾ ಕೇಂದ್ರದ ವ್ಯಾಪ್ತಿ
ಸಮಯ: ಬೆಳಿಗ್ಗೆ 9:00 ರಿಂದ ಸಂಜೆ 5:00 ರವರೆಗೆ
ಕಾರಣ: ಫೀಡರ್‌ಗಳಲ್ಲಿ ಬೆವಿಕಂ ವತಿಯಿಂದ ತುರ್ತು ಕಾಮಗಾರಿ.
ಬಾಧಿತ ಪ್ರದೇಶಗಳು:
ರಂಗನಾಥ ಬಡಾವಣೆ, ತರಳಬಳು ಬಡಾವಣೆ, ವಿದ್ಯಾನಗರ ಹಾಗೂ ವಿದ್ಯಾನಗರ ಮುಖ್ಯರಸ್ತೆ.
ನೂತನ್ ಕಾಲೇಜ್ ರಸ್ತೆ, ರವೀಂದ್ರನಾಥ ಪಾರ್ಕ್ ಹದಡಿ ರಸ್ತೆ ಮತ್ತು ಸುತ್ತಮುತ್ತ.
ಲೋಕಿಕೆರೆ ರಸ್ತೆ ಇಂಡಸ್ಟ್ರಿಯಲ್ ಏರಿಯಾ, ಪುನೀತ್ ರಾಜಕುಮಾರ್ ಬಡಾವಣೆ, ವರ್ಧಮಾನ್ ಮೆಟಲ್ ರೋಡ್, ಇಂಡಸ್ಟ್ರಿಯಲ್ ಸ್ಥಾವರಗಳು.
ದಾವಣಗೆರೆ ವೈಯರ್ ರೋಪ್ ರೋಡ್ ಹಾಗೂ ಎಫಲ್ ಟಫ್ ಇನ್‌ಸ್ಟಾಲೇಷನ್ ಪರಿಸರ.
ಕೆ.ವಿ.ಎಸ್.ಆರ್.ಎಸ್. ಕೇಂದ್ರದ ವ್ಯಾಪ್ತಿ (ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ): ರಂಗನಾಥ ಬಡಾವಣೆ, ತರಳಬಾಳು ಬಡಾವಣೆ, ವಿದ್ಯಾನಗರ, ಹದಡಿ ರಸ್ತೆ, ಲೋಕಿಕೆರೆ ರಸ್ತೆ ಇಂಡಸ್ಟ್ರಿಯಲ್ ಏರಿಯಾ ಮತ್ತು ಪುನೀತ್ ರಾಜಕುಮಾರ್ ಬಡಾವಣೆ ಸುತ್ತಮುತ್ತಲ ಪ್ರದೇಶಗಳು.
ಸಾರ್ವಜನಿಕರು ಹಾಗೂ ಕೈಗಾರಿಕಾ ಮಾಲೀಕರು ಬೆಸ್ಕಾಂ ಅಧಿಕಾರಿಗಳೊಂದಿಗೆ ಸಹಕರಿಸಬೇಕಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ.





Leave a comment