Home ದಾವಣಗೆರೆ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ: ದೆಹಲಿಯಲ್ಲಿ ₹1.52 ಲಕ್ಷ ದಾಟಿದ ಅಪರಂಜಿ ಬಂಗಾರ! ಬೆಂಗಳೂರು ದರ ಎಷ್ಟು?
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ: ದೆಹಲಿಯಲ್ಲಿ ₹1.52 ಲಕ್ಷ ದಾಟಿದ ಅಪರಂಜಿ ಬಂಗಾರ! ಬೆಂಗಳೂರು ದರ ಎಷ್ಟು?

Share
ಚಿನ್ನ
Share

ನವದೆಹಲಿ: ಜಾಗತಿಕ ಮಾರುಕಟ್ಟೆಯ ಧನಾತ್ಮಕ ಟ್ರೆಂಡ್ ಹಾಗೂ ಹೂಡಿಕೆದಾರರಿಂದ ವ್ಯಕ್ತವಾದ ಭಾರಿ ಬೇಡಿಕೆಯಿಂದಾಗಿ ದೇಶಾದ್ಯಂತ ಜೂನ್ 23ರ ಮಂಗಳವಾರದಂದು ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಮಾಹಿತಿ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೆರಿಗೆ ಒಳಗೊಂಡಂತೆ 24 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ ಬರೋಬ್ಬರಿ ₹1,52,300 ಮುಟ್ಟಿದೆ.

ಇನ್ನು ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್ (MCX) ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಆಗಸ್ಟ್ ತಿಂಗಳ ಒಪ್ಪಂದದ ಚಿನ್ನದ ದರವು ಬೆಳಗಿನ ಅವಧಿಯಲ್ಲಿ ಪ್ರತಿ 10 ಗ್ರಾಂಗೆ ₹1,48,182 ರಂತೆ ವಹಿವಾಟು ನಡೆಸುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಬೆಲೆಯು ಭಾರಿ ಚೇತರಿಕೆ ಕಂಡು ಪ್ರತಿ ಔನ್ಸ್‌ಗೆ 4,210.19 ಡಾಲರ್ ತಲುಪಿದೆ.

ಕರ್ನಾಟಕ ಹಾಗೂ ಪ್ರಮುಖ ನಗರಗಳ ಇಂದಿನ ಚಿನ್ನದ ದರ (ಪ್ರತಿ 10 ಗ್ರಾಂಗೆ):

ನಗರ / ರಾಜ್ಯ24 ಕ್ಯಾರೆಟ್ (24K)22 ಕ್ಯಾರೆಟ್ (22K)18 ಕ್ಯಾರೆಟ್ (18K)
ಬೆಂಗಳೂರು (ಕರ್ನಾಟಕ)₹1,46,510₹1,34,300₹109,880
ಚೆನ್ನೈ₹1,48,370₹1,36,000₹113,700
ದೆಹಲಿ₹1,46,660₹1,34,450₹110,030
ಮುಂಬೈ₹1,46,510₹1,34,300₹109,880
ಕೋಲ್ಕತಾ₹1,46,510₹1,34,300₹109,880
ಹೈದರಾಬಾದ್₹1,46,510₹1,34,300₹109,880

ಬೆಲೆ ಏರಿಕೆಗೆ ಕಾರಣವೇನು?

ಕಳೆದ ವಾರ ಸತತ ಕುಸಿತ ಕಂಡಿದ್ದ ಚಿನ್ನದ ದರಕ್ಕೆ ಜಾಗತಿಕ ರಾಜತಾಂತ್ರಿಕ ಬೆಳವಣಿಗೆಗಳು ಮರುಜೀವ ನೀಡಿವೆ. ಅಮೆರಿಕ ಹಾಗೂ ಇರಾನ್ ನಡುವೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ 60 ದಿನಗಳ ಕದನ ವಿರಾಮ ಮತ್ತು ಮಾತುಕತೆಯ ಆರಂಭಿಕ ಒಪ್ಪಂದವಾಗಿದ್ದರೂ, ಯುಎಸ್ ಬಡ್ಡಿದರ ದೀರ್ಘಕಾಲದವರೆಗೆ ಗರಿಷ್ಠ ಮಟ್ಟದಲ್ಲೇ ಉಳಿಯುವ ಮುನ್ಸೂಚನೆ ಹಾಗೂ ಭಾರತೀಯ ರೂಪಾಯಿ ಮೌಲ್ಯದ ಕುಸಿತವು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಲು ಪ್ರಮುಖ ಕಾರಣವಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಕಮೋಡಿಟಿ ತಜ್ಞರು ವಿಶ್ಲೇಷಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *