Home ಕ್ರೈಂ ನ್ಯೂಸ್ ದಾವಣಗೆರೆಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹12.92 ಲಕ್ಷ ಮೌಲ್ಯದ ಗಾಂಜಾ, MDMA ನಾಶ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹12.92 ಲಕ್ಷ ಮೌಲ್ಯದ ಗಾಂಜಾ, MDMA ನಾಶ!

Share
ದಾವಣಗೆರೆ
Share

ದಾವಣಗೆರೆ: ಜಿಲ್ಲೆಯನ್ನು ಮಾದಕ ಮುಕ್ತ (ನಶೆ ಮುಕ್ತ) ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದೆ. ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ, ಸಾಗಾಟ ಹಾಗೂ ಬಳಕೆ ಮಾಡುತ್ತಿದ್ದವರಿಂದ ವಶಪಡಿಸಿಕೊಳ್ಳಲಾಗಿದ್ದ ಒಟ್ಟು 12.92 ಲಕ್ಷ ರೂಪಾಯಿ ಮೌಲ್ಯದ ಮಾದಕ ದ್ರವ್ಯಗಳನ್ನು ಮಾನ್ಯ ನ್ಯಾಯಾಲಯದ ಅನುಮತಿ ಮೇರೆಗೆ ಯಶಸ್ವಿಯಾಗಿ ನಾಶಪಡಿಸಲಾಗಿದೆ.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 07 ಪ್ರಕರಣಗಳಿಗೆ ಸಂಬಂಧಿಸಿದಂತೆ ಜಪ್ತಿ ಮಾಡಲಾಗಿದ್ದ 5 ಕೆಜಿ 996 ಗ್ರಾಂ ಗಾಂಜಾ, 79 ಗ್ರಾಂ MDMA, ಮತ್ತು 175 ಗ್ರಾಂ OPIUM (ಅಫೀಮು) ಅನ್ನು ಪರಿಸರ ಅಧಿಕಾರಿಗಳು ಸೂಚಿಸಿದ ನಿಯಮಾವಳಿಗಳಂತೆ ಅಮರಾವತಿಯಲ್ಲಿರುವ ಸುಶಾಂತ್ ಎನ್ವಿರಾನ್‌ಮೆಂಟ್ ಟೆಕ್ನಾಲಜೀಸ್ (Sushanth Environment Technologies) ನಲ್ಲಿ ಸಂಪೂರ್ಣವಾಗಿ ನಾಶಪಡಿಸಲಾಯಿತು.

ಈ ಪ್ರಕ್ರಿಯೆಯು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶೇಖರ್ ಹೆಚ್.ಟಿ., ಐಪಿಎಸ್ ರವರ ನೇತೃತ್ವದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ  ಪರಮೇಶ್ವರ ಹೆಗಡೆ ಹಾಗೂ ಡ್ರಗ್ ಡಿಸ್ಪೋಸಲ್ ಕಮಿಟಿಯ ಸದಸ್ಯರು ಮತ್ತು ಪೊಲೀಸ್ ಉಪಾಧೀಕ್ಷಕರುಗಳಾದ (DySP)  ಬಸವರಾಜ್ ಬಿ.ಎಸ್., ಶರಣ ಬಸವೇಶ್ವರ ರವರ ಉಪಸ್ಥಿತಿಯಲ್ಲಿ ಮತ್ತು ಪಂಚರ ಸಮ್ಮುಖದಲ್ಲಿ ಜರುಗಿತು.

ಸಾರ್ವಜನಿಕರಿಗೆ ಎಸ್ಪಿ ಮನವಿ: ಮಾಹಿತಿ ನೀಡುವವರ ಹೆಸರು ಗೌಪ್ಯ

ದಾವಣಗೆರೆ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ, ಸಾಗಾಟ ಅಥವಾ ಮಾರಾಟ ಜಾಲ ಕಂಡುಬಂದರೆ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಎಸ್ಪಿ ಶ್ರೀಶೇಖರ್ ಹೆಚ್.ಟಿ. ಕೋರಿದ್ದಾರೆ. ಸಾರ್ವಜನಿಕರು ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕೃತ ಮೊಬೈಲ್ ಆಪ್ ಆದ ಕೆ ಎಸ್ ಪಿ ಆಪ್ (KSP App) ನಲ್ಲಿರುವ ‘Drug Free Karnataka’ ತಂತ್ರಾಂಶದ ಮೂಲಕವೂ ದೂರು ನೀಡಬಹುದು. ಮಾಹಿತಿ ನೀಡಿದ ಸಾರ್ವಜನಿಕರ ವಿವರಗಳನ್ನು ಸಂಪೂರ್ಣವಾಗಿ ಗುಪ್ತವಾಗಿಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *