Home ಉದ್ಯೋಗ ವಾರ್ತೆ ಐಟಿ ಉದ್ಯೋಗಿಗಳಿಗೆ ಎಚ್ಚರಿಕೆ: ಎಐ ತಂತ್ರಜ್ಞಾನದಿಂದ 1.5 ಕೋಟಿ ಜನರಿಗೆ ಉದ್ಯೋಗ ಬದಲಾವಣೆ ಭೀತಿ!
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ಐಟಿ ಉದ್ಯೋಗಿಗಳಿಗೆ ಎಚ್ಚರಿಕೆ: ಎಐ ತಂತ್ರಜ್ಞಾನದಿಂದ 1.5 ಕೋಟಿ ಜನರಿಗೆ ಉದ್ಯೋಗ ಬದಲಾವಣೆ ಭೀತಿ!

Share
ಉದ್ಯೋಗ
Share

ನವದೆಹಲಿ: ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ (Artificial Intelligence – AI) ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವುದು ಹೌದಾದರೂ, ಇದರಿಂದ ತಕ್ಷಣವೇ ಲಕ್ಷಾಂತರ ಉದ್ಯೋಗಗಳು ನಷ್ಟವಾಗಿ ‘ಉದ್ಯೋಗಗಳ ಅಂತ್ಯ’ (Job Apocalypse) ಸಂಭವಿಸಲಾರದು ಎಂದು ಜಾಗತಿಕ ಹಣಕಾಸು ಸಂಸ್ಥೆ ‘ಗೋಲ್ಡ್‌ಮನ್ ಸ್ಯಾಕ್ಸ್’ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಆದರೆ, ಮುಂದಿನ ಒಂದು ದಶಕದಲ್ಲಿ ಕಾರ್ಮಿಕ ಮಾರುಕಟ್ಟೆಯಲ್ಲಿ ಇದು ದೊಡ್ಡ ಮಟ್ಟದ ತಲ್ಲಣ ಸೃಷ್ಟಿಸಲಿದೆ ಎಂದು ಎಚ್ಚರಿಸಿದೆ.

1.5 ಕೋಟಿ ಉದ್ಯೋಗಿಗಳ ಮೇಲೆ ಪರಿಣಾಮ?

ಗೋಲ್ಡ್‌ಮನ್ ಸ್ಯಾಕ್ಸ್‌ನ ಪ್ರಮುಖ ಅರ್ಥಶಾಸ್ತ್ರಜ್ಞ ಜೋಸೆಫ್ ಬ್ರಿಗ್ಸ್ ಅವರ ಅಂದಾಜಿನ ಪ್ರಕಾರ, ಮುಂದಿನ 10 ವರ್ಷಗಳ ಎಐ ಪರಿವರ್ತನೆಯ ಅವಧಿಯಲ್ಲಿ ಅಮೆರಿಕವೊಂದರಲ್ಲೇ ಶೇಕಡಾ 9 ಕ್ಕಿಂತ ಹೆಚ್ಚು ಕಾರ್ಮಿಕರು ಅಂದರೆ ಸುಮಾರು 15 ಮಿಲಿಯನ್ (1.5 ಕೋಟಿ) ಉದ್ಯೋಗಿಗಳು ತಮ್ಮ ಪ್ರಸ್ತುತ ಕೆಲಸದಿಂದ ದೂರವಾಗಬಹುದು. ಆದರೆ ಈ ಬಿಕ್ಕಟ್ಟು ತಾತ್ಕಾಲಿಕವಾಗಿದ್ದು, ದೀರ್ಘಾವಧಿಯಲ್ಲಿ ಎಐ ತಂತ್ರಜ್ಞಾನವು ಹಳೆಯ ಉದ್ಯೋಗಗಳನ್ನು ಕಸಿದುಕೊಂಡರೂ, ಅಷ್ಟೇ ವೇಗದಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಐ ಅಲೆ ತಕ್ಷಣಕ್ಕೆ ಅಪ್ಪಳಿಸಲ್ಲ ಯಾಕೆ?

ಎಂಐಟಿ (MIT) ಫ್ಯೂಚರ್‌ಟೆಕ್ ಸಂಶೋಧನಾ ಯೋಜನೆಯ ನಿರ್ದೇಶಕ ನೀಲ್ ಥಾಂಪ್ಸನ್ ಅವರ ಪ್ರಕಾರ, ಎಐ ಅತ್ಯಂತ ಶಕ್ತಿಶಾಲಿ ತಂತ್ರಜ್ಞಾನವಾಗಿದ್ದರೂ ಸಹ, ಕಂಪನಿಗಳು ಅದನ್ನು ತಕ್ಷಣವೇ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಮುಖ್ಯ ಕಾರಣಗಳು:

  • ತಂತ್ರಜ್ಞಾನದ ಭಾರಿ ವೆಚ್ಚ (High Cost)

  • ಡೇಟಾ ಸುರಕ್ಷತೆಯ ಕೊರತೆ

  • ನಂಬಿಕಾರ್ಹತೆಯ ಸಮಸ್ಯೆಗಳು (Reliability Issues)

ಹೀಗಾಗಿ ಎಐ ಪ್ರಭಾವವು ತಕ್ಷಣವೇ ಅಪ್ಪಳಿಸುವ ‘ದೊಡ್ಡ ಅಲೆ’ಯಂತಿರದೆ, ನಿಧಾನವಾಗಿ ಏರುವ ‘ಉಬ್ಬರವಿಳಿತ’ದಂತೆ ಇರಲಿದ್ದು, ಉದ್ಯೋಗಿಗಳಿಗೆ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಸಮಯ ಸಿಗಲಿದೆ.

ಯಾರಿಗೆ ಹೆಚ್ಚು ರಿಸ್ಕ್?

ವರದಿಯ ಪ್ರಕಾರ, ಬಿಳಿ ವಸ್ತ್ರದಾರಿ ಉದ್ಯೋಗಗಳು (White-Collar Jobs) ಹಾಗೂ ಇತ್ತೀಚೆಗಷ್ಟೇ ಕಾಲೇಜು ಮುಗಿಸಿ ಹೊರಬಂದ ಅನುಭವ ರಹಿತ ಯುವ ಉದ್ಯೋಗಿಗಳಿಗೆ ಆರಂಭದಲ್ಲಿ ಎಐ ತಂತ್ರಜ್ಞಾನ ಸವಾಲಾಗಿ ಪರಿಣಮಿಸಬಹುದು. ಕಂಪನಿಗಳು ಕೇವಲ ಉದ್ಯೋಗಿಗಳನ್ನು ತೆಗೆದುಹಾಕಲು ಎಐ ಬಳಸುವ ಬದಲು, ಉದ್ಯೋಗಿಗಳ ಕಾರ್ಯಕ್ಷಮತೆ ಹೆಚ್ಚಿಸಲು (Augmentation) ಬಳಸಿದರೆ ಮಾತ್ರ ಮಾರುಕಟ್ಟೆ ಸಮತೋಲನದಲ್ಲಿರಲು ಸಾಧ್ಯ ಎಂದು ನೋಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಡಾರನ್ ಅಸೆಮೊಗ್ಲು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *