
ದಾವಣಗೆರೆ: ಜಿಲ್ಲೆಯ ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ವತಿಯಿಂದ ಎರಡು ನೂತನ ಮಾರ್ಗಗಳಲ್ಲಿ ಆರಂಭಿಸಲಾಗಿರುವ ಬಸ್ ಸೇವೆಗಳಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ದಾವಣಗೆರೆ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು.
ದಾವಣಗೆರೆಯಿಂದ ಜಾವಗಲ್ ಹಾಗೂ ನೊಣವಿನಕೆರೆಗೆ ಪ್ರತಿದಿನ ಬಸ್‌ಗಳು ಸಂಚರಿಸಲಿದ್ದು, ವಿಶೇಷವಾಗಿ ಜಾವಗಲ್ ದರ್ಗಾಕ್ಕೆ ತೆರಳುವ ಭಕ್ತಾದಿಗಳಿಗೆ ಹಾಗೂ ಮಾರ್ಗಮಧ್ಯದ ಪಟ್ಟಣ ಮತ್ತು ಗ್ರಾಮಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ನೂತನ ಬಸ್‌ಗಳ ಮಾರ್ಗ ಹಾಗೂ ವೇಳಾಪಟ್ಟಿ:
ಮಾರ್ಗ–1: ದಾವಣಗೆರೆ–ಚನ್ನಗಿರಿ–ಕಡೂರು–ಜಾವಗಲ್.
ದಾವಣಗೆರೆಯಿಂದ ನಿರ್ಗಮನ: ಬೆಳಿಗ್ಗೆ 8.30
•ಜಾವಗಲ್‌ಗೆ ಆಗಮನ: ಮಧ್ಯಾಹ್ನ 12.30
•ಜಾವಗಲ್‌ನಿಂದ ನಿರ್ಗಮನ: ಮಧ್ಯಾಹ್ನ 1.15
ದಾವಣಗೆರೆಗೆ ಆಗಮನ: ಸಂಜೆ 5.15
ಮಾರ್ಗ–2: ದಾವಣಗೆರೆ–ಹೊಳಲ್ಕೆರೆ–ಹೊಸದುರ್ಗ–ತಿಪಟೂರು–ನೊಣವಿನಕೆರೆ.
ದಾವಣಗೆರೆಯಿಂದ ನಿರ್ಗಮನ: ಬೆಳಿಗ್ಗೆ 6.50
ನೊಣವಿನಕೆರೆಗೆ ಆಗಮನ: ಬೆಳಿಗ್ಗೆ 11.45
ನೊಣವಿನಕೆರೆಯಿಂದ ನಿರ್ಗಮನ: ಮಧ್ಯಾಹ್ನ 1.00
•ದಾವಣಗೆರೆಗೆ ಆಗಮನ: ಸಂಜೆ 5.55
ಸಾರ್ವಜನಿಕರಿಗೆ ಸುಗಮ ಸಾರಿಗೆ ಸೌಲಭ್ಯ ಕಲ್ಪಿಸುವುದರ ಜತೆಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಸಾರಿಗೆ ಸಂಪರ್ಕವನ್ನು ಬಲಪಡಿಸುವುದು ನಮ್ಮ ಆದ್ಯತೆಯಾಗಿದೆ. ನೂತನ ಬಸ್ ಸೇವೆಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಕೋರಿದರು.
- DAVANAGERE NEWS
- Davanagere to Javagal Bus
- Davanagere to Nonavinakere Bus
- Karnataka State Road Transport Corporation
- KSRTC Bus Timings
- MP Dr. Prabha Mallikarjun
- New KSRTC Bus Service
- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ
- ಕೆಎಸ್‌ಆರ್‌ಟಿಸಿ ನೂತನ ಬಸ್
- ಜಾವಗಲ್ ದರ್ಗಾ ಬಸ್ ವೇಳಾಪಟ್ಟಿ
- ದಾವಣಗೆರೆ ಜಾವಗಲ್ ಬಸ್
- ದಾವಣಗೆರೆ ನೊಣವಿನಕೆರೆ ಬಸ್
- ದಾವಣಗೆರೆ ಸುದ್ದಿ
- ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್




